October 22, 2026

ಶ್ರೀ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಅ.11ರಿಂದ ಶರನ್ನವರಾತ್ರಿ ಉತ್ಸವ

ಭಟ್ಕಳ: ಶ್ರೀ ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಇಲ್ಲಿನ ಶ್ರೀ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಅಕ್ಟೋಬರ್ 11ರ ಭಾನುವಾರದಿಂದ ಅಕ್ಟೋಬರ್ 20ರ ಮಂಗಳವಾರದವರೆಗೆ ಶರನ್ನವರಾತ್ರಿ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಲಿದೆ.

ಲೋಕ ಕಲ್ಯಾಣಾರ್ಥವಾಗಿ ನಡೆಯುವ ಈ ಧಾರ್ಮಿಕ ಉತ್ಸವವು ಅಕ್ಟೋಬರ್ 11ರಂದು ಘಟಸ್ಥಾಪನೆಯೊಂದಿಗೆ ಚಾಲನೆ ಪಡೆಯಲಿದ್ದು, ಪ್ರತಿದಿನ ಶ್ರೀ ದೇವಿ ಪಾರಾಯಣ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ ಸೇರಿದಂತೆ ವಿವಿಧ ವೈದಿಕ ವಿಧಿವಿಧಾನಗಳು ಹಾಗೂ ನಿತ್ಯ ಅನ್ನಸಂತರ್ಪಣೆ ಜರುಗಲಿದೆ.

ಅಕ್ಟೋಬರ್ 20ರಂದು ನವಚಂಡಿಕಾ ಹೋಮ: ಅಕ್ಟೋಬರ್ 20ರ ಮಂಗಳವಾರ ವಿಜಯದಶಮಿಯ ಪಾವನ ದಿನದಂದು ನವಚಂಡಿಕಾ ಹೋಮ, ಕುಮಾರಿಕಾ ಬಾಗಿನ ಪೂಜೆ, ದಂಪತಿ ಬಾಗಿನ ಪೂಜೆ ಮುಂತಾದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ನವರಾತ್ರಿ ಪರ್ವಕಾಲದಲ್ಲಿ ದೇವಿಯ ಸನ್ನಿಧಿಯಲ್ಲಿ ವಿಶೇಷ ಸೇವೆಗಳನ್ನು ಸಲ್ಲಿಸಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ ಭಕ್ತಾದಿಗಳು 8310093198 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವಿಯ ಮುಡಿಗಂಧ ಪ್ರಸಾದ ಸ್ವೀಕರಿಸಿ, ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯದ ಧರ್ಮದರ್ಶಿಗಳು ಕೋರಿದ್ದಾರೆ.                     ವರದಿ: ಭಾವನಾ ಟಿವಿ ಡೆಸ್ಕ್

About The Author

error: Content is protected !!