ಶಿವಮೊಗ್ಗ– ಅಂತರರಾಷ್ಟ್ರೀಯ ಜನಪದ ಗಾಯಕ ಜನಪದ ಗಾರುಡಿಗ ಡಾ. ಅಪ್ಪಗೆರೆ ತಿಮ್ಮರಾಜು ಅವರಿಗೆ ನಿನಾದ ಕಲ್ಚರಲ್ ಅಕಾಡೆಮಿ ಭಟ್ಕಳ ವತಿಯಿಂದ ಗುರುವಾರ ಸನ್ಮಾನಿಸಿ ಗೌರವಿಸಲಾಯಿತು.
ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಹಾಗೂ ಸುಗಮಸಂಗೀತ ಪರಿಷತ್ತು ಶಿವಮೊಗ್ಗ ಜಿಲ್ಲಾ ಘಟಕ ಸಹಯೋಗದಲ್ಲಿ ಕರ್ನಾಟಕ ಸಂಘ ಶಿವಮೊಗ್ಗ ಸಭಾಭವನದಲ್ಲಿ ಡಿ.೨೫ ಗುರುವಾರ ನಡೆದ ಜನಪದ ಗಾಯನ ಶಿಬಿರದಲ್ಲಿ ನಾಡಿನ ಹೆಸರಾಂತ ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರೇ ಖುದ್ದು ಹಾಜರಿದ್ದು ಶಿಬಿರಾರ್ಥಿಗಳಿಗೆ ಜನಪದ ಗೀತೆಗಳ ಗಾಯನ ಹಾಗೂ ಮಹತ್ವತೆಗಳ ಬಗ್ಗೆ ತರಬೇತಿ ನೀಡಿದರು.
ಮುಂದಿನ ದಿನಗಳಲ್ಲಿ ಭಟ್ಕಳ ದಲ್ಲಿ ಜನಪದ ಗಾಯನ ಶಿಬಿರ ಆಯೋಜಿಸಿಸುವ ಮೂಲಕ ಅಪ್ಪಗೆರೆಯವರನ್ನು ಬರಮಾಡಿಕೊಳ್ಳುವ ಉದ್ದೇಶ ಇತುವುದನ್ನುವತಿಳಿಸಿ ಅವರನ್ನು ಆಹ್ವಾನಿಸಿ ನಿನಾದ ಕಲ್ಚರಲ್ ಅಕಾಡೆಮಿ ಪರವಾಗಿ ಉಮೇಶ ಮುಂಡಳ್ಳಿ ಅವರು ಅಪ್ಪಗೆರೆ ಯವರಿಗೆ ಸಾಲು ಹೊದಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಮುಂಡಳ್ಳಿ ಯವರು ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ಅಪ್ಪಗೆರೆಯವರೊಂದಿಗಿನ ಒಡನಾಟ ಅವರಿಂದ ದೊರೆತ ಕಲಿಕೆ ಮಾರ್ಗದರ್ಶನ ಇವುಗಳನ್ನು ಶಿಬಿರಾರ್ಥಿಗಳೊಂದಿಗೆ ಮೆಲುಕು ಹಾಕಿದರು. ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಸುಗಮಸಂಗೀತ ಪರಿಷತ್ತಿನ ಅಧ್ಯಕ್ಷೆ ಶಾಂತಾ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ದೂರದರ್ಶನ ಕಲಾವಿದರು ನಾಡಿನ ಹಿರಿಯ ಕೀಬೋರ್ಡ್ ವಾದಕ ಜಿ.ಕೆ.ದಿನೇಶ್ ,ಗಾಯಕ ಕೆ.ಯುವರಾಜ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ