May 13, 2026

ಹಿಂದು ಕೊಂಕಣಿ ಭಾಷಿಕರ ಒಗ್ಗಟ್ಟಿಗೆ ಹಿಂದು ಕೊಂಕಣಿ ಪ್ರೀಮಿಯರ್ ಲೀಗ್

ಭಟ್ಕಳ: ಹಿಂದು ಕೊಂಕಣಿ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಸಮಾಜದ ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯರ ಸಹಕಾರದೊಂದಿಗೆ ಹಿಂದು ಕೊಂಕಣಿ ಭಾಷಿಕರಿಗಾಗಿ ಆಯೋಜಿಸಿರುವ ‘ಹಿಂದು ಕೊಂಕಣಿ ಪ್ರೀಮಿಯರ ಲೀಗ್-2026’ ಕ್ರಿಕೆಟ್ ಪಂದ್ಯಾವಳಿಯು ಮೇ 9-10 ರಂದು ಇಲ್ಲಿನ ಶ್ರೀ ಗುರು ಸುಧಿಂದ್ರ ಕಾಲೇಜು ಮೈದಾನದಲ್ಲಿ ಜರುಗಲಿದೆ ಎಂದು ಬಳಗದ ಆಯೋಜಕ ರಾಮಚಂದ್ರ ಕಿಣಿ ತಿಳಿಸಿದರು.

ಅವರು ಹಿಂದು ಕೊಂಕಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಕುರಿತಾಗಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ‘ಸಮಾನ ಮನಸ್ಕರನ್ನೊಳಗೊಂಡ 5-6 ಜನರ ಚಿಂತನೆ ಹಾಗೂ ಮಾತುಕತೆಯಿಂದ ಆರಂಭಗೊAಡ ಈ ಹಿಂದು ಕೊಂಕಣಿ ಗೆಳೆಯರ ಬಳಗವು ಒಂದು ಕ್ರಿಕೆಟ್ ಪಂದ್ಯದ ಮೂಲಕ ಹಿಂದು ಸಮಾಜದಲ್ಲಿ ಕೊಂಕಣಿ ಭಾಷಿಕರನ್ನೊಳಗೊಂಡ ಹತ್ತು ಚಿಕ್ಕ ಚಿಕ್ಕ ಸಮಾಜವನ್ನು ಕೇಂದ್ರೀಕರಿಸಿ ಒಗ್ಗೂಡಿಸುವ ಉದ್ದೇಶಕ ಮುನ್ನುಡಿ ಇದಾಗಿದೆ. ಈಗಾಗಲೇ ಈ ಪಂದ್ಯಾವಳಿಯಲ್ಲಿ 6 ತಂಡ ಹಾಗೂ ಮಾಲೀಕರು ರಚಿಸಲಾಗಿದ್ದು ಕೊಂಕಣಿ ಭಾಷಿಕರಲ್ಲಿನ ಕ್ರಿಕೆಟ್ ಆಸಕ್ತರನ್ನು ಒಂದು ತಂಡಕ್ಕೆ ತಲಾ 200 ಅಂಕವನ್ನು ನೀಡಿ ತಲಾ ಒಂದು ತಂಡದಲ್ಲಿ 16 ಜನ ಆಟಗಾರರನ್ನು ಈಗಾಗಲೇ ಆಯ್ಕೆ ಮಾಡಿಕೊಂಡಿದ್ದಾರೆ. ಆರು ತಂಡಗಳ ಪೈಕಿ ಗೋಲ್ಡನ್ ಸ್ಟಾರ್, ರಂಜನ್ ಚಾಲೆಂಜರ್ಸ್ ಭಟ್ಕಳ, ಓಷಿಯನ ಚಾಲೆಂಜರ್ಸ, ಜೈ ಹನುಮಾನ ಕ್ರಿಕೆಟರ್ಸ, ಸಾಲಗದ್ದೆ ಸೂಪರ್ ಕಿಂಗ್ಸ ಹಾಗೂ ನೇತಾಜಿ ಕ್ರಿಕೆಟ್ ಕ್ಲಬ್ ಪಂದ್ಯಾವಳಿಯಲ್ಲಿ ಆಡಲಿದೆ.

ತಂಡಗಳು :ಮಾಲಕರು ರಮೇಶ್ ಖಾರ್ವಿ ಐಕಾನ್ ಮನೋಜ್ ಖಾರ್ವಿ ತಂಡದ ಹೆಸರು ಓಷಿಯನ್ ಚಾಲೆಂಜರ್ಸ್
ಮಾಲಕರು ಜೈದೀಪ್ ಶೇಟ್ ಮತ್ತು ಪ್ರೀತಮ್ ಶೇಟ್ ತಂಡದ ಹೆಸರು ಜೈ ಹನುಮಾನ್ ಕ್ರಿಕೆಟರ್ಸ್ ಐಕಾನ್ ಮಹೇಶ್ ಶೇಟ್
ಮಾಲಕರು ಕಿರಣ್ ಚಂದಾವರ್ ಮತ್ತು ಆಂಜನೇಯ ಮತ್ತು ಆತ್ರೆಯ ತಂಡದ ಹೆಸರು ರಂಜನ್ ಚಾಲೆಂಜರ್ಸ್ ಐಕಾನ್ ಪವನ್
ಮಾಲಕರು ರಾಜೇಶ್ (ಪುತ್ತೂ ಕಾಮತ್ ಮತ್ತು ಶ್ರೇಯಾನ್ ಸುಮಂತ್ ಬಾಳಗಿ ತಂಡದ ಹೆಸರು ಸಾಲಗದ್ದೆ ಸೂಪರ್ ಕಿಂಗ್ಸ್ (SSಏ)ಐಕಾನ್ ದೀಪಕ್ ನಾಯಕ್
ಮಾಲಕರು ಸಂದೀಪ್ ಶೇಟ್ ತಂಡದ ಹೆಸರು ಗೋಲ್ಡನ್ ಸ್ಟಾರ್ ಕ್ರಿಕೆಟರ್ಸ ಐಕಾನ್ ಅಭಿಷೇಕ್ ಶೇಟ್ ಮಾಲಕರು ನಕ್ಷತ್ರ ನಿತಿನ್ ಮಹಾಲೆ ಮತ್ತು ನಿತೇಶ್ ಮಹಾಲೆತಂಡದ ಹೆಸರು ನೇತಾಜಿ ಸ್ಪೋರ್ಟ್ಸ್ ಕ್ಲಬ್‌ಐಕಾನ್ ಸತ್ಯ ಮಹಾಲೆ

ಪಂದ್ಯಾವಳಿಯು ಮೇ 9 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ವಿಶೇಷವಾಗಿ ಈ ಕಾರ್ಯಕ್ರಮವನ್ನು ವಿದ್ಯಾ ಭಾರತಿ ಸ್ಕೂಲ್ ಪ್ರಾಂಶುಪಾಲೆ ಶ್ರೀಮತಿ ರೂಪಾ ರಮೇಶ ಖಾರ್ವಿ ಉದ್ಘಾಟಿಸಲಿದ್ದು ಅದರಂತೆ  ವೇದಿಕೆಯಲ್ಲಿ ವಿವಿಧ ಹಿಂದು ಸಮಾಜದ ಕೊಂಕಣಿ ಭಾಷಿಕರೇ ಇರುವ ಮಹಿಳೆಯರೇ ಉಪಸ್ಥಿತರಿರಲಿದ್ದಾರೆ.

ಮೇ 10 ರಂದು ಸಮಾರೋಪ ಸಮಾರಂಭದಲ್ಲಿ ಹಾಂಗ್ಯೋ ಐಸ್ ಕ್ರಿಮ್ ಮ್ಯಾನೆಂಜಿಗ್ ಡೈರೆಕ್ಟರ್ ಪ್ರದೀಪ ಪೈ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಹಿಂದು ಸಮಾಜದ ಕೊಂಕಣಿ ಭಾಷಿಕರ ಸಮಾಜದ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ತಂಡದ ಮಾಲೀಕರಾದ ರಮೇಶ ಖಾರ್ವಿ ಸೇರಿದಂತೆ ಉಳಿದ ತಂಡದ ಮಾಲೀಕರು ಹಿಂದು ಕೊಂಕಣಿ ಗೆಳೆಯರ ಬಳಗದ ಸಂಘಟಕರು ಉಪಸ್ಥಿತರಿದ್ದರು

About The Author

error: Content is protected !!