ಮಾಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳದಲ್ಲಿ ಆಗಸ್ಟ್ 29, 2026 ರಂದು ವಿಶ್ವ ಕ್ರೀಡಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಮಕ್ಕಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಮುಖ್ಯಮಂತ್ರಿ ಶರಣ್ಯಾ ಜೋಶಿ ಅವರು ಮೇಜರ್ ಧ್ಯಾನ್‌ಚಂದ್ ಅವರ ಸಾಧನೆ ಹಾಗೂ ಜೀವನಾಧಾರಿತ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಹಂಚಿಕೊಂಡರು.
ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಮನೋರಂಜನಾ ಆಟೋಟಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ನಿರ್ವಹಣೆಯನ್ನು ಶೋಭಾ ಜೈನ್ ವಹಿಸಿದ್ದು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವರದಿ ; ಅರುಣ ಭಟ್ ಕಾರ್ಕಳ
About The Author


More Stories
ಮೊದಲ ಅಕ್ಷರ ಪಾಠ ಕಲಿಸಿದ ಶಿಕ್ಷಕಿಗೆ ಗೌರವಾರ್ಪಣೆ: ಶುಭದರಾವ್ ಅವರಿಂದ ಗುರುಭಕ್ತಿ
ಮುನಿಯಾಲಿನಲ್ಲಿ ಸಹಸ್ರ ಶ್ರೀಕೃಷ್ಣ ನಾಮ ತುಳಸಿ ದಳ ಅರ್ಚನೆ
ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ