June 7, 2026

ಲಕ್ನೋದಲ್ಲಿ ಯೋಗಿ ಆದಿತ್ಯನಾಥ್ ಭೇಟಿ ಮಾಡಿದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರು

ಉಜರೆ : ಯೋಗಿ ಆದಿತ್ಯನಾಥ್ ಅವರ ಅಧಿಕೃತ ನಿವಾಸದಲ್ಲಿ ಮೇ 31, 2026ರಂದು ಮಹತ್ವದ ಭೇಟಿಯೊಂದು ನಡೆಯಿತು.
Brahmananda Saraswati Swamiji ಅವರು ಹಾಗೂ ಮಾಜಿ ಸಂಸದ Nalin Kumar Kateel ಅವರು ಉತ್ತರ ಪ್ರದೇಶದ ರಾಜಧಾನಿ ಐuಛಿಞಟಿoತಿದಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ, ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ ಮಹಾರಾಜ್ ಅವರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಅಯೋಧ್ಯೆ ಶಾಖಾಮಠ ಆಶ್ರಮ ನಿರ್ಮಾಣ ಕಾರ್ಯಗಳ ಕುರಿತು ವಿಸ್ತೃತವಾಗಿ ವಿಚಾರ ವಿನಿಮಯ ನಡೆಸಲಾಯಿತು. ಆಶ್ರಮದ ಅಭಿವೃದ್ಧಿ, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ವಿಸ್ತರಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ಕ್ಷೇತ್ರದ ಶಿಷ್ಯವೃಂದ ಹಾಗೂ ಅಯೋಧ್ಯೆಯ ಸ್ವಾಮೀಜಿಗಳ ಶಿಷ್ಯವರ್ಗ ಉಪಸ್ಥಿತರಿದ್ದು, ಆಶ್ರಮದ ಭವಿಷ್ಯದ ಯೋಜನೆಗಳು ಮತ್ತು ಕಾರ್ಯಚಟುವಟಿಕೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡರು.

ಈ ಭೇಟಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದು ತಿಳಿದುಬಂದಿದೆ.

About The Author

error: Content is protected !!