October 22, 2026

ವಿನಂತಿ ಈಶ್ವರ ಹರಿಕಾಂತಗೆ ‘ಶ್ರೀ ಚಾಮುಂಡೇಶ್ವರಿ ಬಾಲ ಸದ್ಭಾವನಾ’ ರಾಷ್ಟ್ರ ಪ್ರಶಸ್ತಿ

ಮಂಗಳೂರು: ಸಾಂಸ್ಕೃತಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ಮಂಗಳೂರು ಅಸೈಗೊಳಿಯ ಕರಾವಳಿ ಪ್ರತಿಭೆ ವಿನಂತಿ ಈಶ್ವರ ಹರಿಕಾಂತ ಅವರು ಪ್ರತಿಷ್ಠಿತ ‘ಶ್ರೀ ಚಾಮುಂಡೇಶ್ವರಿ ಬಾಲ ಸದ್ಭಾವನಾ ರಾಷ್ಟ್ರ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಸಮೀಪದ ಅಸೈಗೊಳಿಯ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ (ಕೆಎಸ್‌ಆರ್‌ಪಿ) ಹೆಡ್ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಈಶ್ವರ್ ಹರಿಕಾಂತ ಹಾಗೂ ಆರತಿ ದಂಪತಿಯ ಪುತ್ರಿ ವಿನಂತಿ ಅವರಿಗೆ ಈ ಅಪರೂಪದ ಗೌರವ ಒಲಿದುಬಂದಿದೆ.

ಮೈಸೂರು ದಸರಾ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ: ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ವತಿಯಿಂದ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನೀಡಲಾಗುವ ಈ ಪ್ರಶಸ್ತಿಯನ್ನು ಅಕ್ಟೋಬರ್ 18ರಂದು ಮೈಸೂರಿನ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಲಿರುವ ‘ಮೈಸೂರು ಸಿರಿ ದಸರಾ ಸಾಂಸ್ಕೃತಿಕ ಉತ್ಸವ’ದಲ್ಲಿ ವಿನಂತಿ ಅವರಿಗೆ ಪ್ರದಾನ ಮಾಡಲಾಗುವುದು.

ಸಾಂಸ್ಕೃತಿಕ ರಂಗದಲ್ಲಿ ಕರಾವಳಿಯ ಹೆಮ್ಮೆಯ ಮಗಳಾಗಿ ಬೆಳೆದು ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವ ವಿನಂತಿ ಈಶ್ವರ ಹರಿಕಾಂತ ಅವರ ಸಾಧನೆಗೆ ಕುಟುಂಬಸ್ಥರು, ಕೆಎಸ್‌ಆರ್‌ಪಿ ಸಿಬ್ಬಂದಿ ಹಾಗೂ ಕಲಾಭಿಮಾನಿಗಳಿಂದ ಹರ್ಷ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ವರದಿ: ಭಾವನಾ ಟಿವಿ ಡೆಸ್ಕ್

About The Author

error: Content is protected !!