ಭಟ್ಕಳ: ತಾಲೂಕಿನ ಚಿತ್ರಾಪುರ ಮಠದ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ಶ್ರೀವಲ್ಲಿ ಸಾಹಿತ್ಯ ಸಂಘದ ವತಿಯಿಂದ ‘ಸಹೋದರತೆಯ ಭಾವ ಸಂಜೀವಿನಿ’ಯಾಗಿ ರಕ್ಷಾ ಬಂಧನ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಸಂಭ್ರಮದ ಆಚರಣೆ: ಮಕ್ಕಳಲ್ಲಿ ಸಹೋದರತೆ ಹಾಗೂ ಪ್ರೀತಿ-ವಿಶ್ವಾಸ ಬೆಳೆಸುವ ಉದ್ದೇಶದಿಂದ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ತಿಲಕವಿಟ್ಟು ರಕ್ಷೆ ಕಟ್ಟಿದರು. ನಂತರ ಪರಸ್ಪರ ಸಿಹಿ ಹಂಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಶಿಕ್ಷಕ-ಶಿಕ್ಷಕಿಯರೂ ರಕ್ಷೆ ಧರಿಸಿ ಹಬ್ಬವನ್ನು ಆಚರಿಸಿದರು.
ಮುಖ್ಯ ಶಿಕ್ಷಕಿ ಮಮತಾ ಭಟ್ಕಳ ರಕ್ಷಾ ಬಂಧನದ ಮಹತ್ವ ವಿವರಿಸಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಪರಸ್ಪರ ಗೌರವ ಬೆಳೆಸಿಕೊಳ್ಳಲು ಸಲಹೆ ನೀಡಿದರು.
ಹಿರಿಯ ಶಿಕ್ಷಕ ಸಂಜಯ ಗುಡಿಗಾರ ರಕ್ಷಾ ಬಂಧನವು ಸಹೋದರತೆಯನ್ನು ಗಟ್ಟಿಗೊಳಿಸುವ ಶ್ರೇಷ್ಠ ಪರಂಪರೆಯಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಹೊಣೆ ಎಂದರು.

ಸಾಹಿತ್ಯ ಸಂಘದ ಸಂಸ್ಥಾಪಕಿ ರೇಷ್ಮಾ ನಾಯಕ ಹಬ್ಬದ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿ, ಕಳೆದ 14 ವರ್ಷಗಳಿಂದ ಈ ಆಚರಣೆ ನಡೆಸಿಕೊಂಡು ಬರುತ್ತಿರುವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯೊಂದಿಗೆ ಕವಿತಾ ಸ್ವಾಗತಿಸಿ, ಹರ್ಷಿತಾ ಗೊಂಡ ವಂದಿಸಿದರು. ನಾರಾಯಣ ನಾಯ್ಕ, ಕಾಂಚನಾ ಮೇಸ್ತಾ ಸೇರಿದಂತೆ ಶಾಲೆಯ ಹಾಗೂ ಪಿಯು ಕಾಲೇಜಿನ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ