ಹೊನ್ನಾವರ: ತಾಲೂಕಿನ ಅರೇಅಂಗಡಿ ಶ್ರೀ ಸತ್ಯಸಾಯಿ ಕರಿಕಾನ ಪರಮೇಶ್ವರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಕಲಾ ವಿಭಾಗದಲ್ಲಿ ಶೇ. 79% ವಾಣಿಜ್ಯ ವಿಭಾಗದಲ್ಲಿ ಶೇಕಡಾ 100% ಫಲಿತಾಂಶ ದಾಖಲಾಗಿದೆ. ಜನಾರ್ದನ ಮಹದೇವ ಮರಾಠಿ 584 ಅಂಕ ಪಡೆದು ( 97.33%) ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು, ನಾಗಶ್ರೀ ರಾಮ ಗೌಡ 567 ಅಂಕ ಪಡೆದು ( 94.88% ) ದ್ವೀತಿಯ ಸ್ಥಾನ, ರಾಮಚಂದ್ರ ಲೋಮ ಮರಾಠಿ 535 ಅಂಕ ( 89.16 ) ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರಾದ ವಿ.ಎನ್.ಭಟ್ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ


More Stories
ಭಟ್ಕಳದ ಶ್ರೀ ಗುರು ವಿದ್ಯಾಧೀರಾಜ ಪಿಯು ಕಾಲೇಜಿನಲ್ಲಿ CA ಫೌಂಡೇಶನ್ ಮತ್ತು CS ಪ್ರವೇಶ ಪರೀಕ್ಷೆ ತರಬೇತಿ ಕಾರ್ಯಕ್ರಮ ಉದ್ಘಾಟನೆ
ಹಳದಿಪುರ ಕೃಷ್ಣಾಶ್ರಮ ಮಠದಲ್ಲಿ ವ್ಯಕ್ತಿ ಮೇಲೆ ಹಲ್ಲೆ ಆರೋಪ: ವಿಡಿಯೋ ವೈರಲ್
ಬಡ ಪ್ರತಿಭಾವಂತ ದಿವ್ಯಾಂಗ ವಿದ್ಯಾರ್ಥಿನಿ ಶ್ರೀರಕ್ಷಾಳ ವಿದ್ಯಾಭ್ಯಾಸ ಹಾಗೂ ಬದುಕಿಗೆ ಆಸರೆಯಾಗಿ: ಒಂದು ಮಾನವೀಯ ವಿನಂತಿ