March 2, 2026

ಹರಿಹರಪುರ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರ  ಹೃದಯಸ್ಪರ್ಶಿ ಬೀಳ್ಕೊಡುಗೆ

ಕೆಆರ್ ಪೇಟೆ : ಹರಿಹರಪುರ ಗ್ರಾಮ ಪಂಚಾಯಿತಿ ಸದಸ್ಯರಾಗಿ ಐದು ವರ್ಷಗಳ ಕಾಲ ಸಾರ್ಥಕ ಸೇವೆ ನೀಡಿದ ಸಮಾಧಾನವಿದೆ. ಮಾಜಿ ಅಧ್ಯಕ್ಷ ಹರ್ಷ ಅಭಿಮತ..

ಐದು ವರ್ಷಗಳ ಕಾಲ ಗ್ರಾಮ ಪಂಚಾಯಿತಿ ಸದಸ್ಯರಾಗಿ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ ತೃಪ್ತಿ ಇದೆ ಎಂದು ಹರಿಹರಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬೊಮ್ಮೇನಹಳ್ಳಿ ಹರ್ಷ ಹೇಳಿದರು.

ಅವರು ಕೃಷ್ಣರಾಜಪೇಟೆ ತಾಲೂಕಿನ ಕಸಬಾ ಹೋಬಳಿಯ ಹರಿಹರಪುರ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಗ್ರಾಮ ಪಂಚಾಯಿತಿ ವತಿಯಿಂದ ನೀಡಿದ ಹೃದಯಸ್ಪರ್ಶಿ ಬೀಳ್ಕೊಡುಗೆ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಹರಿಹರಪುರ ಗ್ರಾಮ ಪಂಚಾಯಿತಿಗೆ ಸೇರಿದ 9 ಗ್ರಾಮಗಳಲ್ಲಿ ಸ್ವಚ್ಛತೆ ಬೀದಿ ದೀಪಗಳ ನಿರ್ವಹಣೆ ಶುದ್ಧ ಕುಡಿಯುವ ನೀರು ಸೇರಿದಂತೆ ಗ್ರಾಮೀಣ ಜನರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ದಿಕ್ಕಿನಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸದಸ್ಯರಾದ ನಾವೆಲ್ಲರೂ ಪಕ್ಷ ಭೇದ ಮರೆತು ಒಂದಾಗಿ ಗ್ರಾಮಗಳ ಅಭಿವೃದ್ಧಿಗೆ ದುಡಿದಿದ್ದೇವೆ ದೇವರ ದಯೆ ಹಾಗೂ ಜನತೆಯ ಆಶೀರ್ವಾದವಿದ್ದರೆ ಮತ್ತೊಂದು ಅವಧಿಗೆ ಗೆದ್ದು ಬಂದು ಜನರ ಕೆಲಸ ಮಾಡುತ್ತೇವೆ ಎಂದು ಹೇಳಿದ ಹರ್ಷ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನ ಪರವಾಗಿ ಕೆಲಸ ಮಾಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ತಾಲೂಕು ಪಂಚಾಯಿತಿ ಕಾರ್ಯಕರ್ತನ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ದಿಕ್ಕಿನಲ್ಲಿ ನಮ್ಮೊಂದಿಗೆ ಸಹಕರಿಸಿ ಕೆಲಸ ಮಾಡಿದ್ದರಿಂದ ನಾವು ಒಳ್ಳೆಯ ಹೆಸರನ್ನು ಪಡೆಯಲು ಸಾಧ್ಯವಾಗಿದೆ ಆದ್ದರಿಂದ ನಾವು ಸಿಬ್ಬಂದಿಗಳಿಗೂ ಧನ್ಯವಾದ ಅರ್ಪಿಸುತ್ತೇವೆ ಎಂದು ಹರ್ಷ ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಕುರ್ನೆನಹಳ್ಳಿ ಬಲರಾಮೇಗೌಡ, ಕತ್ತರಘಟ್ಟ ಎಂ.ಕೆ.ಪ್ರಸನ್ನಕುಮಾರ್ ಹೃದಯಸ್ಪರ್ಶಿ ಅಭಿನಂದನೆ ಸ್ವೀಕರಿಸಿ ಮಾತನಾಡಿ 5 ವರ್ಷಗಳ ಕಾಲ ಸದಸ್ಯರಾಗಿ ಜನತೆಯ ಪ್ರತಿನಿಧಿಗಳಾಗಿ ನಾವು ಪ್ರಾಮಾಣಿಕವಾಗಿ ಜನರ ಕೆಲಸ ಮಾಡಿದ್ದೇವೆ ಪ್ರಸ್ತುತ ನಮ್ಮ ಆಡಳಿತಾವಧಿ ಅಂತ್ಯಗೊಂಡಿದೆ ಹೊಸದಾಗಿ ಆಡಳಿತ ಮಂಡಳಿ ಸದಸ್ಯರು ಚುನಾಯಿತರಾಗಿ ಬರುವವರೆಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಕುಡಿಯುವ ನೀರು ನಿರ್ವಹಣೆ ಸ್ವಚ್ಛತೆ ಬೀದಿ ದೀಪ ಸೇರಿದಂತೆ ಶ್ರೀಸಾಮಾನ್ಯರ ಕೆಲಸ ಕಾರ್ಯಗಳನ್ನು ನಿಗದಿತ ಅವಧಿ ಒಳಗೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ ಬಿ ರತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು ಉಪಾಧ್ಯಕ್ಷ ತೆರ್ನೇನಹಳ್ಳಿ ನಂದೀಶ್, ಸದಸ್ಯರಾದ ಜಯಮಣಿ , ಕುಸುಮ ಹೆಚ್ಚೆನ್ ಹರಿಶ್ಚಂದ್ರ ದೇವಮ್ಮ ದೇವರಾಜು ಸುಂದರಮ್ಮ ಆಶಾ ಲತಾ ಗಣೇಶಗೌಡ ಡಿಸಿ ಹರ್ಷ ಸರೋಜಮ್ಮ ಕತ್ತರ ಘಟ್ಟ ಪ್ರಸನ್ನ ವಿಜಯ ನಾಗೇಗೌಡ ನರಸಿಂಹಮೂರ್ತಿ ಎಸ್.ಡಿ. ರುಕ್ಮಿಣಿ ಸಭೆಯಲ್ಲಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಯೀದ ಅಕ್ತರ್ ಸಭೆಯ ನೇತೃತ್ವ ವಹಿಸಿ, ಐದು ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದ ಸದಸ್ಯರನ್ನು ಹೃದಯಸ್ಪರ್ಶಿ ಯಾಗಿ ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು.

ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ ಮಂಡ್ಯ.

About The Author

error: Content is protected !!