November 22, 2026

ಸಮ್ಯಕ್ ಗುರುಕುಲ ವಿದ್ಯಾರ್ಥಿಗಳಿಂದ ಶ್ರೇಷ್ಠ ಸಂಗೀತ ಬೈಠಕ್

ಐದು ದಿನಗಳ ಸಾಮವೇದ ಪಾರಾಯಣದ ಅಂಗವಾಗಿ ಕಲಾ ಸೇವೆ

ಭಟ್ಕಳ: ತಾಲೂಕಿನ ಕಿತ್ರೆಯ ಉಮೇಶ ಭಟ್ಟ ಅವರ ನಿವಾಸದ ಆವರಣದಲ್ಲಿ ಸಮ್ಯಕ್ ಗುರುಕುಲದ ಸಂಗೀತ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ಸಂಗೀತ ಬೈಠಕ್ ಯಶಸ್ವಿಯಾಗಿ ನಡೆಯಿತು.

ಉಮೇಶ ಭಟ್ಟ ಅವರ ಮನೆಯಲ್ಲಿ ಆಯೋಜಿಸಲಾಗಿದ್ದ ಐದು ದಿನಗಳ ಸಾಮವೇದ ಪಾರಾಯಣದ ಶುಭ ಸಂದರ್ಭದಲ್ಲಿ ಈ ಸಂಗೀತ ಕಾರ್ಯಕ್ರಮ ನಡೆಯಿತು. ಬೈಠಕ್‌ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ತಬಲಾದಲ್ಲಿ ಶ್ರೀರಕ್ಷಾ ಶ್ರೀಕರ ಹಾಗೂ ಕಪಿಲ ಸಾಥ್ ನೀಡಿದರೆ, ಹಾರ್ಮೋನಿಯಂನಲ್ಲಿ ಪ್ರತಿಭಾ ಹೆಬ್ಬಾರ್ ಮತ್ತು ಸುಮಂತ್ ಸಹಕರಿಸಿದರು. ಇದೇ ವೇಳೆ ಉಮೇಶ ಭಟ್ಟ ಅವರ ಕುಟುಂಬಸ್ಥರಿಂದಲೂ ಸಂಗೀತ ಸೇವೆ ನೆರವೇರಿತು.

೧೦ ಸಂಗೀತ ಬೈಠಕ್ ಆಯೋಜನೆಗೆ ಯೋಜನೆ: ಈ ಸಂದರ್ಭದಲ್ಲಿ ಮಾತನಾಡಿದ ಸಮ್ಯಕ್ ಗುರುಕುಲ ಸಂಗೀತ ಶಾಲೆಯ ಮುಖ್ಯಸ್ಥ ವಿದ್ವಾನ್ ಗಜಾನನ ಹೆಬ್ಬಾರ್, “ಇದು ನಮ್ಮ ವಿದ್ಯಾರ್ಥಿಗಳ ಪ್ರಥಮ ಬೈಠಕ್ ಆಗಿದ್ದು, ಒಟ್ಟಾರೆಯಾಗಿ ೧೦ ಬೈಠಕ್‌ಗಳನ್ನು ಆಯೋಜಿಸುವ ಯೋಜನೆ ಹೊಂದಲಾಗಿದೆ. ವಿದ್ಯಾರ್ಥಿಗಳು ಈ ವೇದಿಕೆಯ ಸದುಪಯೋಗ ಪಡೆದುಕೊಂಡು ತಮ್ಮ ಕಲಾ ಪ್ರತಿಭೆಯನ್ನು ಮತ್ತಷ್ಟು ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

ವಿದ್ಯಾರ್ಥಿಗಳ ಪ್ರದರ್ಶನದ ಬಳಿಕ ನಡೆದ ವಿದ್ವಾನ್ ಗಜಾನನ ಹೆಬ್ಬಾರ್ ಅವರ ಗಾಯನ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಇವರಿಗೆ ತಬಲಾದಲ್ಲಿ ಎನ್.ಜಿ. ಹೆಗಡೆ ಕಪ್ಪೆಕೆರೆ ಹಾಗೂ ಹಾರ್ಮೋನಿಯಂನಲ್ಲಿ ಪ್ರತಿಭಾ ಹೆಬ್ಬಾರ್ ಸಾಥ್ ನೀಡಿದರು.

About The Author

error: Content is protected !!