ಕುಮಟಾ : ಇಂಗ್ಲೀಷ್ ವರ್ತಮಾನದಲ್ಲಿ ಜಗತ್ತನ್ನು ಆಳುತ್ತಿದೆ. ದೇಶ – ವಿದೇಶಗಳಲ್ಲಿ ಇಂಗ್ಲಿಷಿಗೆ ವಿಶೇಷವಾದ ಮಹತ್ವ ಇದೆ. ಇಂಗ್ಲೀಷನಲ್ಲಿ ಮಾತನಾಡಲು ರೂಡಿಸಿಕೊಳ್ಳುವುದರಿಂದ ಮತ್ತು ಇಂಗ್ಲೀಷ ಸಾಹಿತ್ಯದ ಅಧ್ಯಯನದಿಂದ ಪ್ರಭುದ್ಧರಾಗಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಬೋಧಕರ ಸಂಘ ಹಾಗೂ ಕರ್ನಾಟಕ ಸಂಸ್ಕೃತ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾಗಿರುವ ಮಂಜುನಾಥ ಗಾಂವಕರ್ ಬರ್ಗಿಯವರು ಹೇಳಿದರು.
ಅವರು ತಾಲ್ಲೂಕಿನ ಮಾಸೂರಿನ ಶ್ರೀ ಬಬ್ರುಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಕರ್ನಾಟಕ ರಾಜ್ಯ ಬೋಧಕರ ಸಂಘದ ಸಹಯೋಗದಲ್ಲಿ ಸಂಯೋಜಿಸಿದ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಯಾವ ಭಾಷೆಯನ್ನು ವಿರೋಧಿಸಬಾರದು. ಹೆಚ್ಚು – ಹೆಚ್ಚು ಭಾಷೆಗಳ ಅರಿವನ್ನು ಹೊಂದಿದಂತೆ ನಮ್ಮನ್ನು ನಾವು ಬೆಳೆಸಿಕೊಳ್ಳಲು ಸಾಧ್ಯವಿದೆ. ಅದರಲ್ಲಿಯೂ ಇಂಗ್ಲಿಷಿಗೆ ವಿಶೇಷವಾದ ಮನ್ನಣೆ ಇದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ವ್ಯಾಪಕವಾಗಿ ವಿಶ್ವದಾದ್ಯಂತ ಪಸರಿಸಿದ ಭಾಷೆಯು ಇದಾಗಿದ್ದು, ಎಳೆವೆಯಲ್ಲಿ ಈ ಭಾಷೆಯಲ್ಲಿ ಸಿದ್ಧಿಯನ್ನು ಸಾಧಿಸುವುದು ಸುಲಭ ಸಾಧ್ಯ ಎಂದು ಅವರು, ಬಹುಮುಖಿ ಉದ್ದೇಶದ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಲು ಕರೆಕೊಟ್ಟರು.
ಹೆಗಡೆ ಗ್ರಾಮ ಪಂಚಾಯತದ ನಿಕಟಪೂರ್ವ ಅಧ್ಯಕ್ಷರಾದ ಮಂಜುನಾಥ ಪಟಗಾರರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಪಂಚಾಯತದ ಮಾಜಿ ಸದಸ್ಯರಾದ ಗೋವಿಂದ ಪಟಗಾರ, ಆಡಳಿತ ಮಂಡಳಿಯ ಸದಸ್ಯರಾದ ಎಚ್. ಎಚ್. ಪಟಗಾರ ಹಾಗೂ ನಿವೃತ್ತ ದೈಹಿಕ ಶಿಕ್ಷಕರಾದ ಎಲ್.ಎನ್. ಪಟಗಾರರವರು ಸಾಂದರ್ಭಿಕವಾಗಿ ಮಾತನಾಡಿದರು. ಶಾಲಾ ಮುಖ್ಯಾಧ್ಯಾಪಕರಾದ ಶಿವಚಂದ್ರರವರು ಸ್ವಾಗತಿಸಿ – ವಂದಿಸಿದರು. ಬರ್ಗಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ರಮ್ಯಾ ಪಟಗಾರ ಹಾಗೂ ಗೌತಮಿ ಹರಿಕಂತ್ರರವರು ಪ್ರಾರ್ಥಿಸಿದರು. ಇಂಗ್ಲೀಷ್ ಭಾಷಾ ಸಂಪನ್ಮೂಲ ವ್ಯಕ್ತಿಗಳಾದ ನಾಗರತ್ನ ಪಟಗಾರರವರು ಉಪಸ್ಥಿತರಿದ್ದರು.

More Stories
ಬರ್ಗಿ ಸಂಸ್ಕೃತೋತ್ಸವದಲ್ಲಿ ರಾಮಾಯಣ ಪರೀಕ್ಷೆಯ ಸಾಧಕಿಯರಿಗೆ ಗೌರವ
ಹಿರೇಗುತ್ತಿ ಹೈಸ್ಕೂಲಿನಲ್ಲಿ ಅಂಬೇಡ್ಕರ್ ಜನ್ಮ ಜಯಂತಿ ಆಚರಣೆ
ಸಂಸ್ಕೃತವು ಕನ್ನಡಕ್ಕೆ ಪೂರಕ : ಬರ್ಗಿ ಸಂಸ್ಕೃತೋತ್ಸವದಲ್ಲಿ ಕನ್ನಡದ ಸಮೀರ್ ಅಭಿಮತ