ಹೊನ್ನಾವರ: ಪಟ್ಟಣದ ಕೆಳಗಿನಪಾಳ್ಯ ಮೂಲದ ಪ್ರಸುತ್ತ ಬೆಂಗಳೂರಿನಲ್ಲಿ ಎ.ಸಿ.ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಾಂಡುರಂಗ ಭಂಡಾರಿ ಇವರಿಗೆ ಮುಖ್ಯಮಂತ್ರಿಗಳ ಪೊಲೀಸ್ ಪದಕದ ಗೌರವ ಲಭಿಸಿದೆ.
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ, ದಕ್ಷತೆ ಮತ್ತು ಅಸಾಧಾರಣ ಸಾಧನೆ ಮಾಡಿದ 153 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿ ಪೊಲೀಸ್ ಪದಕ’ ಘೋಷಿಸಲಾಗಿದೆ. ಪ್ರಸುತ್ತ ಬೆಂಗಳೂರಿನಲ್ಲಿ ಎ.ಸಿ.ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಹೊನ್ನಾವರ ಮೂಲದ ಪಾಂಡುರಂಗ ವೆಂಕಟೇಶ ಭಂಡಾರಿ ಇವರಿಗೆ ದೊರೆತಿದೆ.
ಆರಂಭಿಕ ಶಿಕ್ಷಣವನ್ನು ನ್ಯೂ ಇಂಗ್ಲೀಷ್ ಸ್ಕೂಲ್ ಶಿಕ್ಷಣ ಪಡೆದು, ಕಾಲೇಜು ಶಿಕ್ಷಣವನ್ನು ಎಸ್.ಡಿ.ಎಂ. ಕಾಲೇಜಿನಲ್ಲಿ ಪಡೆದು 2006 ಬ್ಯಾಚನಲ್ಲಿ ಪಿಎಸೈ ಆಗಿ ಇಲಾಖೆಗೆ ಸೇರಿರುವ ಇವರು ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.
ರಾಜ್ಯದ ಕಲ್ಬುರ್ಗಿ, ಬೆಳಗಾವಿ, ಬೆಂಗಳೂರು ನಂತರ ಎ.ಎನ್.ಎಫ್ ಆಗಿ ಕಾರ್ಕಳ ನಂತರ ಬೆಂಗಳೂರು ಸಿಟಿಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸುತ್ತ ಸಿ.ಎ.ಆರ್ ಪಶ್ಚಿಮ ಘಟಕದಲ್ಲಿ ಎ.ಸಿ.ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ನಿರ್ವಹಿಸಿದ ಕಾರ್ಯಕ್ಕೆ ಇಲಾಖೆಯಿಂದಲೂ ಪ್ರಶಂಸೆಗೆ ಒಳಗಾಗಿದ್ದರು. ಇವರ ಸೇವೆ ಪರಿಗಣಿಸಿ ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಪೊಲೀಸ್ ಪದಕ ಲಭಿಸಿದೆ. ಇವರು ಪಟ್ಟಣದ ದಿ. ಲಲಿತಾ ಹಾಗೂ ವೆಂಕಟೇಶ ಭಂಡಾರಿ ಇವರ ತೃತೀಯ ಪುತ್ರನಾಗಿದ್ದಾರೆ. ಮಂಕಾಳಮ್ಮ ದೇವಾಲಯದ ಧರ್ಮದರ್ಶಿ ರಾಜೇಶ ಭಂಡಾರಿ ಇವರ ಸಹೋದರರಾಗಿದ್ದಾರೆ.

More Stories
ಹೊನ್ನಾವರ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸುಧೀಶ ನಾಯ್ಕ ಆಯ್ಕೆ
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಎಂ. ಜಿ. ನಾಯ್ಕರವರು ಅವಿರೋಧವಾಗಿ ಆಯ್ಕೆ
ಕಡಲ ಅಲೆಗಳ ಆರ್ಭಟಕ್ಕೆ ಸಿಲುಕಿ ದೋಣಿ ಮುಳುಗಡೆ: ಮಂಕಿಯಲ್ಲಿ ಮೀನುಗಾರ ಸಾವು