April 29, 2026

ಮತ್ತೊಮ್ಮೆ ಶೇ. ನೂರರ ಸಾಧನೆ ಮಾಡಿದ ಜಾಲಿಯ ಸರ್ಕಾರಿ ಪ್ರೌಢಶಾಲೆ

ಭಟ್ಕಳ: ತಾಲೂಕಿನ ಜಾಲಿ ಸರಕಾರಿ ಪ್ರೌಢಶಾಲೆಯ 23 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶಾಲಾ ಫಲಿತಾಂಶ 100% ಆಗಿದ್ದು, ನಿರಂತರ ನಾಲ್ಕನೇ ಬಾರಿ ಈ ಸಾಧನೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

23 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 8 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಹನಾ ತಿಮ್ಮಪ್ಪ ನಾಯ್ಕ (611ಅಂಕ/97.76%) ಶಾಲೆಗೆ ಪ್ರಥಮ, ಮನೋಜ ಸಣ್ಣು ಗೊಂಡ (605/96.8%)ದ್ವಿತೀಯ ಮತ್ತು ಸಿಂಚನಾ ರಾಜು ನಾಯ್ಕ (589/94.24 %) ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.ಗುಣಮಟ್ಟದ ದೃಷ್ಟಿಯಲ್ಲಿಯೂ ಶಾಲೆ ‘ಎ’ ಗ್ರೇಡ್ ಪಡೆದಿದ್ದು. ಎಲ್ಲ ವಿದ್ಯಾರ್ಥಿಗಳ ಗುಣಾತ್ಮಕ ಸರಾಸರಿ ಅಂಕ 93.03 ರಷ್ಟಿದೆ.

ಜಾಲಿ ಸರಕಾರಿ ಪ್ರೌಢಶಾಲೆ ಪ್ರಾರಂಭವಾದಾಗಿನಿAದ ಇದುವರೆಗಿನ 16 ಎಸ್ ಎಸ್ ಎಲ್ ಸಿ ಬ್ಯಾಚ್ ಗಳಲ್ಲಿ 11 ಸಲ ನೂರಕ್ಕೆ ನೂರರಷ್ಟು ಸಾಧನೆ ಮಾಡಿದೆ. ತೀರಾ ಹಿಂದುಳಿದ ಮತ್ತು ಬಡ ಕುಟುಂಬದ ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಊರ ನಾಗರಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಅಭಿನಂದನೆ ತಿಳಿಸಿದ್ದಾರೆ.

About The Author

error: Content is protected !!