ಕೃಷ್ಣರಾಜಪೇಟೆ : ಯುವಜನರು ಹಾಗೂ ವಿದ್ಯಾರ್ಥಿಗಳು ಸೋಲಿಗೆ ಹೆದರದೇ, ಏಕಾಗ್ರತೆಯಿಂದ ಅಭ್ಯಾಸ ಮಾಡಿ, ಜೀವನದಲ್ಲಿ ಗುರಿ ಸಾಧನೆ ಮಾಡಬೇಕು ಎಂದು ಅಂತರಾಷ್ಟ್ರೀಯ ಜಾನಪದ ಗಾಯಕರಾದ ಡಾ.ಅಮ್ಮ ರಾಮಚಂದ್ರ ಜಿ ಹೇಳಿದರು.


ಅವರು ಕೃಷ್ಣರಾಜಪೇಟೆ ಪಟ್ಟಣದ ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನ ವಾರ್ಷಿಕೋತ್ಸವ “ಸಂಭ್ರಮ – 2026 ಅನ್ನು ಉದ್ಘಾಟಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ನೆನಪಿನ ಕಾಣಿಕೆಗಳನ್ನು ವಿತರಿಸಿ ಮಾತನಾಡಿದರು. ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಇಂಜಿನಿಯರಿAಗ್ ತಾಂತ್ರಿಕ ಕೌಶಲ್ಯಕ್ಕೆ ಅಪಾರವಾದ ಬೇಡಿಕೆಯಿದೆ. ಭವಿಷ್ಯದ ಇಂಜಿನಿಯರು ಗಳಾಗಿರುವ ವಿದ್ಯಾರ್ಥಿಗಳಾದ ನೀವು ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಹೆದರಿ ಪಲಾಯನವಾದವನ್ನು ಅನುಸರಿಸದೇ ಸತತವಾದ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಅಭ್ಯಾಸ ಮಾಡಿ ಸೋಲನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿಸಿಕೊಂಡು ಸಾಧನೆ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ನಾನೂ ಕೂಡ ನಿಮ್ಮಂತೆ ಕಷ್ಟ ಪಟ್ಟಿದ್ದೇನೆ. ಪಿಯುಸಿ ವಿದ್ಯಾಭ್ಯಾಸದಲ್ಲಿ ಅನುತೀರ್ಣನಾಗಿದ್ದ ನಾನು ಸೋಲಿಗೆ ಹೆದರದೇ ಏಕಾಗ್ರತೆಯಿಂದ ಅಭ್ಯಾಸ ಮಾಡಿ ಪದವಿ, ಉನ್ನತ ಶಿಕ್ಷಣ ಪದವಿ ಸೇರಿದಂತೆ, ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮಹಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡು, ಸಂತೆ ಸರಗೂರು ತಾಲೂಕಿನ ಒಂದು ಹಳ್ಳಿಯ ಒಬ್ಬ ಸಾಮಾನ್ಯ ರೈತನ ಮಗನಾದ ನಾನು ಜಾನಪದ ಕ್ಷೇತ್ರದಲ್ಲಿ ಅತ್ಯುತ್ತಮವಾದ ಸಾಧನೆ ಮಾಡಿ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಜಾನಪದ ಕಲಾವಿದನಾಗಿ ಗುರುತಿಸಿಕೊಂಡು ನನ್ನ ಕಾರ್ಯಕ್ಷೇತ್ರದಲ್ಲಿ ನನ್ನದೇ ಆದ ರೀತಿಯಲ್ಲಿ ಮುನ್ನಡೆಯುತ್ತಾ ಹೆಜ್ಜೆ ಹಾಕುತ್ತಿದ್ದೇನೆ. ತಾಂತ್ರಿಕ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾದ ನೀವೂ ಅಷ್ಟೇ, ಸೋಲಿಗೆ ಹೆದರದೇ ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡಿ ಆವಾಗ ತನ್ನಂ ತಾನೆಯೇ ಕೀರ್ತಿ ಮತ್ತು ಯಶಸ್ಸು ದೊರಕುತ್ತದೆ ಎಂದು ಅಮ್ಮ ರಾಮಚಂದ್ರ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ನಾಗಪ್ಪ ಯು ಭಜಂತ್ರಿ ಮಾತನಾಡಿ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಅನುಕೂಲವಾಗಿರುವ ಕೆ.ಆರ್. ಪೇಟೆ ಕೃಷ್ಣ ಸರ್ಕಾರಿ ಎಂಜಿನಿಯರಿAಗ್ ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ರಾಜ್ಯದ ಸರ್ಕಾರಿ ಇಂಜಿನಿಯರಿAಗ್ ಕಾಲೇಜುಗಳ ಪೈಕಿ ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ತಂದು ಕೊಡುವ ಹೆಮ್ಮೆಯ ಕಾಲೇಜಾಗಿ ಹೊರಹೊಮ್ಮಿದೆ ಎಂದು ತಿಳಿಸಿ ಕಾಲೇಜಿನ ವರದಿಯನ್ನು ಮಂಡಿಸಿದರು. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳು, ಅತಿಥಿಗಳು ಹಾಗೂ ಪೋಷಕರನ್ನು ರಂಜಿಸಿದವು. ನಾಡಿನ ಖ್ಯಾತ ಜಾನಪದ ಗಾಯಕರದ ಅಮ್ಮ ರಾಮಚಂದ್ರ ಅವರು ಜಾನಪದ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.


More Stories
ಕೆ.ಆರ್. ಪೇಟೆ ಪಿ.ಎಲ್.ಡಿ ಬ್ಯಾಂಕ್ ನೂತನ ಉಪಾಧ್ಯಕ್ಷರಾಗಿ ಲಕ್ಷ್ಮೀಪುರ ಚಂದ್ರೇಗೌಡ ಅವಿರೋಧ ಆಯ್ಕೆ
ಸಾಧಿಸುವ ಛಲ, ಏಕಾಗ್ರತೆಯಿಂದ ಗುರಿ ತಲುಪಿ; ವಿದ್ಯಾರ್ಥಿಗಳಿಗೆ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಕಿವಿಮಾತು
ಕೆ.ಆರ್.ಪೇಟೆ: ಪರೋಪಕಾರ, ಸೇವಾ ಮನೋಭಾವನೆ ವಿದ್ಯಾರ್ಥಿಗಳ ಜೀವನದ ಉಸಿರಾಗಲಿ; ಶಿಕ್ಷಣ ತಜ್ಞೆ ಜೆ. ಉಮಾದೇವಿ