ಭಟ್ಕಳ: ಸಾರ್ವಜನಿಕರ ಸುರಕ್ಷತೆ ಹಾಗೂ ಅಪರಾಧ ಕೃತ್ಯಗಳ ನಿಯಂತ್ರಣಕ್ಕಾಗಿ ಭಟ್ಕಳದ ಕ್ರಿಯೇಟಿವ್ ಫ್ರೆಂಡ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ (ರಿ.) ವತಿಯಿಂದ ಮೂಡುಭಟ್ಕಳ–ಮುಟ್ಟಳ್ಳಿ ಭಾಗದ ಮೂರು ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದರ ನಿರ್ವಹಣೆಯನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಸಿಸಿಟಿವಿ ಚಾಲನೆ ಹಾಗೂ ಹಸ್ತಾಂತರ: ಮೂಡುಭಟ್ಕಳ ಬೈಪಾಸ್, ಮೂಡುಭಟ್ಕಳ ಹೆಬ್ಬಾಗಿಲು ಕ್ರಾಸ್ ಹಾಗೂ ಮುಟ್ಟಳ್ಳಿ ರೈಲ್ವೆ ಸ್ಟೇಷನ್ ಕ್ರಾಸ್ಗಳಲ್ಲಿ ಅಳವಡಿಸಲಾದ ಸಿಸಿಟಿವಿ ವ್ಯವಸ್ಥೆಗೆ ನಗರ ಠಾಣೆ ಪಿಎಸೈ ನವೀನ ನಾಯ್ಕ ಚಾಲನೆ ನೀಡಿ, ಹಸ್ತಾಂತರ ಸ್ವೀಕರಿಸಿದರು. ಯಾವುದೇ ಅಪರಾಧ ನಡೆದಾಗ ಆರೋಪಿಗಳ ಪತ್ತೆ ಹಾಗೂ ತನಿಖೆಗೆ ಈ ದೃಶ್ಯಾವಳಿಗಳು ಪ್ರಮುಖ ಸಾಕ್ಷಿಯಾಗಲಿವೆ ಎಂದು ಅವರು ತಿಳಿಸಿದರು.
ಗೋ ಕಳ್ಳತನ ಹಾಗೂ ಅಪರಾಧ ತಡೆಗೆ ನೆರವು: ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀನಿವಾಸ ನಾಯ್ಕ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲು ನಿಲ್ದಾಣದ ಸಮೀಪವಿರುವ ಈ ಭಾಗದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಗೋ ಕಳ್ಳತನ ಹಾಗೂ ರಾತ್ರಿ ವೇಳೆಯ ಕಳ್ಳತನಗಳ ಮೇಲೆ ಕಣ್ಣಿಡಲು ಈ ಸಿಸಿಟಿವಿ ಕಾವಲು ಅತ್ಯಂತ ಸಹಕಾರಿಯಾಗಲಿದೆ ಎಂದರು.
ಯುವಕರ ಕಾರ್ಯಕ್ಕೆ ಪ್ರಶಂಸೆ: ಊರಿನ ಸುರಕ್ಷತೆಯ ಕಾಳಜಿಯಿಂದ ಯುವಕರ ತಂಡವೊಂದು ಸಮಾಜಮುಖಿ ಹೆಜ್ಜೆ ಇಟ್ಟಿರುವುದಕ್ಕೆ ಸ್ಥಳೀಯರು ಹಾಗೂ ಪೊಲೀಸ್ ಇಲಾಖೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಹೇಶ್ ನಾಯ್ಕ, ಉಪಾಧ್ಯಕ್ಷ ಮಾತೇಶ ನಾಯ್ಕ, ಕಾರ್ಯದರ್ಶಿ ಮೋಹನ ನಾಯ್ಕ, ಸದಸ್ಯರಾದ ಕುಮಾರ್ ನಾಯ್ಕ, ಶಿವರಾಮ ನಾಯ್ಕ, ದನುಷ ನಾಯ್ಕ ಹಾಗೂ ಊರಿನ ಪ್ರಮುಖರಾದ ಗಣೇಶ ನಾಯ್ಕ, ಶೇಷಗಿರಿ ನಾಯ್ಕ, ತಿಮ್ಮಪ್ಪ ನಾಯ್ಕ, ಮಾದೇವ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author


More Stories
ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ: ಭಟ್ಕಳ ತೆಂಗಿನಗುಂಡಿ ಶಾಲೆಯ ವಿದ್ಯಾರ್ಥಿನಿ ದಿಶಾ ದೇವಾಡಿಗ ದ್ವಿತೀಯ
ಜಾಮ್ನಗರ ಎಕ್ಸ್ಪ್ರೆಸ್ ರೈಲಿನಲ್ಲಿ ₹2.68 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು
ಪೌರಾಣಿಕ ವೇಷ, ಚಂಡೆ-ವಾದನದ ಮೆರುಗು: ತೂದಳ್ಳಿ ಗಣೇಶೋತ್ಸವ ಅದ್ದೂರಿ ಸಂಪನ್ನ