April 16, 2026

ಅತಿಕ್ರಮಣದಾರ “ ಮಹಜರ್ ” ಪ್ರಕ್ರಿಯೆ :ಸಮಿತಿಯ ಕಾರ್ಯ ಚಟುವಟಿಕೆಗೆ ರಾಜ್ಯ ಉಸ್ತುವಾರಿ ಸಮಿತಿಗೆ ಆಕ್ಷೇಪ ಸಲ್ಲಿಸಲಾಗುವುದು – ರವೀಂದ್ರ ನಾಯ್ಕ

ಭಟ್ಕಳ: ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ನಿರ್ಧಿಷ್ಟ ದಾಖಲೆ ಕೊರತೆಯಿಂದ, ದಾಖಲಾತಿಗಾಗಿ ಅಧಿಕಾರಿ ತಂಡದಿAದ ಜರುಗುತ್ತಿರುವ ಮಹಜರ್ ಪ್ರಕ್ರಿಯೆ ನ್ಯೂನ್ಯತೆ ಸರಿಪಡಿಸುವ ಉದ್ದೇಶದಿಂದ ಹೋರಾಟಗಾರರ ವೇದಿಕೆಯು ಸಮಿತಿಯ ಕಾರ್ಯ ಚಟುವಟಿಕೆಗೆ ರಾಜ್ಯ ಉಸ್ತುವಾರಿ ಸಮಿತಿಗೆ ಆಕ್ಷೇಪ ಸಲ್ಲಿಸಲಾಗುವುದು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಹಜರ್ ಪ್ರಕ್ರಿಯೆ ಕುರಿತು ಭಟ್ಕಳ ತಾಲೂಕಿನ ವಿವಿಧ ಅರಣ್ಯ ಅತಿಕ್ರಮಣದಾರರ ಸ್ಥಳಕ್ಕೆ ಭೇಟಿ ಕೊಟ್ಟ ನಂತರ ಬೆಳಕೆಯಲ್ಲಿ ಹೇಳಿದರು.


ನಿರ್ಧಿಷ್ಟ ದಾಖಲೆ ಕೊರತೆಯಿಂದ ದಾಖಲೆಗಾಗಿ ವಿವಿಧ ಅರಣ್ಯ ಭೂಮಿ ಹಕ್ಕು ಸಮಿತಿಯಲ್ಲಿ ತಿರಸ್ಕರಿಸಿದ ಅರ್ಜಿಗಳ ಕ್ಷೇತ್ರದ ಸಾಗುವಳಿ ದೃಡೀಕರಣಕ್ಕೆ, ಉನ್ನತ ಮಟ್ಟದ ಸಮಿತಿಯಿಂದ ಮಹಜರ್ ಮಾಡಿ, ಮಹಜರ್ ವರದಿಯನ್ನು ದಾಖಲೆಯಾಗಿ ಪರಿಗಣಿಸಲು ರಾಜ್ಯ ಉಸ್ತುವಾರಿ ಸಮಿತಿಯು ಜಿಲ್ಲಾಧಿಕಾರಿಗೆ ಜನವರಿ.6 ರಂದು ನಿರ್ದೇಶನ ನೀಡಲಾಗಿತ್ತು. ಆದರೆ, ನಿರ್ದೇಶನದ ಮೂಲ ಅಂಶವಾದ ಸಾಗುವಳಿ ಕುರುಹು ಮತ್ತು ಸಾಂದರ್ಭಿಕ ದಾಖಲೆಗಳನ್ನ ಪರಿಗಣಿಸದೇ ಅರ್ಜಿದಾರನ ಅರ್ಜಿಗೆ ಸಂಬAಧಿಸಿ ಮೌಲ್ಯತೆಯನ್ನು ಪರಿಶೀಲಿಸುತ್ತಿರುವುದು ಖೇಧಕರವೆಂದು ಅವರು ವ್ಯಾಖ್ಯಾನಿಸಿದರು.


ಮಹಜರಲ್ಲಿ ಸಾಗುವಳಿಯ ವಯಕ್ತಿಕ ದಾಖಲೆಗಳನ್ನು ಮಾತ್ರ ದಾಖಲಿಸಿ, ಸಾಗುವಳಿ ಮತ್ತು ವಾಸ್ತವ್ಯಕ್ಕೆ ಸಂಭAಧಿಸಿದ ಅರಣ್ಯವಾಸಿ ಮತ್ತು ಗ್ರಾಮದಲ್ಲಿ ಜನವಸತಿ ಇರುವ ಕುರಿತು ಸಾಂಧರ್ಭಿಕ ದಾಖಲೆಗಳನ್ನ ಮಹಜರ್ ನಲ್ಲಿ ಉಲ್ಲೇಖಿಸಿರುವುದು ಹಾಗೂ ಅರ್ಜಿದಾರರ ಕುಟುಂಬದಲ್ಲ್ಲಿ ಒಂದಕ್ಕಿAತ ಹೆಚ್ಚಿನ ಅರ್ಜಿ ಸಲ್ಲಿಸಿರುವÀ ಅರ್ಜಿ ಪರಿಗಣನೆಗೆ ಅವಕಾಶ ಇಲ್ಲದಿರುವುದು ಕಾನೂನಿಗೆ ವ್ಯತಿರಿಕ್ತವಾದ ನೀತಿ ಎಂದು ಅವರು ಪ್ರಸ್ತಾಪಿಸಿದರು.
ವೇದಿಕೆಯಲ್ಲಿ ಹೋರಾಟಗಾರರ ಪ್ರಮುಖರಾದ ಪಾಂಡುರAಗ ನಾಯ್ಕ ಬೆಳಕೆ, ಚಂದ್ರ ನಾಯ್ಕ ಬೆಳಕೆ, ನಾರಾಯಣ ಶಿರಜ್ಜಿಮನೆ, ಪದ್ಮಾವತಿ ವೆಂಕಟೇಶ, ಮಾದೇವಿ ನಾಯ್ಕ, ಸುಬ್ರಾಯ ನಾಯ್ಕ ಬೈಲೂರು, ಮುಂತಾದವರು ಉಪಸ್ಥಿತರಿದ್ದರು.
ಕಳೆದ ಮೂರು ದಶಕದಿಂದ ಅರಣ್ಯವಾಸಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ರವೀಂದ್ರ ನಾಯ್ಕ ಅವರನ್ನು ಹಾಗೂ ಪಾಂಡುರAಗ ನಾಯ್ಕ ಬೆಳಕೆ, ಚಂದ್ರ ನಾಯ್ಕ ಬೆಳಕೆ ಅವರಿಂದ ಅಭಿನಂದಿಸಲಾಯಿತು.

ನಿರ್ದೇಶನಕ್ಕೆ ವಿರುದ್ದ:

ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯ ನಡವಳಿಕೆಗೆ ವ್ಯತಿರಿಕ್ತವಾಗಿ ಕಾನೂನು ನೀತಿ, ನಿಯಮ ಬಾಹಿರವಾಗಿ ಹಾಗೂ ಸಾಗುವಳಿ ಮಹಜರ್ ವರದಿಗೆ ಪ್ರಾತಿನಿಧ್ಯ ನೀಡದೇ ಅರ್ಜಿದಾರನ ಹಿಡುವಳಿ, ಆರ್ಥಿಕ ಉತ್ಪನ್ನ ಮುಂತಾದ ಷರತ್ತು ಭದ್ದ ಪರಿಗಣನೆ ಮೇರೆಗೆ ಮಾಹಿತಿ ಸಂಗ್ರಹಿಸುವುದು ಹಾಗೂ ಅರ್ಜಿ ಮೌಲ್ಯತೆಯನ್ನ ಪರಿಶೀಲಿಸುವ ಕಾರ್ಯ ಜಿಲ್ಲೆಯಲ್ಲಿ ನಿಯಮವನ್ನು ಉಲ್ಲಂಘಿಸಿರುವ ಕುರಿತು ರಾಜ್ಯ ಅರಣ್ಯ ಭೂಮಿ ಹಕ್ಕು ಉಸ್ತುವಾರಿ ಸಮಿತಿಗೆ ಆಕ್ಷೇಪ ಸಲ್ಲಿಸಲಾಗುತ್ತಿದೆ ಎಂದು ಅವರು ಹೇಳಿದರು.

About The Author

error: Content is protected !!