March 29, 2026

ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ಸಮಾಜಸೇವಾ ಕಾರ್ಯವು ಲಯನ್ ಜಿಲ್ಲೆಯಲ್ಲಿಯೇ ಅತ್ಯುತ್ತಮವಾದದ್ದು.

ಮುರ್ಡೇಶ್ವರ ಲಯನ್ಸ್ ಕ್ಲಬ್ ಕಳೆದ ಹಲವಾರು ವರ್ಷಗಳಿಂದ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ತನ್ನ ಸಮಾಜಮುಖಿ ಕಾರ್ಯಗಳ ಮೂಲಕ ಲಯನ್ ಜಿಲ್ಲೆಯಲ್ಲಿಯೇ ಅತ್ಯುತ್ತಮ ಕ್ಲಬ್ ಆಗಿ ಗುರುತಿಸಿಕೊಂಡಿದೆ. ಪರಿಸರ ಜಾಗೃತಿ, ಯುವ ಸಬಲೀಕರಣ, ಬಡತನ ನಿರ್ಮೂಲನೆ, ಮಕ್ಕಳ ಕ್ಯಾನ್ಸರ್ ನೆರವು, ಮಧುಮೇಹ ಜಾಗೃತಿ, ಕಣ್ಣಿನ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕ್ಲಬ್ ಮುಂಚೂಣಿಯಲ್ಲಿದೆ. ಕೇವಲ ಎಂಟು ತಿಂಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ 94 ಸೇವಾ ಚಟುವಟಿಕೆಗಳೇ ಇದಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ಲಯನ್ 318ಬಿ ಜಿಲ್ಲೆಯ ಗವರ್ನರ್ ಆಗಿರುವ ಗೋವಾದ ಜೈ ಅಮೋಲ್ ನಾಯಕ್ ಅವರು ಹೇಳಿದರು.

ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಒಳಗೊಂಡ 110 ಕ್ಲಬ್‌ಗಳನ್ನೊಳಗೊಂಡ ಲಯನ್ 317ಬಿ ಜಿಲ್ಲೆಯ ಗವರ್ನರ್ ಆಗಿರುವ ಅವರು, ಶಿರಾಲಿಯ ಶ್ರೀದೇವಿ ಹೆರಿಟೇಜ್ ಸಭಾಂಗಣದಲ್ಲಿ ಮುರ್ಡೇಶ್ವರ ಲಯನ್ಸ್ ಕ್ಲಬ್‌ಗೆ ನೀಡಿದ ಅಧಿಕೃತ ಭೇಟಿಯ ಸಂದರ್ಭದಲ್ಲಿ ಕ್ಲಬ್‌ನ ಸೇವಾ ಚಟುವಟಿಕೆಗಳನ್ನು ಪರಿಶೀಲಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಭಟ್ಕಳ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗೇರಕೇರಿ, ಶಿರಾಲಿಯ ಶಿಕ್ಷಕರಾದ ಶ್ರೀಧರ ಎಂ. ನಾಯ್ಕರವರ ಶೈಕ್ಷಣಿಕ ಸಾಧನೆಗಳನ್ನು ಪರಿಗಣಿಸಿ ಅವರಿಗೆ ವಾಜಂತ್ರಿ ಅವಾರ್ಡ್ ಪ್ರದಾನ ಮಾಡಲಾಯಿತು. ಇದೇ ವೇಳೆ, ಸರಕಾರಿ ಪ್ರೌಢಶಾಲೆ ಬೆಳ್ಕೆಯ ಶಿಕ್ಷಕರಾದ ಶ್ರೀಮತಿ ರಜನಿ ಶೆಟ್ಟಿಯವರ ಶ್ರೇಷ್ಠ ಸೇವೆಯನ್ನು ಗುರುತಿಸಿ ಉಡುಪ ಅವಾರ್ಡ್ ನೀಡಿ ಗೌರವಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಕರೂರು ಶಾಲೆಗೆ ಜಮಖಾನಾ, ಕೆ.ಪಿ.ಎಸ್. ಬೈಲೂರು ಶಾಲೆಗೆ ವಾಟರ್ ಫಿಲ್ಟರ್, ಕೆರೆಕಟ್ಟೆ ಶಾಲೆಯ ವಿದ್ಯಾರ್ಥಿಗಳಿಗೆ 200 ಕ್ಯಾಪ್‌ಗಳು ಹಾಗೂ ಸರ್ವೋದಯ ಶಾಲೆಗೆ ಸೌಂಡ್ ಸಿಸ್ಟಮ್‌ನ್ನು ದೇಣಿಗೆಯಾಗಿ ನೀಡಲಾಯಿತು. ಇದಲ್ಲದೆ ಮುಖ್ಯಮಂತ್ರಿ ಪದಕ ವಿಜೇತರಾದ ಅರಣ್ಯಾಧಿಕಾರಿ ಪ್ರದೀಪ ನಾಯ್ಕರವರು, ನಿವೃತ್ತ ಭಾರತೀಯ ಸೈನಿಕರಾದ ಜನಾರ್ಧನ ದೇವಾಡಿಗರವರು ಹಾಗೂ ಸ್ನೇಹ ವಿಶೇಷ ಶಾಲೆಯ ಶಿಕ್ಷಕರಾದ ಮಾಲತಿ ಉದ್ಯಾವರರವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಕಿರಣ ಎಸ್ ಕಾಯ್ಕಿಣಿ, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿಗಳಾದ ಕೀರ್ತಿ ನಾಯ್ಕ, ರೀಜನ್ ಚೇರ್‌ಪರ್ಸನ್ ರಾಜೇಶ್ ಸಾಲೇಹಿತ್ತಲ್, ಜೋನ್ ಚೇರ್‌ಪರ್ಸನ್ ಮಂಗಲಾ ಕುಚಿನಾಡ್, ಕಾರ್ಯದರ್ಶಿಗಳಾದ ನಾಗೇಶ ಮಡಿವಾಳ ಹಾಗೂ ಕೋಶಾಧ್ಯಕ್ಷರಾದ ಎಂ.ವಿ ಹೆಗಡೆಯವರು ಉಪಸ್ಥಿತರಿದ್ದರು.
ಮುರ್ಡೇಶ್ವರಲಯನ್ಸ್ ಕ್ಲಬ್‌ನ ಸದಸ್ಯರಾದ ಡಾ.ಸುನೀಲ್ ಜತ್ತನ್‌ರವರು ಎಲ್ಲರನ್ನು ಸ್ವಾಗತಿಸಿದರು. ಕುಮಾರಿ ಸುಪ್ರೀತಾ ಶೆಟ್ಟಿ ಪ್ರಾರ್ಥಿಸಿದರು. ಕಾರ್ಯದರ್ಶಿಗಳಾದ ನಾಗೇಶ ಮಡಿವಾಳರವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧ್ಯಕ್ಷರಾದ ಎಂ.ವಿ ಹೆಗಡೆಯವರು ವಂದಿಸಿದರು. ಕೃಷ್ಣಹೆಗಡೆ, ಶಿವಕುಮಾರ ಹಿಚ್ಕಡರವರು ನಿರೂಪಿಸಿದರು. ಕಾರ್ಯಕ್ರಮದಲ್ಲಿಸದಸ್ಯರಾದ ನಾಗರಾಜ ಭಟ್, ಬಾಬು ಮೊಗೇರ್, ಗೌರೀಶ ಆರ್ ನಾಯ್ಕ, ಜಗದೀಶ ಜೈನ್, ಸುಬ್ರಾಯ ನಾಯ್ಕ, ಮಂಜುನಾಥ ನಾಯ್ಕ, ಬಸ್ತ್ಯಾಂವ್ ಡಿ ಕೋಸ್ತಾ, ವಿಶ್ವನಾಥ ಕಾಮತ್, ಗೌರೀಶ ಟಿ ನಾಯ್ಕ, ವಿಶ್ವನಾಥ ಮಡಿವಾಳ, ಡಾ.ಮನೋಜ್ ಆಚಾರ್ಯ, ಜಯಪ್ರಕಾಶ ಕರ್ಕಿಕರ್, ರಾಮದಾಸ ಶೇಟ್, ಗಜಾನನ ಭಟ್, ಪ್ರಸನ್ನ ಡಿಕೋಸ್ತಾ, ಸಾಯಿದತ್ತ ಗಾಜ್ರೆಕರ್ ಮೊದಲಾದವರು ಹಾಜರಿದ್ದರು.

About The Author

error: Content is protected !!