ಭಟ್ಕಳ: ತಾಲೂಕಿನ ವೆಂಕಟಾಪುರದ ಅಳ್ವೆಕೋಡಿ ನದಿಯಲ್ಲಿ ಚಿಪ್ಪೆಕಲ್ಲಿನ ಮೀನುಗಾರಿಕೆಯಲ್ಲಿ ಒಂದೇ ಕುಟುಂಬದ 11 ಮಂದಿಯ ದಾರುಣ ಸಾವಿನ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಗಲಿದ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಈ ದು:ಖದ ಕ್ಷಣದಲ್ಲಿ ಸಮಸ್ತ ಕುಟುಂಬದವರಿಗೂ, ಸಮುದಾಯದವರಿಗೂ ದೇವರು ನೋವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಮೃತರಾದ ಎಲ್ಲ ಆತ್ಮಗಳಿಗೆ ಚಿರಶಾಂತಿ ಹಾಗೂ ಸದ್ಗತಿ ದೊರಕಲಿ ಎಂದು ಕೋರಿದ್ದಾರೆ.
ದಿನಾಂಕ: 24/05/2026 ರ ಭಾನುವಾರ ಬೆಳಿಗ್ಗೆ ಸರಿಸುಮಾರು 10 ಘಂಟೆಗೆ ಚಿಪ್ಪೆಕಲ್ಲಿನ ಮೀನುಗಾರಿಕೆಗೆ ತೆರಳಿದ ಶಿರಾಲಿಯ ಬಡ ಕುಟುಂಬ ವರ್ಗದ 14 ಜನರು ಸುಮಾರು 12 ಘಂಟೆಗೆ ಕೆಲಸ ಮುಗಿಸಿ ಹಿಂದಿರುಗುವಾಗ ಒಮ್ಮೆಲೆ ನೀರು ಸಮುದ್ರದಿಂದ ಅಬ್ಬರದ ರೀತಿಯಲ್ಲಿ ಬಂದು ನದಿ ದಾಟಲಾಗದೆ ಮುಳುಗಿದರು ಎಂದರೆ ನನ್ನಿಂದ ಇದು ನಂಬಲು ಸಾಧ್ಯವಾಗಲಿಲ್ಲ, ಹಾಗೆ ನಾನು ಅಳ್ವೆಕೋಡಿ ನದಿ ತೀರ ಹಾಗೂ ಸರ್ಕಾರಿ ಆಸ್ಪತ್ರೆಯ ಮೃತ ದೇಹದ ವೀಕ ್ಷಣೆಯ ನಂತರ ಸ್ವಲ್ಪ , ಗಂಭೀರವಾಗಿ ಯೋಚಿಸಿದೆ, ಅಂದು ರಾತ್ರಿ ಪೂರ್ತಿ ನಾನು ಕನವರಿಸಿದ್ದೆ ಜಾಸ್ತಿ, ಯಾಕೆ ದೇವರು ಇಂತ ಕ್ರೂರವಾದ ಸಾವನ್ನು ತಂದೊಡ್ಡಿದ ನಮ್ಮ ಬದ್ದ ವೈರಿಗಳಿಗೂ ಕೂಡ ಇಂತಹ ಸಾವು ಬರಬಾರದು. ಅದೆಷ್ಟೋ ಮಕ್ಕಳು ತಾಯಿ ತಂದೆಯಿಲ್ಲದೆ ಅವರ ನೋವು ಅವರ ಕನಸು ಒಂದೇ ಸಮನೆ ವೆಂಕಟಾಪುರ ನದಿಯಲ್ಲಿ ಕೊಚ್ಚಿ ಹೋದಂತಾಗಿದೆ.

ನಾವು ಒಂದು ತನಿಕೆಗೆ ಆಗ್ರಹಿಸಬೇಕು. ಯಾಕೆಂದರೆ ಇಂದು ನಾವೆಲ್ಲ ಸತ್ತವರ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇವೆ. ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ ಆದರೆ ಯಾಕೆ ಇದರ ಮೂಲ ಕಾರಣ ಹುಡುಕಬಾರದು..? ನಮ್ಮ ಭಟ್ಕಳ ಅಂದರೆ ಒಂದು ರೀತಿಯ ವಿಸ್ಮಯ. ಇಲ್ಲಿಯ ಸಾವುಗಳಿಗೆ ನ್ಯಾಯ ಸಿಗುವುದಿಲ್ಲ, ಹಾಗೆ ನೋಡಿದರೆ ಡಾ ! ಚಿತ್ತರಂಜನ ಅವರ ಸಾವಿಗೆ ನ್ಯಾಯ ಸಿಗಲಿಲ್ಲ, ತಿಮ್ಮಪ್ಪ ನಾಯ್ಕರ ಸಾವಿಗೆ ನ್ಯಾಯ ಸಿಗಲಿಲ್ಲ, ಸಹೋದರಿ ಯಮುನಾ ನಾಯ್ಕ ಸಾವಿಗೆ ನ್ಯಾಯ ಸಿಗಲಿಲ್ಲ. ಆದರೆ ಈ ದುರಂತದ ತನಿಖೆ ಆಗಬೇಕಿದೆ. ಅಗಲಿದ ಆತ್ಮಗಳಿಗೆ ನ್ಯಾಯ ಸಿಗಲಿ, ಸಂತ್ರಸ್ತ ಕುಟುಂಬದ ಮಕ್ಕಳಿಗೆ ಉತ್ತಮ ಜೀವನ ಕಟ್ಟಿಕೊಡುವಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲೋಣ ಎಂದು ಸಮಾಜ ಸೇವಕ ಮಾಸ್ತಪ್ಪ ನಾಯ್ಕ ಆಗ್ರಹಿಸಿದ್ದಾರೆ.

More Stories
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಶ್ರೀ ಅರುಣಾನಂದ ಸ್ವಾಮೀಜಿ ಸಾಂತ್ವನ
ಕಪ್ಪೆಚಿಪ್ಪು ದುರಂತದ ಮೃತರ ಮನೆಗಳಿಗೆ ಪ್ರಮೋದ್ ಮಧ್ವರಾಜ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ
ಮೃತರ ಕುಟುಂಬಗಳಿಗೆ ಕಾಗೇರಿ ಸಾಂತ್ವನ