ಭಟ್ಕಳ: ತಾಲೂಕಿನ ಶಿರಾಲಿಯ ಮಠದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ದ್ವಿತೀಯ ವರ್ಷದ ತಾಲೂಕು ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯು ಅತ್ಯಂತ ಉತ್ಸಾಹದಿಂದ ಜರುಗಿತು.
ಕಿರಿಯ ಹಾಗೂ ಹಿರಿಯ ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಅಭಿನಂದನಾ ಪತ್ರ ವಿತರಿಸಲಾಯಿತು. ಅಲ್ಲದೆ, ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ವಿಜೇತರ ವಿವರ: ಕಿರಿಯರ ವಿಭಾಗ: ಸಮುದ್ ಪೈ (ಪ್ರಥಮ), ಭಾರತಿ ರಾಘವೇಂದ್ರ ಗಾಯತೊಂಡೆ (ದ್ವಿತೀಯ); ಅನಘಾ ನಾಗರಾಜ ಮಧ್ಯಸ್ಥ ಹಾಗೂ ವಿದಿತಿ ಗುರುರಾಜ ಗಾಣಿಗ (ತೃತೀಯ – ಜಂಟಿ).
ಹಿರಿಯರ ವಿಭಾಗ: ತ್ರಿಶಾ ಎನ್. ಮೊಗೇರ (ಪ್ರಥಮ), ಪಾವನಿ ರಾಘವೇಂದ್ರ ಗಾಯತೊಂಡೆ (ದ್ವಿತೀಯ).

ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಕರೆ ನೀಡಿದೆ. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ನಾಯ್ಕ, ಗೌರವಾಧ್ಯಕ್ಷ ಶಿವಾನಂದ ಕಾಮತ್, ಪ್ರಧಾನ ಅರ್ಚಕ ಸಿ.ಎಂ. ಭಟ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ದೇವಿದಾಸ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ದೇವಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾದ ಈ ಸ್ಪರ್ಧೆಗೆ ಸಾರ್ವಜನಿಕ ವಲಯದಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.
About The Author


More Stories
ರಾಷ್ಟ್ರೀಯ ಪೊಲೀಸ್ ಬೈಕ್ ರ್ಯಾಲಿಗೆ ಅದ್ಧೂರಿ ಸ್ವಾಗತ; ‘ಮಾದಕವಸ್ತು ಮುಕ್ತ ಭಾರತ’ಕ್ಕೆ ಜಾಗೃತಿ
ಅಭಿಮಾನಿಯ ಮನೆಗೆ ಭೇಟಿ ನೀಡಿ ದುರ್ಗಾದೇವಿ ದರ್ಶನ ಪಡೆದ ಉಪಸಭಾಪತಿ ಮಂಕಾಳ ವೈದ್ಯ
ಮೈಸೂರು ದಸರಾ ಕ್ರೀಡಾಕೂಟ: ಕರಾಟೆಯಲ್ಲಿ ಕಂಚಿನ ಪದಕ ಗೆದ್ದ ಭಟ್ಕಳದ ಪ್ರವೀಣ್ ಹರಿಜನ್