ರಾಷ್ಟ್ರೀಯ ಮಟ್ಟದ ‘ಹ್ಯಾಕ್ಯಾರ್ಡ್ ಬಿಲ್ಡ್ ೨೦೨೬’ ಸ್ಪರ್ಧೆಯಲ್ಲಿ ಮಿಂಚಿದ ಅಂಜುಮನ್ ಎಂಜಿನಿಯರಿಂಗ್ ಕಾಲೇಜು ಪ್ರತಿಭೆಗಳು
ಭಟ್ಕಳ: ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಐಐಟಿ ಗುವಾಹಟಿ ಆಯೋಜಿಸಿದ್ದ ‘ಹ್ಯಾಕ್ಯಾರ್ಡ್ ಬಿಲ್ಡ್ ೨೦೨೬’ (Hackyard Build 2026) ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ನ ‘ಏಜೆಂಟ್ ೩೭ ಚಾಲೆಂಜ್’ (Agent 37 Challenge) ವಿಭಾಗದಲ್ಲಿ ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (AITM) ಕಾಲೇಜಿನ ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿ ಹೆಮ್ಮೆ ತಂದಿದ್ದಾರೆ.

ಎಐಟಿಎಂ ಕಾಲೇಜಿನ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಫಕ್ಕಿಹ್ ಮೊಹಮ್ಮದ್ ಶೆಹ್ಜಾನ್, ಅಬುಬಕರ್ ಕಡ್ಲಿ, ಅಬ್ದುಲ್ ಖಾದಿರ್ ಅರ್ಹಾಮ್ ಹಾಗೂ ಮೊಹಮ್ಮದ್ ಜೈದ್ ಅವರನ್ನೊಳಗೊಂಡ ತಂಡವು ಈ ಅದ್ಭುತ ಸಾಧನೆ ಮಾಡಿದೆ.

ದೇಶದ ನಾನಾ ಭಾಗಗಳ ತಾಂತ್ರಿಕ ವಿಶ್ವವಿದ್ಯಾಲಯಗಳ ನೂರಾರು ಪ್ರತಿಭಾವಂತ ತಂಡಗಳು ಭಾಗವಹಿಸಿದ್ದ ಈ ಕಠಿಣ ಸ್ಪರ್ಧೆಯಲ್ಲಿ, ಭಟ್ಕಳ ಎಐಟಿಎಂ ತಂಡವು ತಮ್ಮ ತಾಂತ್ರಿಕ ಕೌಶಲ ಹಾಗೂ ನವೀನ ಪರಿಕಲ್ಪನೆಯ ಮೂಲಕ ಗಮನಸೆಳೆದು ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಗೆ ಹಾಗೂ ಕರಾವಳಿ ಭಾಗಕ್ಕೆ ಕೀರ್ತಿ ತಂದ ವಿಜೇತ ವಿದ್ಯಾರ್ಥಿಗಳನ್ನು ಅಂಜುಮನ್ ಹಮಿ-ಎ-ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಹಾಗೂ ಅಧ್ಯಾಪಕ ವೃಂದದವರು ಮುಕ್ತಕಂಠದಿಂದ ಶ್ಲಾಘಿಸಿ, ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!