September 10, 2026

ಯಶಸ್ವಿಯಾಗಿ ನಡೆದ ಶಿರಾಲಿ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟ: ಜನತಾ ವಿದ್ಯಾಲಯ ಸಮಗ್ರ ವೀರಾಗ್ರಣಿ

ಭಟ್ಕಳ: ತಾಲೂಕಿನ ಶಿರಾಲಿ ವಲಯ ಮಟ್ಟದ 2026-27ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟವು ಜನತಾ ವಿದ್ಯಾಲಯದ ಸಹಯೋಗದಲ್ಲಿ ವಿಜೃಂಭಣೆಯಿಂದ ಜರುಗಿತು.

ಜನತಾ ವಿದ್ಯಾಲಯ ಪೂರ್ವ ವಿದ್ಯಾರ್ಥಿ ಪರಿವಾರದ ಅಧ್ಯಕ್ಷ ಶಂಕರ ನಾಯ್ಕ ಕ್ರೀಡಾಕೂಟ ಉದ್ಘಾಟಿಸಿ, ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ದೈಹಿಕ-ಮಾನಸಿಕ ಆರೋಗ್ಯ ಬೆಳೆಸುತ್ತದೆ ಎಂದರು. ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಮಾರುತಿ ನಾಯ್ಕ ಕ್ರೀಡಾಧ್ವಜ ನೆರವೇರಿಸಿದರೆ, ಉದ್ಯಮಿ ಪ್ರವೀಣ ನಾಯ್ಕ ಕ್ರೀಡಾಜ್ಯೋತಿ ಬೆಳಗಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಷ್ಣು ಶಾನಭಾಗ ಅಧ್ಯಕ್ಷತೆ ವಹಿಸಿ, ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಟ್ಕಳ ತಾಲೂಕನ್ನು ಪ್ರತಿನಿಧಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸಮಗ್ರ ವೀರಾಗ್ರಣಿ ಪ್ರಶಸ್ತಿ: ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದ ಈ ಪಂದ್ಯಾಟದಲ್ಲಿ ಆತಿಥೇಯ ಶಿರಾಲಿಯ ಜನತಾ ವಿದ್ಯಾಲಯ ಪ್ರೌಢಶಾಲೆಯು ‘ಸಮಗ್ರ ವೀರಾಗ್ರಣಿ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

    ವೇದಿಕೆಯಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ನಿವೃತ್ತ ಶಿಕ್ಷಕಿ ರಾಜಮ್ಮ ಹಿಚ್ಕಡ, ಗುರುನಮನ ಬಳಗದ ಅಧ್ಯಕ್ಷ ಶ್ರೀಧರ ಶೇಟ್, ಪ್ರಿನ್ಸಿಪಾಲ್ ಜಿ.ಎಸ್. ಹೆಗಡೆ ಹಾಗೂ ಮುಖ್ಯೋಪಾಧ್ಯಾಯಿನಿ ಕಲ್ಪನಾ ನಾಯ್ಕ ಉಪಸ್ಥಿತರಿದ್ದರು.

    ದೈಹಿಕ ಶಿಕ್ಷಣ ಶಿಕ್ಷಕ ಅರುಣ ಗೌಡ ಪ್ರತಿಜ್ಞಾ ವಿಧಿ ಬೋಧಿಸಿದರು. ಮುಖ್ಯೋಪಾಧ್ಯಾಯಿನಿ ಆಶಾ ಕಲ್ಮನೆ ಸ್ವಾಗತಿಸಿ, ಲೀಲಾವತಿ ಮೊಗೇರ ನಿರೂಪಿಸಿದರು. ಸೀಮಾ ನಾಯ್ಕ ವಂದಿಸಿದರು.

    About The Author

    error: Content is protected !!