ಕುಮಟಾ: ಯುವಸೇನಾ ಗೆಳೆಯರ ಬಳಗದ ವತಿಯಿಂದ ಕಳೆದ 6 ವರ್ಷಗಳಿಂದ ಯಶಸ್ವಿಯಾಗಿ ನೆರವೇರಿಕೊಂಡು ಬಂದಿರುವ ಅದ್ಧೂರಿ ಶಾರದೋತ್ಸವ ಮಹೋತ್ಸವವು ಈ ವರ್ಷ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ದಿನಾಂಕ ಅಕ್ಟೋಬರ್ 16 ಶುಕ್ರವಾರ ಹಾಗೂ ಅಕ್ಟೋಬರ್ 17 ಶನಿವಾರದಂದು ವಿಜೃಂಭಣೆಯಿಂದ ಜರುಗಲಿದೆ.
ಎರಡು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಚಿಕ್ಕ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮ ಹಾಗೂ ಭಕ್ತಾದಿಗಳು ತಮ್ಮ ಮನೆಗಳಿಂದ ಆರತಿಯನ್ನು ತಂದು ಶಾರದಾ ಮಾತೆಗೆ ಬೆಳಗುವುದು ಈ ಶಾರದೋತ್ಸವದ ಪ್ರಮುಖ ವಿಶೇಷತೆಯಾಗಿದೆ.
ಕಾಶಿ ಮಾದರಿಯಲ್ಲಿ ‘ಶಾರದಾರತಿ’: ಉತ್ಸವದ ಎರಡನೇ ದಿನವಾದ ಅಕ್ಟೋಬರ್ 17 ಶನಿವಾರದಂದು ಶಾರದಾ ದೇವಿಯ ವಿಸರ್ಜನೆ ಸಮಯದಲ್ಲಿ, ಪ್ರಸಿದ್ಧ ಕಾಶಿಯಲ್ಲಿ ನಡೆಯುವ ಗಂಗಾ ಆರತಿಯ ಮಾದರಿಯಲ್ಲಿ ಅತ್ಯಂತ ವೈಭವಪೂರಿತ ‘ಶಾರದಾರತಿ’ ಕಾರ್ಯಕ್ರಮ ನೆರವೇರಲಿದೆ.
ಈ ಎರಡು ದಿನಗಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರ್ವಕಾಲದಲ್ಲಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಶಾರದಾ ಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ಯುವಸೇನಾ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರೀತಿಯ ಆಹ್ವಾನ ನೀಡಿದ್ದಾರೆ.

ವರದಿ: ಭಾವನಾ ಟಿವಿ ಡೆಸ್ಕ್
About The Author


More Stories
ಸೌ|| ಕಮಲಾಬಾಯಿ ಪಿಕಳೆ ಹೈಸ್ಕೂಲ್ ವಿದ್ಯಾರ್ಥಿಗಳ ಭರ್ಜರಿ ಸಾಧನೆ; 5 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಬರ್ಗಿ ಪ್ರೌಢ ಶಾಲೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ವಾಟರ್ ಬಾಟಲ್ ಕೊಡುಗೆ
ಬಾಪು ಸದ್ಭಾವನಾ ಪುರಸ್ಕಾರಕ್ಕೆ ಡಾ. ಶ್ರೀನಿವಾಸ ನಾಯಕ ಹಾಗೂ ಗಾಯತ್ರಿ ಗೌಡ ಆಯ್ಕೆ