

ಕುಮಟಾ : ಗೋಕರ್ಣದಿಂದ ಅನತಿ ದೂರದಲ್ಲಿರುವ ಸುಮಾರು 140 ವರ್ಷಗಳ ಕಾಲ ಇತಿಹಾಸ ಹೊಂದಿರುವ ರೂರಲ್ ಎಜುಕೇಶನ್ ಸೊಸೈಟಿಯ ಆನಂದಾಶ್ರಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ.


ಶಾಲೆಯ ಒಟ್ಟು ಫಲಿತಾಂಶ 98.93% ಆಗಿದೆ. ಉನ್ನತ ಶ್ರೇಣಿಯಲ್ಲಿ 16 , ಪ್ರಥಮ ಶ್ರೇಣಿಯಲ್ಲಿ 44, ದ್ವಿತೀಯ ಶ್ರೇಣಿಯಲ್ಲಿ 22 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. ಶಾಲೆಯ ಗುಣಾತ್ಮಕ ಫಲಿತಾಂಶ ಂ ಆಗಿದ್ದು ಪರೀಕ್ಷೆಗೆ ಕುಳಿತ 97 ವಿದ್ಯಾರ್ಥಿಗಳಲ್ಲಿ 95 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಗೆ ಪ್ರಥಮ ಸ್ಥಾನವನ್ನು *ಕೃಷ್ಣ ಜಿ . ಹಿರೇಭಟ್ 574 ಅಂಕ 91.68 %ದ್ವಿತೀಯ ಮಾನ್ಸಿ ರಾಮಚಂದ್ರ ನಾಯ್ಕ್ 556ಅಂಕ 88.96% ತೃತೀಯ ನಾಗಶ್ರೀ ರಾಘವೇಂದ್ರ ಗೌಡ 554ಅಂಕ 88.64% . ಪಡೆದಿರುತ್ತಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲೆ ಮುಖ್ಯಾದ್ಯಪಕರಾದ ಗಂಗಾಧರ ಭಟ್ , ಶಿಕ್ಷಕರು, ಆಡಳಿತ ಮಂಡಳಿ ಅಧ್ಯಕ್ಷರಾದ ಆತ್ಮರಾಮ್ ಎಸ್ ಬಳವಳ್ಳಿ ಖಜಾಂಚಿಗಳಾದ ಗಜಾನನ ಪಿ. ನಾಡ್ಕರ್ಣಿ ಕಾರ್ಯದರ್ಶಿಗಳಾದ ವಿವೇಕ್ ವಿ. ನಾಡಕರ್ಣಿ ಯವರು, ಮಾತೃ ಸಂಸ್ಥೆಯ ಸದಸ್ಯರುಗಳು ಊರ ನಾಗರಿಕರು ಹಳೆಯ ವಿದ್ಯಾರ್ಥಿಗಳು ಪಾಲಕರು ಶುಭ ಹಾರೈಸಿರುತ್ತಾರೆ.

About The Author




More Stories
ಹಿರೇಗುತ್ತಿ ಹೈಸ್ಕೂಲಿನಲ್ಲಿ ಮಕ್ಕಳ ರಕ್ಷಣಾ ಕಾಯ್ದೆಗಳ ಅರಿವು ಜಾಗೃತಿ ಕಾರ್ಯಕ್ರಮ
ಹಿರೇಗುತ್ತಿ ಹೈಸ್ಕೂಲಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ‘ವ್ಯಸನ ಮುಕ್ತ ದಿನಾಚರಣೆ’
ಮಿರ್ಜಾನ್ ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ ಭಕ್ತಿ-ಶ್ರದ್ಧೆಯಿಂದ ನಡೆದ ‘ಗುರು ಪೂರ್ಣಿಮೆ’ ಆಚರಣೆ