ಕುಶಾಲನಗರ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕದ ವತಿಯಿಂದ ದಾನಿಗಳ ಸಹಕಾರದೊಂದಿಗೆ ಕುಶಾಲನಗರ ಜಾತ್ರೆ ಮೈದಾನದ ಗುಡಿಸಲು ನಿವಾಸಿಗಳಿಗೆ ಉಚಿತ ಆಹಾರ ಸಾಮಗ್ರಿ ಹಾಗೂ ತರಕಾರಿ ಕಿಟ್‌ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆಯಲಾಯಿತು.
ಕಳೆದ 18-20 ವರ್ಷಗಳಿಂದ ಜಾತ್ರೆ ಮೈದಾನದಲ್ಲಿ ಗುಡಿಸಲು ನಿರ್ಮಿಸಿಕೊಂಡು, ಕೂಲಿ ಕೆಲಸವನ್ನೇ ನಂಬಿ ಬದುಕುತ್ತಿರುವ ಅತ್ಯಂತ ಕಡುಬಡತನದ ಎಂಟು ಕುಟುಂಬಗಳ ಹಸಿವು ನೀಗಿಸಲು ಈ ನೆರವು ನೀಡಲಾಯಿತು.
ಫ್ರಾನ್ಸಿಸ್ ಡಿಸೋಜ (ಜಿಲ್ಲಾಧ್ಯಕ್ಷರು): “ಕಷ್ಟದಲ್ಲಿರುವ ನಿರ್ಗತಿಕರಿಗೆ ನೆರವಾಗುವುದು ಸಂಘಟನೆಗೆ ಆತ್ಮತೃಪ್ತಿ ನೀಡಿದೆ. ಕರವೇ ಸ್ವಾಭಿಮಾನಿ ಸೇನೆಯ ಪ್ರತಿಯೊಂದು ಸಾಮಾಜಿಕ ಕಾರ್ಯಕ್ಕೂ ನೆರವು ನೀಡುತ್ತಿರುವ ಕೂಪರ್ ಎಸ್ಟೇಟ್ ಮಾಲೀಕರಾದ ನಿಶಾಂತ್ ಅವರ ಸಹೃದಯತೆ ಶ್ಲಾಘನೀಯ.”
ಫಲಾನುಭವಿಯ ಭಾವುಕ ನುಡಿ: “ಒಂದೊಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ನಮಗೆ ತಾವಾಗಿಯೇ ಬಂದು ಆಹಾರ ಧಾನ್ಯ ನೀಡಿದ್ದು ಅಪಾರ ಸಂತೋಷ ತಂದಿದೆ. ನೆರವಾದ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ.”

ಕಾರ್ಯಕ್ರಮದಲ್ಲಿ ಕರವೇ ಸ್ವಾಭಿಮಾನಿ ಸೇನೆ ಉಪಾಧ್ಯಕ್ಷ ರಾಜಶೇಖರ್ ಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಜಿಲ್ಲಾ ಗೌರವಾಧ್ಯಕ್ಷ ನಂಜಪ್ಪ, ಕುಶಾಲನಗರ ತಾಲೂಕು ಅಧ್ಯಕ್ಷ ಶಿವು, ಕಾರ್ಮಿಕ ಘಟಕದ ಅಧ್ಯಕ್ಷ ಚಂದ್ರ, ತಾಲೂಕು ಉಪಾಧ್ಯಕ್ಷ ನಾಸಿರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಖಾಸಿಂ ಸೇರಿದಂತೆ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು.
About The Author


More Stories
ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ 83ನೇ ವಾರ್ಷಿಕ ಮಹಾಸಭೆ: ಶೇ 25 ಡಿವಿಡೆಂಡ್ ನೀಡಲು ಸಮ್ಮತಿ
ಮಡಿಕೇರಿ: ಸಂಚಾರಿ ಪೊಲೀಸರಿಗೆ ಉಚಿತ ರಿಫ್ಲೆಕ್ಟರ್ ಜಾಕೆಟ್ ವಿತರಣೆ, ಆರೋಗ್ಯ ತಪಾಸಣಾ ಶಿಬಿರ
ಕೊಡಗಿನ ಪ್ರಸಿದ್ಧ ಗೋಣಿಕೊಪ್ಪ ದಸರಾ ಉತ್ಸವ: 48ನೇ ಸಾಲಿನ ಲಾಂಛನ ಬಿಡುಗಡೆಗೊಳಿಸಿದ ಶಾಸಕ ಪೊನ್ನಣ್ಣ