May 13, 2026

ಅರಣ್ಯ ಭೂಮಿ ಅತೀಕ್ರಮಣ ಸಕ್ರಮ ಸಮಸ್ಯೆ ಗೊಂದಲ ಬಗೆಹರಿಸಲು ಸಂವಾದ


ಹೋರಾಟ ಸಮಿತಿಯಿಂದ ಸಚಿವ ವೈದ್ಯರಿಗೆ ಮನವಿ.

ಹೋರಾಟ ಪ್ರಮುಖರೊಂದಿಗೆ ಉನ್ನತಾಧಿಕಾರ ಮಟ್ಟದ ಜಂಟಿ ಸಂವಾದ ಸಭೆ ನಡೆಸಲು ಸಚಿವ ವೈದ್ಯ ಸಮ್ಮತಿ.

ಹೋನ್ನಾವರ : ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ನೇತೃತ್ವದ ನಿಯೋಗ ಸೋಮವಾರ ಮೀನುಗಾರಿಕೆ ಸಚಿವರ ಹೊನ್ನಾವರದ ಕಛೇರಿಯಲ್ಲಿ ಭೇಟಿಯಾಗಿ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ಪ್ರಕ್ರೀಯೆಯಲ್ಲಿನ ಗೊಂದಲ ಬಗೆಹರಿಸುವ ಸಂಬಂಧ ವಿಸ್ತ್ರತ ಚರ್ಚೆ ನಡೆಸಿದ ನಂತರ ಸಚಿವ ವೈದ್ಯ ಹೋರಾಟ ಪ್ರಮುಖರೊಂದಿಗೆ ಉನ್ನತಾಧಿಕಾರ ಮಟ್ಟದ ಜಂಟಿ ಸಂವಾದ ಸಭೆ ನಡೆಸಲು ಸಮ್ಮತಿಸಿದ್ದು ಜಿಲ್ಲಾಧಿಕಾರಿಗಳ ಉಪಸ್ತಿತಿಯಲ್ಲಿ ಅರಣ್ಯ ಹಕ್ಕು ಹೋರಾಟ ಪ್ರಮುಖ ರೊಂದಿಗೆ ಉನ್ನತಾಧಿಕಾರ ಮಟ್ಟದ ಸಂವಾದ ಸಭೆ ಏರ್ಪಡಿಸಿ,ಅರಣ್ಯ ಹಕ್ಕುಕಾಯ್ದೆಯ ಅನುಷ್ಠಾನ ಪ್ರಕ್ರೀಯೆಯಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಸದ್ಯದಲ್ಲೇ ಮಾಡುವುದಾಗಿ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳವೈದ್ಯ ಇಂದು ಸ್ಪಷ್ಟ ಪಡಿಸಿದ್ದಾರೆ.


ಹೋರಾಟ ಸಮಿತಿ ಇಂದು ಸಚಿವರಿಗೆ ನೀಡಿದ ಮನವಿಯಲ್ಲಿ, ಈಹಿಂದೆ ತಿರಸ್ಕ್ರತಗೊಂಡಿರುವ ಅರಣ್ಯ ಹಕ್ಕು ಕ್ಲೇಮು ಅರ್ಜಿಗಳ ಪುನರ್ ಪರಿಶಿಲನೆ ನಡೆಸಲು ಉಚ್ಚ ನ್ಯಾಯಾಲಯ ಮತ್ತು ರಾಜ್ಯ ಮಟ್ಟದ ಅರಣ್ಯ ಹಕ್ಕು ಮೇಲ್ವಿಚಾರಣ ಸಮಿತಿ ಆದೇಶ ಮಾಡಿದರೂ ಸಹ ಅನುಷ್ಠಾನ ಪ್ರಕ್ರೀಯೆಯಲ್ಲಿ ಈ ಹಿಂದೆ ಅಧಿಕಾರಿಗಳ ಮಟ್ಟದಲ್ಲಿ ಇದ್ದ ಗೊಂದಲದಿಂದ ಜಿಲ್ಲೆಯ ಬಹುತೇಕ ಅರಣ್ಯ ಹಕ್ಕು ಅರ್ಜಿಗಳು ಸಾರಾ ಸಗಟು ತಿರಸ್ಕ್ರತ ಗೊಂಡಿದ್ದವು. ಇದರಿಂದ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ಉಂಟಾಗಿತ್ತು. ಇದನ್ನು ಬಗೆಹರಿಸಲು ಕೆಲವು ತಿಂಗಳ ಹಿಂದೆ ಸಚಿವರ ನೇತೃತ್ವದಲ್ಲಿ ಹೋರಾಟ ಪ್ರಮುಖರ ನಿಯೋಗವನ್ನು ಮುಖ್ಯ ಮಂತ್ರಿಗಳಲ್ಲಿ ಕೊಂಡೊಯ್ದು, ರಾಜ್ಯಮಟ್ಟದ ಅರಣ್ಯ ಹಕ್ಕು ಮೇಲ್ವಿಚಾರಣ ಸಮಿತಿಯ ಗಮನಸೆಳೆಯಲಾಗಿತ್ತು.ಅದರ ಪರಿಣಾಮವಾಗಿ ಅರಣ್ಯ ಭೂಮಿಯಲ್ಲಿನ ಸಾಗುವಳಿ ಸ್ಥಳದ ಮಹಜರು ನಡೆಸಲು ಮತ್ತು ತಿರಸ್ಕ್ರತ ಅರ್ಜಿಗಳ ಪುನರಪರಿಶೀಲನೆ ನಡೆಸಲು ನಿರ್ದೇಶನ ಆಗಿತ್ತು ಹಾಗೂ ಸ್ಥಳದಲ್ಲಿನ ಸಾಂದರ್ಭಿಕ ಸಾಕ್ಷ್ಯಗಳನ್ನು ಗುರುತಿಸಿ,ಅರ್ಜಿಗಳ ಪುನರಪರಿಶೀಲನೆಯ ಸಂದರ್ಭದಲ್ಲಿ ಮಹಜರು ದ್ರಡೀಕರಣವನ್ನು ಪುರಾವೆಯಾಗಿ ಪರಿಗಣಿಸಿ ಅರ್ಹರಿಗೆ ಭೂಮಿಯ ಅಧಿಭೋಗದ ಹಕ್ಕು ನೀಡಲು ಸೂಚಿಸಲಾಗಿತ್ತು .ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹಾಗೂ ನೈಸರ್ಗಿಕ ನ್ಯಾಯ ನಿಯಮಕ್ಕೆ ವಿರುದ್ಧವಾಗಿ ಜಿಲ್ಲೆಯಲ್ಲಿ ಸ್ಥಳ ಮಹಜರು ಪ್ರಕ್ರೀಯೆ ನಡೆಯುತ್ತಿರುವ ಬಗ್ಗೆ ನಿಯೋಗ ಸಚಿವರಲ್ಲಿ ತನ್ನ ತೀವ್ರ ಕಳವಳ ಮತ್ತು ಆಕ್ಷೇಪ ವ್ಯಕ್ತ ಪಡಿಸಿದೆ.

ರಾಜ್ಯ ಮೇಲ್ವಿಚಾರಣ ಸಮಿತಿ, ಜಿಲ್ಲಾಡಳಿತಕ್ಕೆ ನೀಡಿರುವ ನಿರ್ದೇಶನದಲ್ಲಿ ವಿಶೇಷವಾಗಿ ಯಾವುದೇ ಕ್ಲೇಮುದಾರನು ಸಹ ಅರಣ್ಯ ಹಕ್ಕುಕಾಯ್ದೆಯ ಸೌಲಭ್ಯದಿಂದ ವಂಚಿತ ರಾಗದಂತೆ ಅಗತ್ಯ ಕ್ರಮ ವಹಿಸಲು ಜಿಲ್ಲಾಮಟ್ಟದ ಅರಣ್ಯ ಹಕ್ಕುಸಮಿತಿಗೆ ಸೂಚಿಸಿದೆ.ಹಾಗೂ ಅರಣ್ಯ ಹಕ್ಕು ಮಾನ್ಯತೆ ನಿಯಮ13ರಲ್ಲಿ ಹೇಳಿರುವ ಸ್ಥಳದಲ್ಲಿನ ಒಂದಕ್ಕಿಂತ ಹೆಚ್ಚಿನ ಸಾಂದರ್ಭಿಕ ಸಾಕ್ಷ್ಯಗಳನ್ನು ಗುರುತಿಸಿ,ಸ್ಥಳ ಮಹಜರು ಪ್ರಕ್ರಿಯೆಯಲ್ಲಿ ದಾಖಲಿಸಿ ವರದಿಸಲು ಆಯಾ ಸ್ಥಳ ತನಿಖಾ ಸಮಿತಿಗಳಿಗೆ ರಾಜ್ಯ ಮಟ್ಟದ ಮೇಲ್ವಿಚಾರಣ ಸಮಿತಿಸೂಚಿಸಿತ್ತು.


ಆದರೆ ನಮ್ಮ ಜಿಲ್ಲೆಯಲ್ಲಿ ಈ ಆದೇಶಕ್ಕೆ ವ್ಯತಿರಿಕ್ತವಾಗಿ ಮತ್ತು ಅರಣ್ಯ ಭೂಮಿ ಸಾಗುವಳಿದಾರರ ಹಿತಕ್ಕೆ ಚ್ಯುತಿ ತರುವ ರೀತಿಯಲ್ಲಿ ಕೇವಲ ಕಾಟಾಚಾರಕ್ಕೆಂಬಂತೆ ಸ್ಥಳ ಮಹಜರು ಪ್ರಕ್ರಿಯೆಗಳು ನಡೆಯುತ್ತಿದ್ದು ಅರಣ್ಯ ಭೂಮಿಸಾಗುವಳಿದಾರರನ್ನು ವಿಶ್ವಾಸಕ್ಕೆ ಪಡೆಯದೇ ನೈಸರ್ಗಿಕ ನ್ಯಾಯ ನಿಯಮಗಳಿಗೆ ವ್ಯತಿರಿಕ್ತವಾಗಿ ಸ್ಥಳ ಮಹಜರು ಪ್ರಕ್ರಿಯೆಗಳು ನಡೆಯುತ್ತಿವೆ.ಇದರಿಂದ ಜಿಲ್ಲೆಯ ಜನರಿಗೆ ಅನ್ಯಾಯ ಆಗುತ್ತಿದ್ದು ಜನರಲ್ಲಿ ಆತಂಕ ಉಂಟಾಗಿದೆ.ಆದ್ದರಿಂದ ಈ ಪ್ರಮುಖ ವಿಚಾರದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಮದ್ಯಪ್ರವೇಶ ಮಾಡಬೇಕು
ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಹೋರಾಟ ಪ್ರಮುಖರ ಮತ್ತು ಉನ್ನತಾಧಿಕಾರ ಮಟ್ಟದ ಜಂಟಿ ಸಂವಾದ ಸಭೆಯೊಂದನ್ನು ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯೋಜಿಸಿ ಜಿಲ್ಲೆಯ ಈ ಪ್ರಮುಖ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಚಂದ್ರಕಾಂತ ಕೊಚರೇಕರ ಸಚಿವರಿಗೆ ಸಲ್ಲಿಸಿದ ತಮ್ಮ ಮನವಿಯಲ್ಲಿ ಆಗ್ರಹ ಪಡಿಸಿದ್ದಾರೆ.


ನಿಯೋಗದಲ್ಲಿ ಹೋರಾಟ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಶ್ರೀಧರ ಶೆಟ್ಟಿ ಹಿರೇಬೈಲ,ವಾಮನ ನಾಯ್ಕ ಮಂಕಿ,ಅಶ್ಫಕ್ ಶೇಖ್ , ಶ್ರೀಕಾಂತ ನಾಯ್ಕ ಗುಂಡಿಬೈಲ,ಮಂತು ಫರ್ನಾಂಡಿಸ್ ಜನಕಡ್ಕಲ್, ಬ್ಲಾಕ ಕಾಂಗ್ರೆಸ್ಸ ಅಧ್ಯಕ್ಷ ಗೋವಿಂದ ಎಸ್. ನಾಯ್ಕ,ಸಂಕೇತ ನಾಯ್ಕ, ಮತ್ತಿತರ ಪ್ರಮುಖರು ಇದ್ದರು.

About The Author

error: Content is protected !!