ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಭಾಗಗಳಲ್ಲಿ ಹಲವು ಬಹುಮಾನಗಳನ್ನು ಮುಡಿಗೇರಿಸಿಕೊಂಡ ಪ್ರತಿಭೆಗಳು; ಆಡಳಿತ ಮಂಡಳಿಯಿಂದ ಅಭಿನಂದನೆ
ಭಟ್ಕಳ (ಉತ್ತರ ಕನ್ನಡ): ಮುರುಡೇಶ್ವರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಭಟ್ಕಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಇಲ್ಲಿನ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿ ಹಲವು ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.

ವಿಜೇತ ವಿದ್ಯಾರ್ಥಿಗಳ ವಿವರ: ಪ್ರಥಮ ಪಿಯುಸಿ ವಿಭಾಗ:

- ಪ್ರಥಮ ಸ್ಥಾನ: ಸಿಂಚನಾ ರಾಜು ನಾಯ್ಕ (ಕನ್ನಡ ಚರ್ಚಾ ಸ್ಪರ್ಧೆ), ಶ್ರಾವ್ಯಾ ಅಶೋಕ ಆಚಾರಿ ಹಾಗೂ ಇಬ್ರಾಹಿಂ (ರಸಪ್ರಶ್ನೆ), ಕೀರ್ತನ ಕಾಯ್ಕಿಣಿ (ವಿಜ್ಞಾನ ಮಾದರಿ ತಯಾರಿಕೆ), ಅನನ್ಯಾ ನಾಯ್ಕ (ಇಂಗ್ಲಿಷ್ ಪ್ರಬಂಧ) ಹಾಗೂ ಅನನ್ಯಾ ಕಡ್ಲೆ (ಚಿತ್ರಕಲೆ).
- ದ್ವಿತೀಯ ಸ್ಥಾನ: ಸುದೀಪ ಆಚಾರಿ (ಜನಪದ ಗೀತೆ).
- ತೃತೀಯ ಸ್ಥಾನ: ವಿಹಾ ವೀರೇಂದ್ರ ಶಾನಭಾಗ (ಭಾವಗೀತೆ), ಸುಪ್ರಿತಾ ಮರಾಠಿ (ಕನ್ನಡ ಪ್ರಬಂಧ), ಹರ್ಷಿತಾ (ಏಕಪಾತ್ರಾಭಿನಯ) ಹಾಗೂ ಪೂರ್ವಿತಾ ಶೆಟ್ಟಿ (ಜನಪದ ನೃತ್ಯ).
ದ್ವಿತೀಯ ಪಿಯುಸಿ ವಿಭಾಗ:
ಪ್ರಥಮ ಸ್ಥಾನ: ವಿಕಾಸ ವಾಸು ಮೊಗೇರ (ವಿಜ್ಞಾನ ಮಾದರಿ ತಯಾರಿಕೆ) ಹಾಗೂ ಭರತಕುಮಾರ ನಾಯ್ಕ (ಜನಪದ ಗೀತೆ).ದ್ವಿತೀಯ ಸ್ಥಾನ: ನಿಧಿ ಆಚಾರ್ಯ (ಜನಪದ ನೃತ್ಯ) ಹಾಗೂ ವಸುಧಾ ಹೆಬ್ಬಾರ (ಭಾವಗೀತೆ).ತೃತೀಯ ಸ್ಥಾನ: ಲಿಖಿತಾ ನಾಯ್ಕ (ಕನ್ನಡ ಪ್ರಬಂಧ).
ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸುರೇಂದ್ರ ಶಾನಭಾಗ, ಪ್ರಾಂಶುಪಾಲ ಡಾ. ವೀರೇಂದ್ರ ವಿ. ಶಾನಭಾಗ, ಸಾಂಸ್ಕೃತಿಕ ಸ್ಪರ್ಧೆಯ ಸಂಯೋಜಕರಾದ ಉಪನ್ಯಾಸಕಿ ಸಂಕಲ್ಪ ಆರ್., ಉಪನ್ಯಾಸಕ ವಿಲಿಯಂ ಫರ್ನಾಂಡಿಸ್ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ ಮುಂದಿನ ಹಂತದ ಸ್ಪರ್ಧೆಗಳಿಗೆ ಶುಭ ಹಾರೈಸಿದ್ದಾರೆ.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!