ಸಿದ್ದಾಪ

ುರ: ತಾಲೂಕಿನ ಹಳ್ಳೆಬೈಲ ಗ್ರಾಮದ ಹುತ್ಗಾರಿನಲ್ಲಿ ನಿಲ್ಕುಂದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜಾರಾಮ ಹೆಗಡೆ ಬಿಳೆಕಲ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಹುತ್ಗಾರಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ಕಳೆದ ಐದು ವರ್ಷಗಳ ಕಾಲ ನಿಲ್ಕುಂದ ಗ್ರಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಜಾರಾಮ ಹೆಗಡೆ ಅವರನ್ನು ಗ್ರಾಮಸ್ಥರು ಊರಿನ ಪರವಾಗಿ ಸನ್ಮಾನಿಸಿದರು.

ಅಭಿನಂದನಾ ಭಾಷಣ ಮಾಡಿದ ಯುವ ಮುಖಂಡ ಗುರುಪ್ರಸಾದ ಹೆಗಡೆ ಹರ್ತೇಬೈಲ್, ಅಧಿಕಾರವೆಂಬುದು ಕೇವಲ ಸ್ಥಾನವಲ್ಲ, ಅದು ಒಂದು ಜವಾಬ್ದಾರಿ ಎಂದು ಭಾವಿಸಿ ರಾಜಾರಾಮ ಹೆಗಡೆ ಹಳ್ಳಿಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅವರ ನಿಸ್ವಾರ್ಥ ಸಮಾಜಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹೆಗಡೆಯವರ ಕಾರ್ಯವೈಖರಿ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸನ್ಮಾನ ಸ್ವೀಕರಿಸಿದ ರಾಜಾರಾಮ ಹೆಗಡೆ ಮಾತನಾಡಿ, ಗ್ರಾಮಸ್ಥರ ಪ್ರೀತಿ ಮತ್ತು ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು. ತಮ್ಮ ಯಶಸ್ಸಿನ ಹಿಂದೆ ಹಿರಿಯರ ಆಶೀರ್ವಾದ ಹಾಗೂ ಮಾರ್ಗದರ್ಶನವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾಗಿದ್ದ ವಿ.ಎಸ್. ಹೆಗಡೆ ಹೊಸಕುಳಿ ಅವರ ಸ್ಮರಣಾರ್ಥ ನೀಡಲಾಗುವ “ಯಕ್ಷ ವಿಶ್ವ ಪ್ರಶಸ್ತಿ”ಯನ್ನು ಹಾಸ್ಯ ಕಲಾವಿದ ಶ್ರೀಧರ ಹೆಗಡೆ ಚಪ್ಪರಮನೆ ಅವರಿಗೆ ಪ್ರದಾನಿಸಿ ಗೌರವಿಸಲಾಯಿತು.

ನಂತರ ಹಿರಿಯ ಕಲಾವಿದರ ಕೂಡುವಿಕೆಯಲ್ಲಿ “ಕೃಷ್ಣಾರ್ಜುನ ಕಾಳಗ” ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ಕಿಕ್ಕಿರಿದ ಪ್ರೇಕ್ಷಕರು ತಡರಾತ್ರಿವರೆಗೆ ಯಕ್ಷಗಾನವನ್ನು ಆಸ್ವಾದಿಸಿದರು.
ಕಾರ್ಯಕ್ರಮದಲ್ಲಿ ದಿನೇಶ ಗಿಳಿಗುಂಡಿ ಸ್ವಾಗತಿಸಿದರು. ಕಿರಣ ಹುತ್ಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ ಬಿಳೆಕಲ್ಲು ಪರಿಚಯಿಸಿದರು. ನಯನಾ ಮಾರಿಕೊಪ್ಪ ಹಾಗೂ ಪ್ರಸನ್ನ ಸೂರನಗದ್ದೆ ಅನಿಸಿಕೆಗಳನ್ನು ಹಂಚಿಕೊಂಡರು. ನರೇಂದ್ರ ಬಿಳೆಕಲ್ಲು ವಂದಿಸಿದರು.
ಉಮೇಶ ಕಲ್ಲಾರೆಮನೆ, ನಾಗೇಂದ್ರ ಬಿಳೆಕಲ್ಲು, ವಿವೇಕ ಗಿಳಿಗುಂಡಿ ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

More Stories
ಒಗ್ಗಟ್ಟಿನ ಶಕ್ತಿ: ಸಿದ್ದಾಪುರದ ಹಂಗಾರಖಂಡದಲ್ಲಿ ಹಳ್ಳಿಗರಿಂದಲೇ ಮಾದರಿ ಮಾನ್ಸೂನ್ ಶ್ರಮದಾನ, ವನಮಹೋತ್ಸವ!
ಪರಿಸರ ರಕ್ಷಣೆ ಮತ್ತು ಧಾರ್ಮಿಕ ಅಸ್ಮಿತೆಯ ಪುನರುಜ್ಜೀವನ: ಜೂನ್ 7 ರಂದು ಹಂಗಾರಖAಡದಲ್ಲಿ ನದಿ ಅಂಚಿನಲ್ಲಿ ವನ ಮಹೋತ್ಸವ
ಸಿದ್ದಾಪುರದಲ್ಲಿ ಉರ್ದು ಶಾಲೆ ತಡೆಗೋಡೆ ಕಾಮಗಾರಿಗೆ ಬಿಜೆಪಿ ವಿರೋಧ. ತಹಶೀಲ್ದಾರ್ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆದ ಕಾರ್ಯಕರ್ತರು