ಭಟ್ಕಳ: ಶಿಕ್ಷಣ ಹಾಗೂ ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ನಿರಂತರ ಹಾಗೂ ಗಣನೀಯ ಸೇವೆಯನ್ನು ಗುರುತಿಸಿ ಕೆಪಿಎಸ್ (KPS) ಬೈಲೂರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಭಟ್ಕಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಧರ್ಮ ನಾಯ್ಕ ಅವರಿಗೆ ಪ್ರತಿಷ್ಠಿತ ‘ಕಾಯಕ ರತ್ನ ರಾಜ್ಯ ಪ್ರಶಸ್ತಿ-2026’ ನೀಡಿ ಗೌರವಿಸಲಾಗಿದೆ.

ಪವರ್ ಆಫ್ ಯೂತ್ಸ್ ಫೌಂಡೇಶನ್, ಕರ್ನಾಟಕ ಇವರ ಆಶ್ರಯದಲ್ಲಿ ಧಾರವಾಡದ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ನಡೆದ ವಿವಿಧ ಇಲಾಖೆಗಳ ಸಾಧಕ ನೌಕರರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ‘ಅಂಚೆ ಪತ್ರ’ ಶೈಕ್ಷಣಿಕ ಕಿರುಚಿತ್ರ ಬಿಡುಗಡೆ ಸಮಾರಂಭದಲ್ಲಿ ಈ ಗೌರವ ಸಮರ್ಪಿಸಲಾಯಿತು.

ತಮ್ಮ ಸುದೀರ್ಘ ಸೇವಾವಧಿಯಲ್ಲಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುವುದರ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಧರ್ಮ ನಾಯ್ಕ ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಕ್ರೀಡಾಭಿಮಾನಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ: ಭಾವನಾ ಟಿವಿ ಡೆಸ್ಕ್

More Stories
ಭಟ್ಕಳ: ಆಹಾರ-ನೀರಿಲ್ಲದೆ ಮರಕ್ಕೆ ಕಟ್ಟಿಹಾಕಿದ್ದ ಎಂಟು ಜಾನುವಾರು; ಒಂದು ಎತ್ತು ಸಾವು, ಏಳು ಜಾನುವಾರುಗಳ ರಕ್ಷಣೆ
ಮುಟ್ಟಳ್ಳಿ ಬೈಪಾಸ್ನಲ್ಲಿ ಭೀಕರ ಅಪಘಾತ: ಕಾರು–ಪಿಕಪ್ ಮುಖಾಮುಖಿ ಡಿಕ್ಕಿ; ಏಳು ಮಂದಿಗೆ ಗಾಯ
ಪ್ರಜಾಸೇವಾ ಸಭೆಯ ಎಲ್ಲಾ ಅರ್ಜಿಗಳಿಗೂ ಸೂಕ್ತ ಸ್ಪಂದನೆ; 15 ದಿನಗಳಲ್ಲಿ ವಿಲೇವಾರಿಗೆ ಸೂಚನೆ: ಮಂಕಾಳ ವೈದ್ಯ