ತೊಗಟವೀರ ಸಮಾಜದ ಬಂಧುಗಳು ಸಂಘಟಿತರಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಧನೆ ಮಾಡಿ ಶಿಕ್ಷಣ ತಜ್ಞ ಕೆ. ಆರ್.ಪುಟ್ಟಸ್ವಾಮಿ ಕರೆ… ನೇಕಾರ ತೊಗಟವೀರ ಸಮಾಜವು ಹೊರ ತಂದಿರುವ 2026ನೇ ನೂತನ ವರ್ಷದ ದಿನದರ್ಶಿಕೆಯನ್ನು ಶಿಕ್ಷಣ ತಜ್ಞ ಕೆ.ಆರ್.ಪುಟ್ಟಸ್ವಾಮಿ ಬಿಡುಗಡೆ ಮಾಡಿದರು.
ಪಂಚಾಂಗ ಹಬ್ಬ ಹರಿದಿನಗಳು ಸೇರಿದಂತೆ ನೇಕಾರ ತೊಗಟವೀರ ಸಮಾಜದ ಬಂಧುಗಳ ವಿವರವಾದ ಮಾಹಿತಿಗಳನ್ನು ಒಳಗೊಂಡಿರುವ 2026 ನೇ ಸಾಲಿನ ದಿನದರ್ಶಿಕೆಯು ವೈವಿಧ್ಯಮಯವಾಗಿ ಮೂಡಿ ಬಂದಿದ್ದು ಸಮಾಜದ ಬಂಧುಗಳು ಹಬ್ಬ ಹರಿದಿನಗಳು ಮತ್ತು ಸೂರ್ಯ, ಚಂದ್ರಗ್ರಹಣ ರಾಹುಕಾಲ, ಗುಳಿಕ ಕಾಲದ ಬಗ್ಗೆ ತಿಳಿದುಕೊಳ್ಳಲು ಈ ಕ್ಯಾಲೆಂಡರ್ ಅನ್ನು ಬಳಕೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಅಭಿವೃದ್ಧಿ ಪಥದತ್ತ ಮುನ್ನಡೆಯಲು ಪ್ರತಿದಿನವೂ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಹೆಜ್ಜೆ ಹಾಕಬೇಕು ಎಂದು ಕೆ.ಆರ್. ಪುಟ್ಟಸ್ವಾಮಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಹೊನ್ನಾವರ ಚಂದ್ರಶೇಖರ್, ಕೆಹೆಚ್ ಆರ್ ಚಂದ್ರಶೇಖರ್, ವಿಶ್ರಾಂತ ಪೊಲೀಸ್ ಅಧಿಕಾರಿ ಮಹದೇವಯ್ಯ ಕೆ.ಜಿ.ಕುಮಾರ್, ತರಕಾರಿ ಜಯರಾಮು, ಕೆ.ಎಂ. ಮಧುಸೂದನ್, ಮೈಲಾರಿ ರವಿ, ಕೆ.ಎಂ.ರವಿನಂದನ, ಶ್ರೀರಂಗಪಟ್ಟಣ ಕುಮಾರಸ್ವಾಮಿ, ಚಿಕ್ಕಗೊಂಡನಹಳ್ಳಿ ರಾಮಚಂದ್ರ, ಪುರಸಭೆ ಮಾಜಿ ಸದಸ್ಯ ಕೆ.ಆರ್. ನೀಲಕಂಠ ಸೇರಿದಂತೆ ನೂರಾರು ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ ಉತ್ಸವ-2026
ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನ ಲೋಕಾರ್ಪಣೆ
ಶ್ರೀ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ನಡೆದ ಮಹಾಶಿವರಾತ್ರಿಯ ಅಮಾವಾಸ್ಯೆ ಜಾಗರಣೆ ಕಾರ್ಯಕ್ರಮ