
ಭಟ್ಕಳ: ತಾಲೂಕಿನ ಶಿರಾಲಿಯಲ್ಲಿ ಜಾಗದ ವಿಚಾರವಾಗಿ ಉಂಟಾದ ಕ್ಷುಲ್ಲಕ ಗಲಾಟೆ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಏಳು ಜನರ ವಿರುದ್ಧ ದೂರು ದಾಖಲಾಗಿದೆ.

ಹಲ್ಲೆಗೊಳಗಾದ ಶಿರಾಲಿ ನಿವಾಸಿ ರಮೇಶ ಮಾಸ್ತಪ್ಪ ನಾಯ್ಕ (೫೦) ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆಯ ವಿವರ: ರಮೇಶ ಅವರು ಶಿರಾಲಿಯಿಂದ ಗುಡಿಹಿತ್ತಲಿನಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಾಗ, ಮಾರ್ಗಮಧ್ಯೆ ಪರಿಚಯದ ಗಿರೀಶ ಶೆಟ್ಟಿ ಅವರ ಜಾಗದ ಬಳಿ ಮಣ್ಣಿನ ಲಾರಿ ಬಂದಿರುವ ವಿಷಯವಾಗಿ ಗಿರೀಶ ಶೆಟ್ಟಿ ಹಾಗೂ ಸ್ಥಳೀಯರ ನಡುವೆ ಮಾತುಕತೆ ನಡೆಯುತ್ತಿತ್ತು.

ಈ ವೇಳೆ ಸ್ಥಳಕ್ಕೆ ತೆರಳಿದ ರಮೇಶ ಅವರನ್ನು ಆರೋಪಿ ದೇವರಾಜ ನಾಯ್ಕ ಎಂಬಾತ ತಡೆದು, “ಇದು ನಿನ್ನ ಜಾಗವಲ್ಲ, ನೀನು ಇಲ್ಲಿಗೆ ಏಕೆ ಬಂದಿದ್ದೀಯಾ?” ಎಂದು ಪ್ರಶ್ನಿಸಿ ಜಗಳ ತೆಗೆದಿದ್ದಾನೆ. ಬಳಿಕ ಇತರ ಆರೋಪಿಗಳೊಂದಿಗೆ ಸೇರಿ ರಮೇಶ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ದೇವರಾಜ ಈಶ್ವರ ನಾಯ್ಕ, ಕಿರಣ ನಾಯ್ಕ, ರವಿ ನಾಯ್ಕ, ನಾರಾಯಣ ನಾಗಪ್ಪ ನಾಯ್ಕ, ಮೊಹಮ್ಮದ್ ಅಸ್ಲಂ, ಚಂದು ಕುಮಾರ ನಾಯ್ಕ ಹಾಗೂ ತರುಣ ಪರಮೇಶ್ವರ ನಾಯ್ಕ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!