ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ನಗರದ ಆರ್ ಹೋಟೆಲ್‌ನಲ್ಲಿ ಮೈಸೂರಿನ ‘ಧನ್ವಂತರಿ ಲೋಕಸಿರಿ ಬಯೋಟೆಕ್ ಪ್ರೈವೇಟ್ ಲಿಮಿಟೆಡ್’ ವತಿಯಿಂದ ಸಾರ್ವಜನಿಕರು ಹಾಗೂ ರೈತರಿಗಾಗಿ ಹಮ್ಮಿಕೊಳ್ಳಲಾಗಿದ್ದ “ರೋಗ ಮುಕ್ತ ಮತ್ತು ರಾಸಾಯನಿಕ ಮುಕ್ತ ಭಾರತ” ಅಭಿಯಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮಕ್ಕೂ ಮುನ್ನ ಮೈಸೂರಿನಿಂದ ಆಗಮಿಸಿದ ಡಿಎಲ್‌ಎಸ್ (ಆಐS) ಸೇಲ್ಸ್ ಹೆಡ್ ಹಾಗೂ ಮಾರ್ಗದರ್ಶಕರಾದ ಚರಣ್ ರಾಜ್, ಡಿಎಲ್‌ಎಸ್ ಚಾಂಪಿಯನ್ ತಂಡದ ಸಂಸ್ಥಾಪಕರಾದ ವಿಜಯಕುಮಾರ್ ಹಾಗೂ ಡಿಎಲ್‌ಎಸ್ ಸಿಲ್ವರ್ ಡೈರೆಕ್ಟರ್ ರೇಖಾ ಎಸ್. ಅವರನ್ನು ಭವ್ಯ ಮೆರವಣಿಗೆಯ ಮೂಲಕ ಹೂಹಾರ ಹಾಕಿ ವೇದಿಕೆಗೆ ಸ್ವಾಗತಿಸಲಾಯಿತು. ಬಳಿಕ ರೈತ ಗೀತೆಯನ್ನು ಹಾಡುವ ಮೂಲಕ ಅನ್ನದಾತರಿಗೆ ಗೌರವ ಸಲ್ಲಿಸಿ, ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಆಯುರ್ವೇದದಿಂದ ಸಮಗ್ರ ಆರೋಗ್ಯ ಸಾಧ್ಯ: ಚರಣ್ ರಾಜ್
ಜನರ ಆರೋಗ್ಯದ ಸಮತೋಲನದ ಕುರಿತು ಮಾತನಾಡಿದ ಡಿಎಲ್‌ಎಸ್ ಸೇಲ್ಸ್ ಹೆಡ್ ಚರಣ್ ರಾಜ್ ಅವರು, “ಆಯುರ್ವೇದವು ಕೇವಲ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವುದಲ್ಲ; ಇದು ಗಿಡಮೂಲಿಕೆ, ಹಣ್ಣುಗಳು ಹಾಗೂ ನಮ್ಮ ಮನೆಯ ಆಹಾರ ಪದಾರ್ಥಗಳ ಮೂಲಕ ದೇಹ, ಮನಸ್ಸು ಮತ್ತು ಆತ್ಮವನ್ನು ಒಟ್ಟಾರೆಯಾಗಿ ಪರಿಗಣಿಸಿ ರೋಗಮುಕ್ತವಾಗಲು ಸಹಾಯ ಮಾಡುವ ನಮ್ಮ ದೇಶದ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ” ಎಂದರು.
ಸಾವಯವ ಕೃಷಿಯಿಂದ ಭೂಮಿಯ ವಿಷಮುಕ್ತಗೊಳಿಸಿ: ವಿಜಯಕುಮಾರ್ ಕೆ.ಸಿ.
ರೈತರನ್ನುದ್ದೇಶಿಸಿ ಮಾತನಾಡಿದ ಡಿಎಲ್‌ಎಸ್ ಚಾಂಪಿಯನ್ ತಂಡದ ಸಂಸ್ಥಾಪಕ ವಿಜಯಕುಮಾರ್ ಕೆ.ಸಿ. ಅವರು, “ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಇಂದು ಕೃಷಿ ಭೂಮಿ ಸಂಪೂರ್ಣ ಹಾಳಾಗಿದೆ. ಇದನ್ನು ವಿಷಮುಕ್ತವನ್ನಾಗಿಸಲು ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಯೇ ಪ್ರಮುಖ ದಾರಿಯಾಗಿದೆ. ಧನ್ವಂತರಿ ಲೋಕಸಿರಿ ಬಯೋಟೆಕ್ ತಯಾರಿಸಿರುವ ಸಾವಯವ ಔಷಧಿಗಳನ್ನು ಬಳಸುವುದರಿಂದ ರೈತರು ಅತ್ಯಂತ ಕಡಿಮೆ ಖರ್ಚಿನಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬಹುದು” ಎಂದು ತಿಳಿಸಿದರು.
ಬಸವಣ್ಣನವರ ಕಾಯಕವೇ ಕೈಲಾಸ ತತ್ವ ನಮಗೆ ಮಾದರಿ: ಚಿದಾನಂದ ದರೂರ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಗತಿಪರ ರೈತ ಚಿದಾನಂದ ದರೂರ ಮಾತನಾಡಿ,”ರಾಸಾಯನಿಕ ಮುಕ್ತವಾಗಿ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳನ್ನು ಬಳಸುವುದರಿಂದ ಇಡೀ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಜಗದ್ಗುರು ಬಸವಣ್ಣನವರು ಹೇಳಿದ ‘ಕಾಯಕವೇ ಕೈಲಾಸ’ ತತ್ವದಂತೆ ರೈತರು ಪ್ರಾಮಾಣಿಕವಾಗಿ ದುಡಿಯಬೇಕು. ಪ್ರತಿಯೊಬ್ಬರ ಮನೆಯಲ್ಲೂ ಹಸು, ಎಮ್ಮೆಗಳನ್ನು ಸಾಕಿ ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು” ಎಂದು ಕರೆ ನೀಡಿದರು.
ಮತ್ತೊಬ್ಬ ಅತಿಥಿ ರೇಖಾ ಎಸ್. ಮಾತನಾಡಿ, ಪ್ರತಿಯೊಬ್ಬ ಮನುಷ್ಯ ಆರೋಗ್ಯವಾಗಿದ್ದರೆ ಮಾತ್ರ ತನ್ನ ಜೀವನದ ಗುರಿಯನ್ನು ಮುಟ್ಟಲು ಸಾಧ್ಯ ಎಂದರು.
ಗಣ್ಯರ ಉಪಸ್ಥಿತಿ ಮತ್ತು ಕಾರ್ಯಕ್ರಮ ಸಂಘಟನೆ:
ಈ ಯಶಸ್ವಿ ಕಾರ್ಯಕ್ರಮವನ್ನು ೭ ಸ್ಟಾರ್ ಅಥಣಿ ಟೀಮ್ ಲೀಡರ್ಸ್ಗಳಾದ ಬಂದೆ ನವಾಜ್ ಗಡ್ಡೇಕರ ಹಾಗೂ ಆಶಿಫ್ ಮುಲ್ಲಾ ಅವರು ಜಂಟಿಯಾಗಿ ಆಯೋಜಿಸಿದ್ದರು.
ಮುಖ್ಯ ಅತಿಥಿಗಳಾಗಿ ಗುರುದೇವ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಮಹಾದೇವ ನಾಯಿಕ, ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖಂಡ ಪ್ರವೀಣ ನಾಯಿಕ, ಹಾಗೂ ಪ್ರಮುಖರಾದ ನಿಂಗಪ್ಪಾ ಹಡಪದ, ಮಲ್ಲಪ್ಪಾ ಕೆಂಪವಾಡ, ಮುತ್ತಪ್ಪಾ ದನ್ಯಾಳ, ಬಸಪ್ಪಾ ದನ್ಯಾಳ, ಚನ್ನಪ್ಪಾ ಪಾಟೀಲ, ಸುರೇಶ ಪಾಟೀಲ ಆಗಮಿಸಿದ್ದರು.
ವೇದಿಕೆಯಲ್ಲಿ ಪ್ರವೀಣ ನಾಡಗೌಡ, ಈರಪ್ಪಾ ರೋಗಿ, ಸಿದ್ರಾಯ ಸಾತನವರ, ಅನಿಲ ಭಾಮನೆ, ಶರಣಪ್ಪಾ ಶಿಂಧೆ, ಮಹೇಶ ಶರ್ಮಾ, ಶಿವಾನಂದ ನಾವಿ, ಸುರೇಖಾ ಜಾಧವ, ಸೃಷ್ಟಿ ನಾಯಿಕ, ಕವಿತಾ ಬೋಸಲೆ, ಬೌರವಾ ದನ್ಯಾಳ, ಶಂಕರ ಪಾಟೀಲ, ಅಸ್ಲಾಂ ಮುಲ್ಲಾ, ವಿಶ್ವನಾಥ ಭಂಡಾರೆ, ಆದಿತ್ಯ ನಾಯಿಕ, ಅಖಿಲೇಶ ನಾಯಿಕ, ಶರದ ಶೆಟ್ಟಿ, ಸಂತೋಷ ನಾಯಿಕ, ಸುರೇಶ ಮಡಿವಾಳ ಸೇರಿದಂತೆ ನೂರಾರು ರೈತ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಶಿವಲಿಲಾ ಪಟ್ಟಣಶೆಟ್ಟಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದಲ್ಲದೆ, ಸುಶ್ರಾವ್ಯವಾಗಿ ಸಂಗೀತ ಸೇವೆ ಸಲ್ಲಿಸಿದರು. ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಶಕ್ತಿದಳದ ಸಿಬ್ಬಂದಿಗಳಾದ ಅಶೋಕ ಬಡಿಗೇರ ಹಾಗೂ ರಾಜು ಸಿಂಧೆ ಅವರು ಬುದ್ಧನ ಮೂರ್ತಿಗೆ ಹೂವಿನ ಮಾಲೆ ಸಮರ್ಪಿಸಿ, ಸಮಾರಂಭದ ಭದ್ರತಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ವರದಿ: ಮಹೇಶ್ ಶರ್ಮಾ

More Stories
ಧನ್ವಂತರಿ ಲೋಕಸಿರಿ ಬಯೋಟೆಕ್ ವತಿಯಿಂದ ರೋಗಮುಕ್ತ, ರಾಸಾಯನಿಕ ಮುಕ್ತ ಭಾರತ ಅಭಿಯಾನ ಮತ್ತು ವೃದ್ಧಾಶ್ರಮಕ್ಕೆ ಹಣ್ಣು ವಿತರಣೆ
ಸ್ನೇಹ ಜ್ಯೋತಿ ಅಂಗವಿಕಲರ ತರಬೇತಿ ಕೇಂದ್ರದಲ್ಲಿ ಪರಿಸರ ದಿನಾಚರಣೆ; ಸಸಿ ನೆಟ್ಟು ಪರಿಸರ ರಕ್ಷಣೆಗೆ ಕರೆ
ಕೃಷ್ಣಾ ನದಿ ಬರಿದು: ಅಥಣಿ ತಾಲೂಕಿನಲ್ಲಿ ಜಲಕ್ಷಾಮದ ಭೀತಿ; ಮಹಾರಾಷ್ಟ್ರದಿಂದ ನೀರು ಬಿಡಿಸಲು ಜೆಡಿಎಸ್ ಮುಖಂಡ ಇಮ್ತಿಯಾಜ್ ಹಿಪ್ಪರಗಿ ಆಗ್ರಹ