(ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ)
ಹೊನ್ನಾವರ : “ದೇವರ ದೃಷ್ಠಿಯಲ್ಲಿ ಎಲ್ಲರೂ ಸಮಾನರು ಎನ್ನುವ ರೀತಿಯ ಸಮಾನತೆೆಗಿಂತ, ಸಾಮಾಜಿಕ ಸಮಾನತೆಯನ್ನು ಡಾ ಬಿ.ಆರ್ ಅಂಬೇಡ್ಕರ ಬಯಸಿದ್ದರು” ಎಂದು ತಾಲೂಕ ಆಸ್ಪತ್ರೆ ಹೊನ್ನಾವರದ ಸ್ತ್ರೀ ರೋಗ ತಜ್ಞರಾದ ಡಾ|| ಕೃಷ್ಣಾ ಜಿ ಹೇಳಿದರು. ಅವರು ಆಸ್ಪತ್ರೆಯಲ್ಲಿ ನಡೆದ ಡಾ|| ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.ಅವರು ಮಾತನ್ನು ಮುಂದುವರಿಸುತ್ತಾ “ ಅಂಬೇಡ್ಕರ್ ಸಂವಿಧಾನ ರಚಿಸುವ ಸಂದರ್ಭದಲ್ಲಿ ಸಮಾಜದಲ್ಲಿ ಸಮಾನತೆ ಅನ್ನುವುದು ದೂರದ ಮಾತಾಗಿತ್ತು. ಜಾತಿ ಪದ್ಧತಿ ತಾಂಡವ ಆಡುತ್ತಿತ್ತು. ಕೆಳವರ್ಗದ ಜನ ತುಂಬಾ ಹೀನಾಯವಾಗಿ ಜೀವನ ನಡೆಸುತ್ತಿದ್ದರು. ಈ ನಿಟ್ಟಿನಲ್ಲಿ ಅವರಿಗೆಲ್ಲರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಅಂಶಗಳನ್ನು ಜಾರಿಗೆ ತಂದರು. ಧರ್ಮ ನಿರಪೇಕ್ಷಕ ಅಂಶಗಳು ಸಂವಿಧಾನದಲ್ಲಿರುವಂತೆ ರಚಿಸಿದರು. ಮಹಿಳೆಯರಿಗೆ ಪುರುಷರಂತೆ ಸಮಾನ ಅವಕಾಶಗಳನ್ನು ಒದಗಿಸಿಕೊಡುವ ಅಂಶಗಳು ಸಂವಿಧಾನದಲ್ಲಿ ಇರುವಂತೆ ನೋಡಿಕೊಂಡರು. ಇದರ ಪರಿಣಾಮ ಇವತ್ತು ನಾವೆಲ್ಲ ಒಂದು ಉತ್ತಮ ಬದುಕು ನಡೆಸಲು ಕಾರಣವಾಗಿದೆ. ಮೊದಲೆಲ್ಲ ಅಂಬೇಡ್ಕರ್ ದಲಿತ ನಾಯಕರು ಎಂದು ಅಷ್ಟಕ್ಕೆ ಸೀಮಿತಗೊಳಿಸುವ ಪ್ರಯತ್ನಮಾಡಲಾಗಿತ್ತು. ಆದರೆ ಈಗ ಎಲ್ಲರಿಗೂ ಅರ್ಥವಾಗುತ್ತಿದೆ.ಡಾ|| ಬಿ.ಆರ್ ಅಂಬೇಡ್ಕರ್ ಎಲ್ಲರಿಗೂ ಸಲ್ಲಬೇಕಾದವರು. ಅವರೊಬ್ಬರು ವಿಶ್ವಶಕ್ತಿಯಾಗಿದ್ದರು. ಇವತ್ತು ನಾವು ಸಂವಿಧಾನದ ಆಶಯಗಳನ್ನು ಗೌರವಿಸುವುದು ಮತ್ತ ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿ ಮಾತನಾಡುತ್ತಾ “ ಅಂಬೇಡ್ಕರ್ ರವರ ಆಧರ್ಶಗಳನ್ನು ಪಾಲಿಸುವದರ ಮೂಲಕ ಉತ್ತಮ ಸಮಾಜ ಕಟ್ಟೋಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಎಲ್ಲ ವ್ಯದ್ಯಾಧಿಕಾರಿಗಳು, ಸಿಬ್ಬಂಧಿವರ್ಗ, ಸಾರ್ವಜನಿಕರು ಭಾಗವಹಿಸಿದರು. ಸಿಬ್ಬಂಧಿಗಳಾದ ದೇವಿದಾಸ ಎಸ್ ಗುನಗಿ ಕಾರ್ಯಕ್ರಮ ನಿರ್ವಹಿಸಿದರು.

More Stories
ಗುಣವಂತೆ ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ವೈಭವ
ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ
ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ