ಭಟ್ಕಳ: ಮದುವೆ ಕಾರ್ಯಕ್ರಮದ ನೆಪದಲ್ಲಿ ಪರಿಚಿತರಿಂದ ಕಾರು ಪಡೆದುಕೊಂಡು, ಬಳಿಕ ಅದನ್ನು ವಾಪಸ್ ನೀಡದೆ ಶಿರಾಳಕೊಪ್ಪದಲ್ಲಿ ಅಡವಿಟ್ಟು ವಂಚಿಸಿರುವ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಂಜಾನಗರದ ನಿವಾಸಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್ ಮಾವಿಜ್ ಮೊತೇಶಾಮ್ (31) ನೀಡಿದ ದೂರಿನ ಮೇರೆಗೆ ಬದ್ರಿಯಾ ಕಾಲನಿ ನಿವಾಸಿ ಹಸನ್ ಶಬ್ಬರ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಹಸನ್ ಶಬ್ಬರ, ಜೂನ್ 17ರಂದು ತನ್ನ ಮನೆಯಲ್ಲಿ ಮದುವೆ ಕಾರ್ಯಕ್ರಮವಿದೆ ಎಂದು ಹೇಳಿ ದೂರುದಾರರ KA-36/P-5531 ನೋಂದಣಿ ಸಂಖ್ಯೆಯ ಕಾರನ್ನು ಪಡೆದುಕೊಂಡು ಹೋಗಿದ್ದನು.
ಕಾರು ಪಡೆದು ತಿಂಗಳುಗಳು ಕಳೆದರೂ ವಾಪಸ್ ನೀಡದ ಕಾರಣ ವಿಚಾರಿಸಿದಾಗ, ಆತ ಕಾರನ್ನು ಶಿರಾಳಕೊಪ್ಪದಲ್ಲಿ ಬೇರೆಯವರ ಬಳಿ ಅಡವಿಟ್ಟಿರುವುದು ಬೆಳಕಿಗೆ ಬಂದಿದೆ.

ಕಾರನ್ನು ಮರಳಿಸದೆ ನಂಬಿಕೆ ದ್ರೋಹ ಎಸಗಿ ವಂಚಿಸಿರುವ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಅನ್ವಯ ಸೆಪ್ಟೆಂಬರ್ 28ರಂದು ಪ್ರಕರಣ ದಾಖಲಿಸಿಕೊಂಡಿರುವ ಭಟ್ಕಳ ಶಹರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
About The Author


More Stories
ಮೈಸೂರು ದಸರಾ ಕ್ರೀಡಾಕೂಟ: ಕರಾಟೆಯಲ್ಲಿ ಕಂಚಿನ ಪದಕ ಗೆದ್ದ ಭಟ್ಕಳದ ಪ್ರವೀಣ್ ಹರಿಜನ್
ನಾಗ ಮಾಸ್ತಿ ಕ್ಷೇತ್ರದಲ್ಲಿ ವೈಭವದ ಮಹಿಳಾ ದಸರಾ; ಪ್ರತಿಭೆ ಅನಾವರಣಕ್ಕೆ ವೇದಿಕೆ
ನಾಗ ಮಾಸ್ತಿ ಕ್ಷೇತ್ರದಲ್ಲಿ ಸಾಂಸ್ಕೃತಿಕ ವೇದಿಕೆಗೆ ಚಾಲನೆ; ಸನಾತನ ಸಂಸ್ಕೃತಿ ರಕ್ಷಣೆಗೆ ಒತ್ತು