ಹೋನ್ನಾವರ : ಕಾಸರಕೋಡ ಟೊಂಕ ಕಡಲತೀರದಲ್ಲಿ ರಿಡ್ಲೆ ಜಾತಿಯ ಕಡಲಾಮೆಯೊಂದು ಇಲ್ಲಿನ ಕಾಸರಕೋಡ ಟೊಂಕದ ಕಡಲತೀರದ 4ನೇ ಗೂಡಿನಲ್ಲಿ ಇಟ್ಟಿರುವ113 ಮೊಟ್ಟೆಗಳು ಒಡೆದು ಇಂದು 102ಮರಿಗಳು ಜನ್ಮತಾಳಿದೆ.
ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿ ಸ್ಥಳೀಯ ಜೈನಜಟಕೇಶ್ವರ ಸಂಘದ ಭಾಸ್ಕರ್ ತಾಂಡೇಲ, ರಮೇಶ ತಾಂಡೇಲ ಮತ್ತು ರಾಜುದತ್ತಾ ತಾಂಡೇಲ ನೇತೃತ್ವದಲ್ಲಿ ಕಡಲಾಮೆ ಮರಿಗಳನ್ನು ರವಿವಾರ ಮುಂಜಾನೆ ಸುರಕ್ಷಿತವಾಗಿ ಸಮುದ್ರಕ್ಕೆ ಬಿಡಲಾಯಿತು.ಈ ಸಂದರ್ಭದಲ್ಲಿ ಆಮೆ ಗೂಡುಗಳ ರಕ್ಷಣೆಗೆಂದೆ ಅರಣ್ಯ ಇಲಾಖೆಯಿಂದ ನಿಯೋಜಿಸಿರುವ ಉದಯ ತಾಂಡೇಲ ಮತ್ತು ಗುರು ಮಾದೇವ ತಾಂಡೇಲ ಹಾಗೂ ಸ್ಥಳೀಯ ವಿಠ್ಠಲ ತಾಂಡೇಲ, ಗಣಪತಿ ತಾಂಡೇಲ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

More Stories
ಉತ್ತಮ ಆರೋಗ್ಯ ಸುಸ್ಥಿರ ಸಂಪತ್ತು” ಆರೋಗ್ಯ ಮತ್ತು ಹೂಡಿಕೆ ಜಾಗೃತಿ ಕಾರ್ಯಕ್ರಮ
ಎ.ಸಿ.ಪಿ ಪಾಂಡುರಂಗ ಭಂಡಾರಿ ಇವರಿಗೆ ಮುಖ್ಯಮಂತ್ರಿಗಳ ಪೊಲೀಸ್ ಪದಕ.
ಯು.ಕೆ.ಸೌಹಾರ್ದ ಸೊಸೈಟಿ ಲಿಮಿಟೆಡ್ ಹೊನ್ನಾವರ ಶಾಖೆಯಲ್ಲಿ ಬೆಂಕಿ