ಶಿರಸಿ: ಮಂಡ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ವಿದ್ಯಾರ್ಥಿನಿ ಡಾ. ವಿಶಾಖ ಹೆಗಡೆಯು ಕಳೆದ ಸೆಪ್ಟೆಂಬರ್ ರಲ್ಲಿ ರಾಜೀವಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ನಡೆಸಿದ ವೈದ್ಯಕೀಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ 6ನೇ ರ್ಯಾಂಕ್ ಗಳಿಸಿದ್ದಾಳೆ.
ಮಂಡ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನ ಎಲ್ಲಾ ಸ್ನಾತಕೋತ್ತರ ವಿಭಾಗಗಳಿಗೆ ಡಾ. ವಿಶಾಖ ಅಗ್ರಸ್ಥಾನ ಪಡೆದು ಗಮನ ಸೆಳೆದಿದ್ದಾಳೆ. ಈ ಹಿಂದೆ ಬೆಳಗಾವಿಯ ಬೆಳಗಾಂವ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಎಂಬಿಬಿಎಸ್ ಮುಗಿಸಿದ್ದಳು.
ಪ್ರತಿಭಾನ್ವಿತ ಭರತನಾಟ್ಯ ಕಲಾವಿದೆಯೂ ಆದ ವಿಶಾಖ, ವಿದ್ವತ್ ಪದವಿ ಹಾಗೂ ರಂಗಪ್ರವೇಶ ಕೂಡ ಪೂರೈಸಿದ್ದಾಳೆ.
ಭರತನಾಟ್ಯದಲ್ಲಿ ರಾಷ್ಟ್ರೀಯ ಅತ್ಯುನ್ನತ ಬಾಲಶ್ರೀ ಪ್ರಶಸ್ತಿ, ರಾಜ್ಯ ಮಟ್ಟದ ಕಲಾಶ್ರೀ ಮತ್ತು ಕಲಾಪ್ರತಿಭೋತ್ಸವ ಪುರಸ್ಕಾರಗಳು ಹಾಗೂ ಹಲವು ಹಲವು ಪ್ರಶಸ್ತಿಗಳ ವಿಜೇತೆಯಾಗಿದ್ದಾಳೆ. ಕೇಂದ್ರ ಸರ್ಕಾರದಿಂದ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸಸ್ ಅಂಡ್ ಟ್ರೈನಿಂಗ್ ಸ್ಕಾಲರ್ ಶಿಪ್ ಹಾಗೂ ಯಂಗ್ ಆರ್ಟಿಸ್ಟ್ ಫೆಲೋಶಿಪ್ ಸ್ಕಾಲರ್ ಶಿಪ್ ಫಾರ್ ಅಡ್ವಾನ್ಸಡ್ ಟ್ರೈನಿಂಗ್ ಇನ್ ಭರತನಾಟ್ಯಮ್ ಕೂಡ ಪಡೆದಿದ್ದಾಳೆ. ಬೆಂಗಳೂರು ದೂರದರ್ಶನ ಕೇಂದ್ರದ ಶ್ರೇಣಿಯುಕ್ತ ಕಲಾವಿದೆಯೂ ಹೌದು.
ಪ್ರಸ್ತುತ, ಡಾ. ವಿಶಾಖ ಹೆಗಡೆ ಅವರು ಬೆಳಗಾವಿಯ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜ್ ಹಾಗೂ ಡಾ. ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಸೀನಿಯರ್ ರೆಸಿಡೆಂಟ್ ಅಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ವಿಶಾಖ ಬೆಳಗಾವಿಯಲ್ಲಿ ನೆಲೆಸಿರುವ ಡಾ. ಜಿ. ಎಸ್. ಮಂಜುನಾಥ್ ಹಾಗೂ ನಿರುಪಮ ಮಂಜುನಾಥ್ ಅವರ ಪುತ್ರಿ.
ಈಕೆ ಗಾಲಿಮನೆ ದಿ.ಸತ್ಯನಾರಾಯಣ ಹೆಗಡೆ ಹಾಗೂ ಸರಸ್ವತಿ ಮತ್ತು
ನೀರ್ನಳ್ಳಿಯ ರಘುಪತಿ ಭಟ್ ಮತ್ತು ಮಹಾದೇವಿ ಅವರ ಮೊಮ್ಮಗಳು ಎಂಬುದು ಉಲ್ಲೇಖನೀಯ.

More Stories
ಮಾ.೧೫ಕ್ಕೆ ಜಡ್ಡಿಗದ್ದೆಯಲ್ಲಿ ‘ಹಿಂದೂ ಸಮಾವೇಶ’: ಹುಕ್ಕೇರಿ ಶ್ರೀ ಭಾಗಿ
ಯುಗಾದಿಯಿಂದ ರಾಮನವಮಿವರೆಗೆ ನವ ದಿನನದಿ ಉಳಿಸಿ ಸತ್ಯಾಗ್ರಹಕ್ಕೆ ಭಜನಾ ಅಭಿಯಾನ
ಶಿರಸಿಯಲ್ಲಿ ‘ವಿಶೇಷ ಯುವ ಸಂಗೀತೋತ್ಸವ’