ಹೊನ್ನಾವರ: ತಾಲೂಕಿನ ಉಪ್ಪೋಣಿಯ ಶ್ರೀ ನಾಗಚಾಮುಂಡೇಶ್ವರಿ ಮತ್ತು ಪರಿವಾರ ದೇವರುಗಳ ಸನ್ನಿಧಿಯಲ್ಲಿ ದಿನಾಂಕ 11-10-2026ರ ರವಿವಾರದಿಂದ 20-10-2026ರವರೆಗೆ ಅತ್ಯಂತ ಶ್ರದ್ಧಾಭಕ್ತಿಯಿಂದ ಶರನ್ನವರಾತ್ರಿ ಉತ್ಸವವು ಜರುಗಲಿದೆ.
ಉತ್ಸವದ ಅಂಗವಾಗಿ ದಿನಾಂಕ 11-10-2026ರ ಭಾನುವಾರ ಪಲ್ಲವ ಪಾರಾಯಣದೊಂದಿಗೆ ನವರಾತ್ರಿ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ದಿನಾಂಕ 19-10-2026ರಂದು ರಾತ್ರಿ ದಂಡಾವಳಿ ಪೂಜೆ ನೆರವೇರಲಿದ್ದು, 20-10-2026ರಂದು ವಿಜಯದಶಮಿ ಉತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯೊಂದಿಗೆ ನವರಾತ್ರಿ ಮಹೋತ್ಸವವು ಸಂಪನ್ನಗೊಳ್ಳಲಿದೆ.
ಪ್ರತಿನಿತ್ಯದ ಕಾರ್ಯಕ್ರಮಗಳ ವಿವರ:
ಬೆಳಿಗ್ಗೆ 10:00 ಗಂಟೆಗೆ: ಪಲ್ಲವ ಪಾರಾಯಣ.

ಮಧ್ಯಾಹ್ನ 12:30 ಗಂಟೆಗೆ: ಮಹಾಪೂಜೆ ಹಾಗೂ ನಂತರ ಅನ್ನಸಂತರ್ಪಣೆ.
ರಾತ್ರಿ 09:00 ಗಂಟೆಗೆ: ಮಹಾಪೂಜೆ ನೆರವೇರಲಿದೆ.
ವಿಶೇಷ ಸೇವಾ ವಿವರಗಳು: ನವರಾತ್ರಿ ಉತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ನವರಾತ್ರಿ ಒಂದು ದಿನದ ವಿಶೇಷ ಪೂಜೆ , ಅನ್ನದಾನ ಸೇವೆ ,ಹೂವಿನ ಪೂಜೆ , ಮುತ್ತೈದೆಯರ ಊಟದ ಸೇವೆ , ಪಲ್ಲವ ಪಾರಾಯಣ , ಸಾಮೂಹಿಕ ಸತ್ಯನಾರಾಯಣ ಪೂಜೆ , ಉಡಿ ಸೇವೆ ಹಾಗೂ ತುಪ್ಪದ ದೀಪ ಸೇರಿದಂತೆ ವಿವಿಧ ವಿಶೇಷ ಸೇವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ವಿಶೇಷ ಪೂಜೆ ಸಲ್ಲಿಸಲು ಇಚ್ಛಿಸುವ ಭಕ್ತಾದಿಗಳು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕಾಗಿ ಪ್ರಧಾನ ಅರ್ಚಕರಾದ ಶ್ರೀ ರವಿ ಎನ್. ನಾಯ್ಕ್ ಉಪ್ಪೋಣಿ ಹಾಗೂ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480267243, 8073279667.
ವರದಿ: ಭಾವನಾ ಟಿವಿ ಡೆಸ್ಕ್
About The Author


More Stories
ಹಡಿನಬಾಳ ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ: ಸ್ವಚ್ಛತಾ ಕಾರ್ಯಕ್ರಮ ಹಾಗೂ ಸನ್ಮಾನ
‘ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು’: ರಾಜ್ಯ ಪ್ರಶಸ್ತಿ ಪುರಸ್ಕೃತೆ ಮಮತಾ ನಾಯ್ಕ್ಗೆ ಸನ್ಮಾನ
ಜಿಲ್ಲಾಮಟ್ಟದ ಕಬಡ್ಡಿ: ಅರೇಅಂಗಡಿ ಎಸ್.ಎಸ್.ಎಸ್.ಕೆ.ಪಿ. ಶಾಲೆಗೆ ರನ್ನರ್ ಅಪ್ — ವಿಭಾಗ ಮಟ್ಟಕ್ಕೆ 5 ವಿದ್ಯಾರ್ಥಿಗಳು ಆಯ್ಕೆ