May 25, 2026

ಅರಣ್ಯ ಇಲಾಖೆ ಕಾರ್ಯ ವೈಖರ್ಯಕ್ಕೆ ತೀವ್ರ ಅಸಮಧಾನ : ನಡುತೋಪು ಲೆಕ್ಕಕ್ಕೆ ಕೋಟಿಗಳಷ್ಟು ಹಣ ಖರ್ಚು: ಕೋಟಿ ಹೊಂಡ ಎಲ್ಲಿ, ನೆಟ್ಟಿದ್ದು ಎಷ್ಟು, ಬದುಕಿದ್ದು ಎಷ್ಟು- ಅರಣ್ಯವಾಸಿಗಳ ಪ್ರಶ್ನೆ

ಶಿರಸಿ: ಪರಿಸರ ಸಾಂದ್ರತೆ ಮತ್ತು ಅರಣ್ಯ ಪ್ರದೇಶ ಹೆಚ್ಚಿಸುವಿಕೆ ದೃಷ್ಟಿಯಿಂದ ಅರಣ್ಯ ಇಲಾಖೆಯ ನಡುತೋಪು ಕಾಮಗಾರಿ ಸಾಕಷ್ಟು ಟೀಕೆ ಮತ್ತು ಸಂಶಯಾಸ್ಪದಕ್ಕೆ ಕಾರಣವಾಗಿ ಅರಣ್ಯ ಅತಿಕ್ರಮಣದಾರರಿಗೆ ಕಾನೂನು ಪಾಠ ಮಾಡುವ ಅರಣ್ಯ ಇಲಾಖೆಯೆ, ಲೆಕ್ಕಕ್ಕೆ ಕೋಟಿಗಳಷ್ಟು ಹಣ ಖರ್ಚು, ಕೋಟಿ ಹೊಂಡ ಎಲ್ಲಿ, ನೆಟ್ಟಿದ್ದು ಎಷ್ಟು, ಬದುಕಿದ್ದು ಎಷ್ಟು ಎಂದು ಅರಣ್ಯವಾಸಿಗಳಿಂದ ಪ್ರಶ್ನೆಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯವಾಸಿಗಳ ಪರವಾಗಿ ಅರಣ್ಯ ಇಲಾಖೆಗೆ ಮೇಲಿನಂತೆ ಪ್ರಶ್ನಿಸಿದ್ದಾರೆ.

ಪ್ರಸಕ್ತ ಮಳೆಗಾಲದಲ್ಲಿ ಅರಣ್ಯವಾಸಿಗಳು ದಶಲಕ್ಷ ಗಿಡ ನೆಡುವ ಅಭಿಯಾನದ ಪೂರ್ವ ಬಾವಿಯಾಗಿ ಗ್ರೀನ್ ಕಾರ್ಡ ಪ್ರಮುಖರ ಜೊತೆ ಇಂದು ಹೋರಾಟಗಾರರ ಕಾರ್ಯಾಲಯದಿಂದ ದೂರವಾಣಿ ಮೂಲಕ ಸಂವಾದಿಸಿದ ಸಂದರ್ಭದಲ್ಲಿ ಜಿಲ್ಲಾದ್ಯಂತ ಅಭಿಪ್ರಾಯ ಕೇಳಿಬಂದವು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಡು ತೋಪಿನಲ್ಲಿ, ಬದುಕಿರುವ ಗಿಡಕ್ಕಿಂತ, ಸತ್ತಿರುವ ಸಂಖ್ಯೆ ಹೆಚ್ಚಾಗಿ ಕಾಣಸಿಗುತ್ತದೆ. ವಿಚಿತ್ರವೆಂದರೆ, ಜೀವಂತ ಗಿಡಗಳನ್ನು ನೆಡದೇ, ಹತ್ತಿರ ಹರಿಯುವ ನೀರಿನಲ್ಲಿ ತೇಲಿ ಬಿಡುವ ಹವ್ಯಾಸ ಸಹಿತ ಇರುವುದನ್ನು ನೋಡಿದ್ದಾಗಿ ವಿಷಯ ಪ್ರಸ್ತಾಪಿಸಿದ್ದು ಹಾಗೂ ಹೊಂಡಕ್ಕೆ ಅಳತೆ ಮಾನದಂಡ ಕಾಣಸಿಗದು. ಪರಿಸರ ಪ್ರಜ್ಞೆ ಬಗ್ಗೆ ಪಾಠ ಮಾಡುವ ಅರಣ್ಯ ಇಲಾಖೆ ಇವರು ಗಿಡಗಳ ಪ್ಲಾಸ್ಟಿಕ್ ಕವರ್ ರಾಶಿ, ರಾಶಿಯಾಗಿ ಇಂದಿಗೂ ಅರಣ್ಯ ಪ್ರದೇಶದಲ್ಲಿ ಬಿದ್ದಿರುವುದು ನೋಡಿದರೆ, ಇಲಾಖೆಗೆ ಪರಿಸರ ರಕ್ಷಣೆ, ಸಂರಕ್ಷಣೆ ತೋರ್ಪಡುತ್ತದೆ. ಈ ಬಗ್ಗೆ ಇರುವ ಜವಾಬ್ದಾರಿ ಎಂದು ಖಾರವಾಗಿ ಉತ್ತರಿಸಿದ್ದು ಹಾಗೂ ನೆಟ್ಟ ಗಿಡ ಹುಟ್ಟಿದ್ದಕ್ಕಿಂತ ಹೆಚ್ಚಾಗಿ ಬೀಜ ಪ್ರಸರಣಾದಿಂದ ಹುಟ್ಟಿರುವ ಗಿಡಗಳೇ ಜಾಸ್ತಿ ಅರಣ್ಯ ಪ್ರದೇಶದಲ್ಲಿ ತಲೆ ಎತ್ತಿ ನಿಂತಿದೆ ಎಂದು ಕೆಲವರು ಹಾಸ್ಯಾಸ್ಪದವಾಗಿ ಉತ್ತಿರಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಸರ ವಿರೋಧಿ ಹಾಗೂ ಮರ ಕಡಿಯುವ ಉದ್ದೇಶದಿಂದ ಪದೇ ಪದೇ ಅಕೆಶಿಯಾ ಗಿಡ ನೆಡುವುದು ಮತ್ತು ಕಡಿಯುವ ಪರಿಸರ ವಿರೋಧಿ ಪ್ರವ್ರತ್ತಿ, ಅರಣ್ಯ ಇಲಾಖೆಯ ನೀತಿ ಸಮಂಜಸವಲ್ಲ ಈ ಹಿನ್ನಲೆಯಲ್ಲಿ ಸರ್ಕಾರದ ಗಮನಕ್ಕೆ ತರಲು ಒತ್ತಡ ಸಹಿತ ಕೇಳಿ ಬಂದವು ಎಂದು ಅವರು ತಿಳಿಸಿದ್ದಾರೆ. ಅರಣ್ಯವಾಸಿಗಳು ಬಿದ್ದಂತ ಮನೆ ಹಾಗೂ ವಾರ್ಷಿಕ ರಿಪೇರಿ ಮಾಡುವಾಗ ಆತಂಕ ಮಾಡುವ ಅರಣ್ಯ ಇಲಾಖೆಯವರು, ಅರಣ್ಯ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡ ಕಟ್ಟುವಾಗ ಯಾವ ಕಾನೂನು ಮಾನದಂಡ ಅನುಸರಿಸುತ್ತಾರೆ ಎಂದು ಸಂವಾದದಲ್ಲಿ ಪ್ರಶ್ನಿಸಿಸಿದ ಪ್ರಸಂಗವು ಜರುಗಿದವು ಎಂದು ಅವರು ಹೇಳುತ್ತಾ, ಹಳೆಗಿಡಗಳ ತೋಪಿನ ಮುಂದೆ, ಹೊಸ ವರ್ಷದ ಕಾಮಗಾರಿಯ ನಾಮಫಲಕ ಕಾಣುವುದು ಸಂಶಯಕ್ಕೆ ಕಾರಣವಾಗಿದ್ದು ಇರುತ್ತದೆ ಎಂದು ಸಂವಾದದಲ್ಲಿ ಉಧ್ಬವವಾದ ಅಂಶವನ್ನು ಪ್ರಕಟಣೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲದೇ, ನಡುತೋಪು ಮಾಡಿದ್ದಾರೆ ಎನ್ನುವ ಪ್ರದೇಶದಲ್ಲಿ, ಸುತ್ತುವರೆದು ಮುತ್ತಿಕೊಂಡು ಕಾಂಗ್ರೇಸ್ ಮಟ್ಟಿ ಪರಿಶೀಲಿಸಿದರೇ ಅದರಲ್ಲಿ ಗುಂಡಿಯಾಗಲೀ, ಗಿಡವನ್ನಾಗಲಿ ಕಾಣ ಸಿಗುವುದಿಲ್ಲ ಎಂದು ಆಶ್ಚರ್ಯಕರ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಅವರು ತಿಳಿಸಿದರು.

ಕೇಂದ್ರ ವನ್ಯಜೀವಿ ನಿರ್ವಹಣಾ ಯೋಜನೆ:
ಅರಣ್ಯ ಭೂಮಿ ಕೇಂದ್ರ ಒಡೆತನದ ಹಿನ್ನಲೆಯಲ್ಲಿ ಅಭಿಯಾರಣ್ಯದ ನೀತಿಯನ್ನು ಉಲ್ಲಂಘಿಸಿ, ದೆಹಲಿಯ ಕೇಂದ್ರ ವನ್ಯಜೀವಿ ನಿರ್ವಹಣಾ ಯೋಜನೆಗೆ ವ್ಯತಿರಿಕ್ತವಾಗಿ ಗಿಡಗಳ ನೆಡುವ ತೋಪು, ತಂತಿ ಬೇಲಿ, ಇಂಗು ಗುಂಡಿ ಕಾಮಗಾರಿ ಅರಣ್ಯ ಇಲಾಖೆಯು ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೇ, ಈಗ ಇರುವ ನೈಜ ಕಾನೂನಿನ ಅಂಶ ಸಾರ್ವತ್ರಿಕವಾಗಿ ಪ್ರಕಟಣೆಗೊಳಿಸುವುದು ಅತೀ ಅವಶ್ಯ ಎಂಬ ವಿಷಯವೂ ಸಂವಾದದಲ್ಲಿ ಗ್ರೀನ್ ಕಾರ್ಡ ಪ್ರಮುಖರಿಂದ ಪ್ರಸ್ತಾಪಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ಕಾಮಗಾರಿ ಸೂಚನೆ ಫಲಕ : ಮಾಹಿತಿ ಹಕ್ಕು ಅಧಿನಿಯಮ ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದ ಮತ್ತು ನಿಯಮದಡಿಯಲ್ಲಿ ಕಾನೂನು ವಿಧಿ ವಿಧಾನ ಅನುಸರಿಸದೇ, ಪಾರದರ್ಶಕತೆ ಬಿಂಬಿಸುವ ಅಂಶವನ್ನು ಕಡೆಗಣಿಸಿರುವುದನ್ನು ಕಾಮಗಾರಿ ಸೂಚನೆ ಫಲಕದಲ್ಲಿ ಕಂಡು ಬರುತ್ತದೆ ಎಂದು ಸಂವಾದದಲ್ಲಿ ಪ್ರಸ್ತಾಪವಾದವು ಎಂದು ಅವರು ತಿಳಿಸಿದ್ದಾರೆ.ಪರಿಶೀಲನಾ ವರದಿ ಪ್ರಕಟಿಸಲಿ: ವರ್ಷದಿಂದ ವರ್ಷ, ಹಿಂದಿನ ವರ್ಷ ನೆಟ್ಟಿದ ಗಿಡಗಳಲ್ಲಿ ಬದುಕಿನ ಗಿಡಗಳನ್ನ ಪರಿಶೀಲಿಸಿ ಪರಿಶೀಲನಾ ವರದಿ ಮಾಡುವ ಕಟ್ಟು ನಿಟ್ಟಿನ ನೀತಿ ಇಲಾಖೆಯಲ್ಲಿ ಇರುತ್ತದೆ. ಆದ್ದರಿಂದ ನೆಟ್ಟ ಗಿಡಗಳೆಷ್ಟು ಬದುಕಿದ ಗಿಡಗಳೆಷ್ಟೋ ಎಂದು ಪ್ರತಿವರ್ಷ ಬದುಕಿನ ಗಿಡಗಳ ಪರಿಶೀಲನಾ ವರದಿ ಸಾರ್ವಜನಿಕವಾಗಿ ಪ್ರಕಟಿಸಿ ಇಲಾಖೆಯ ದಕ್ಷತೆಯನ್ನು ಬಿಂಬಿಸಬೇಕೆAದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

About The Author

error: Content is protected !!