ಮುರ್ಡೇಶ್ವರ : ಪ್ರತಿವರ್ಷದಂತೆ ಈ ವರ್ಷವೂ ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.) ಮುರ್ಡೇಶ್ವರದ ಆಶ್ರಯದಲ್ಲಿ, ಒಂದು ತಿಂಗಳ ಕಾಲವಧಿಯ ಉಚಿತ ಕಿಡ್ಸ್ ಕಂಪ್ಯೂಟರ್ ತರಬೇತಿ ಹಾಗೂ ಉಚಿತ ಬೇಸಿಗೆ ಶಿಬಿರ ವನ್ನು ಪ್ರತಿಷ್ಠಾನದ ಗೀತಾ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀಮತಿ ತುಳಸಿ ದೇವಾಡಿಗ, ಅತಿಥಿಗಳಾಗಿ ಶ್ರೀಮತಿ ಈರಮ್ಮ ನಾಯ್ಕ, ಶ್ರೀಮತಿ ಸುಷ್ಮಾ ನಾಯ್ಕ ರವರು ಆಗಮಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಎಸ್. ಕಾಮತ್ ರವರು ಪ್ರತಿವರ್ಷ ನಡೆಸಲ್ಪಡುವ ಕಾರ್ಯಕ್ರಮದ ರೂಪರೇಷಗಳನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಯಪಡಿಸಿದರು. ನಂತರ ಅತಿಥಿಗಣ್ಯರಿಂದ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಂತರ ಮಾತನಾಡಿದ ಅತಿಥಿಗಳು ಕಾರ್ಯಕ್ರಮದ ಅವಶ್ಯಕತೆಯನ್ನು ತಿಳಿಯಪಡಿಸಿ, ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಭಾಧ್ಯಕ್ಷರಾದ ತುಳಸಿ ದೇವಾಡಿಗ ರವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡ ಸಂಸ್ಥೆಗೆ ಶುಭ ಕೋರಿದರು. ಸಂಸ್ಥೆಯ ಶಿಕ್ಷಕ ಸಿಬ್ಬಂದಿಯಾದ ಸರೋಜಾ ಹರಿಕಾಂತರವರು ಸರ್ವರಿಗೂ ಅಭಿನಂದಿಸಿದರು, ಸಂಸ್ಥೆಯ ಪ್ರಾಚಾರ್ಯರಾದ ಹೇಮಾ ನಾಯ್ಕ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
About The Author


More Stories
ಮುರ್ಡೇಶ್ವರದಲ್ಲಿ ಭವ್ಯ ಬಿಲ್ವಾರ್ಚನೆ: 2 ಸಾವಿರಕ್ಕೂ ಅಧಿಕ ಭಕ್ತರು ಭಾಗಿ
ಭಟ್ಕಳದಲ್ಲಿ ಮನೆಯ ಶೆಡ್ನಿಂದ ಹೋಂಡಾ ಸ್ಕೂಟಿ ಕಳವು
ದೇಶಸೇವೆಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ: ಮುರ್ಡೇಶ್ವರ ಶಾಖೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ