ಹಾವೇರಿ: ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ಹಾವೇರಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಬೃಹತ್ ಸೇರ್ಪಡೆ ಕಾರ್ಯಕ್ರಮವು ನಗರದ ಶ್ರೀ ಹುಕ್ಕೇರಿ ಮಠದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ ದಾನಪ್ಪನವರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ರಾಮು ತಳವಾರ ಅವರು ಉದ್ಘಾಟಿಸಿ ಮಾತನಾಡಿದರು.
ರೈತರ ಹಿತರಕ್ಷಣೆಗೆ ಆಗ್ರಹ: ಜಿಲ್ಲೆಯಲ್ಲಿ ಬರಗಾಲದ ಛಾಯೆ ವ್ಯಾಪಿಸಿದ್ದು, ಮುಂಗಾರು ಬೆಳೆ ಇಳುವರಿ ಕುಸಿದು ರೈತರು ಸಂಕಷ್ಟದಲ್ಲಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣವೇ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸೂಕ್ತ ಮಾಹಿತಿ ರವಾನಿಸಿ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ರಾಮು ತಳವಾರ ಒತ್ತಾಯಿಸಿದರು.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಎಚ್ಚರಿಕೆ: ಸಂಕಷ್ಟದಲ್ಲಿರುವ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಹೆಚ್ಚುತ್ತಿದ್ದು, ಸಾರ್ವಜನಿಕರು ಭಯಪಡದೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ರಕ್ಷಣೆ ಪಡೆಯಬೇಕು ಎಂದು ಸಲಹೆ ನೀಡಿದರು.

ನೂತನ ಪದಾಧಿಕಾರಿಗಳ ಆಯ್ಕೆ: ಜಿಲ್ಲಾ ಕಾರ್ಯದರ್ಶಿಗಳಾಗಿ ಮಾಂತೇಶ್ ಕಾಳಿ, ವಿರುಪಾಕ್ಷಪ್ಪ ಮುರುಡೂರ, ಮೈಲಾರಪ್ಪ ಹಿರೇಕಣಗಿ, ರೇಣುಕಾ ಗಡಿಯಣ್ಣನವರ, ಮಂಗಳ ಗಾಣಿಗೇರ, ಮಂಜುಳಾ ತಳವಾರ, ಗೀತಾ ಜಿಂಗಿ, ಆಶಾ ಜೋಶಿ, ಶಿವಾನಂದ ಪೂಜಾರ, ಬಸವರಾಜ್ ಕೊಂಚಿಗೇರಿ, ಮಂಜುನಾಥ ಇಂಗಳಗಿ, ಮಂಜುನಾಥ ಬಸಳ್ಳಿ, ನಿಂಗನಗೌಡ ಇಂಗಳಗಿ, ಗಿರೀಶ್ ಮುಗಲಿ, ಲಲಿತಾ ಬ್ಯಾಡಗಿ ಹಾಗೂ ಗೀತಾ ಹಳಕೊಪ್ಪ ಸೇರಿದಂತೆ ಹಲವರನ್ನು ಜಿಲ್ಲಾ ಸಮಿತಿಗೆ ಹೊಸದಾಗಿ ನೇಮಕ ಮಾಡಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಎಮ್.ಕೆ. ತಿಮ್ಮಾಪುರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಕೆ. ಪುರದ, ಜಿಲ್ಲಾ ಮಹಿಳಾ ಗೌರವಾಧ್ಯಕ್ಷೆ ವಿಜಯ ಬಳ್ಳಾರಿ, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಕಾಗದ, ಜಿಲ್ಲಾ ರೈತ ಘಟಕದ ಅಧ್ಯಕ್ಷ ಪ್ರಕಾಶ್ ಹರಳಹಳ್ಳಿ, ಮಹಿಳಾ ಉಪಾಧ್ಯಕ್ಷೆ ಪ್ರೇಮ ಮುದಿಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಣ್ಣಯ್ಯ ಬಸಾಪುರ, ಹಾವೇರಿ ತಾಲೂಕು ಅಧ್ಯಕ್ಷ ಮಂಜುನಾಥ ಬಡಿಗೇರ, ಶಿಗ್ಗಾವಿ ತಾಲೂಕು ಅಧ್ಯಕ್ಷ ಸುರೇಶ್ ವನಹಳ್ಳಿ, ಹಾನಗಲ್ ಸಮಿತಿ ಅಧ್ಯಕ್ಷ ಉಮೇಶ್ ಗೌಡ್ರು ಮುದಿಗೌಡ್ರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
About The Author


More Stories