September 8, 2026

ನದಿ ನೀರನ್ನು ತಡೆಯುವುದು ಅನರ್ಥಕ್ಕೆ ಕಾರಣ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ

ಗೋಕರ್ಣ: ಗಂಗೆಯನ್ನು ನಾಗರೀಕತೆಯ ಹೆಸರಿನಲ್ಲಿ ಅಶುದ್ಧಗೊಳಿಸಿರುವುದು ಔರಂಗಜೇಬನ ಹೇಯ ಕೃತ್ಯಗಳಿಗಿಂತಲೂ ಹೀನ ಕೃತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 8, 2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ನದಿ ನೀರಿನ ಕುರಿತು ಪ್ರವಚನ ನೀಡಿದರು.

ಗಂಗಾ ನದಿಯ ಮಾಲಿನ್ಯ ಹಾಗೂ ಮಹತ್ವ: ಹರಿದ್ವಾರದ ನಂತರ ಮನುಷ್ಯನ ಮಲಮೂತ್ರಗಳ ಕಾಲುವೆಗಳನ್ನು ಸೇರಿಸಿ ಗಂಗೆಯನ್ನು ಅಶುದ್ಧಗೊಳಿಸುತ್ತಿರುವುದು ಸೃಷ್ಟಿಯ ಚಕ್ರಕ್ಕೆ ಮತ್ತು ಮುಂದಿನ ಪೀಳಿಗೆಗೆ ಮಾಡುತ್ತಿರುವ ಘೋರ ಅಪಚಾರ. ಆಯುರ್ವೇದದ ಪ್ರಕಾರ ಗಂಗಾ ಜಲವು ದೇಹದ ತ್ರಿದೋಷಗಳನ್ನು ನಿವಾರಿಸಿ ಜೀರ್ಣಾಗ್ನಿಯನ್ನು ಹೆಚ್ಚಿಸುತ್ತದೆ. ಸರಿಯಾಗಿ ಸಂಗ್ರಹಿಸಿಟ್ಟ ಗಂಗಾ ಜಲ ನೂರು ವರ್ಷಗಳಾದರೂ ಹಾಳಾಗುವುದಿಲ್ಲ.

ಆಧುನಿಕ ಸಂಶೋಧನೆ ಹಾಗೂ ಸ್ವರಕ್ಷಣೆ: ಗಂಗೆಯಲ್ಲಿ ಸ್ವಯಂ ಶುದ್ಧೀಕರಣ ಗುಣವಿದ್ದು, ಹಾನಿಕಾರಕ ಸೂಕ್ಷ್ಮಾಣುಗಳನ್ನು ನಾಶಪಡಿಸಿ, ಕರುಳಿನಲ್ಲಿರುವ ಒಳ್ಳೆಯ ಸೂಕ್ಷ್ಮಾಣುಗಳನ್ನು ರಕ್ಷಿಸುವ ಶಕ್ತಿ ಗಂಗಾ ಜಲಕ್ಕಿದೆ ಎಂಬುದನ್ನು ಆಧುನಿಕ ಸಂಶೋಧನೆಗಳು ದೃಢಪಡಿಸಿವೆ.

ನದಿ ನೀರು ತಡೆಯುವುದು ತಪ್ಪು: ನದಿಯ ಹರಿವು ಹಾಗೂ ವೇಗವನ್ನು ತಡೆಯುವುದು ಅನರ್ಥಕ್ಕೆ ಕಾರಣ. ನದಿಯು ಹರಿಯುವ ಮೂಲಕ ತನ್ನನ್ನು ತಾನು ಶುದ್ಧೀಕರಿಸಿಕೊಳ್ಳುವುದರಿಂದ ನದಿಯನ್ನು ತಡೆಯುವುದು ಪ್ರಕೃತಿಯಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಶ್ರೀಗಳು ಎಚ್ಚರಿಸಿದರು.

    ಕಾರ್ಯಕ್ರಮದಲ್ಲಿ ಶ್ರೀಕಂಠ ಶರ್ಮಾ ಮಡೋಡಿ ಕುಟುಂಬಸ್ಥರು ಗುರುಭಿಕ್ಷಾ ಸೇವೆ ಸಮರ್ಪಿಸಿದರೆ, ನಿಡುವಾಜೆ ರಾಮ ಭಟ್ ದಿನಪ್ರಧಾನರಾಗಿ ಉಪಸ್ಥಿತರಿದ್ದರು.

    About The Author

    error: Content is protected !!