ಚಿಕ್ಕೋಡಿ: ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಲೋಡ್‌ಶೆಡ್ಡಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರೈತರ ಪಂಪ್‌ಸೆಟ್‌ಗಳಿಗೆ ಸತತ ಏಳು ಗಂಟೆಗಳ ಕಾಲ ತ್ರಿ-ಫೇಸ್ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನೇತೃತ್ವದಲ್ಲಿ ಹೆಸ್ಕಾಂ (HESCOM) ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅಸಮರ್ಪಕ ವಿದ್ಯುತ್‌ನಿಂದ ಒಣಗುತ್ತಿರುವ ಬೆಳೆಗಳು: ಪ್ರತಿಭಟನೆಯನ್ನುದ್ದೇಶಿಸಿ ಕರವೇ ಚಿಕ್ಕೋಡಿ ತಾಲೂಕು ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಕಳೆದ ಕೆಲವು ದಿನಗಳಿಂದ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಶಾಸಕರು ಕೇವಲ ರಸ್ತೆ, ಗಟಾರ ಹಾಗೂ ಸಮುದಾಯ ಭವನ ನಿರ್ಮಾಣದಲ್ಲಿ ವ್ಯಸ್ತರಾಗಿದ್ದು, ರೈತರ ಸಂಕಷ್ಟ ಆಲಿಸುತ್ತಿಲ್ಲ. ಕೂಡಲೇ ಸತತ 7 ಗಂಟೆ ವಿದ್ಯುತ್ ನೀಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಭರವಸೆ ಮತ್ತು ವಾಸ್ತವದ ವ್ಯತ್ಯಾಸ: ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಇಂಧನ ಸಚಿವರು 7 ಗಂಟೆ ತ್ರಿ-ಫೇಸ್ ವಿದ್ಯುತ್ ನೀಡುವುದಾಗಿ ಹೇಳುತ್ತಾರಾದರೂ ವಾಸ್ತವದಲ್ಲಿ ಸರಿಯಾದ ಪೂರೈಕೆ ಇಲ್ಲ. ನೀರಿದ್ದಾಗ ವಿದ್ಯುತ್ ಕಡಿತ ಮಾಡಿದರೆ ರೈತರು ಹೇಗೆ ಬದುಕಬೇಕು? ಎಂದು ಪ್ರಶ್ನಿಸಿದರಲ್ಲದೆ, ಲೋಡ್‌ಶೆಡ್ಡಿಂಗ್‌ನಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ತೀವ್ರ ಹೋರಾಟದ ಎಚ್ಚರಿಕೆ: ಸರ್ಕಾರ ಹಾಗೂ ಅಧಿಕಾರಿಗಳು ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶಂಕರ ಅವಡಖಾನ, ಮೋಹನ ಪಾಟೀಲ, ಅಪ್ಪಾಸಾಹೇಬ ಹಿರೇಕುಡಿ, ಪ್ರತಾಪ ಪಾಟೀಲ, ಸಂತೋಷ ಪೂಜೇರಿ, ಗುರುನಾಥ ಹೆಗಡೆ, ಶಂಕರ ಹೆಗಡೆ, ರಾಜೇಂದ್ರ ಕಾಂಬಳೆ, ದುಂಡಪ್ಪಾ ಚೌಗಲಾ, ಬಸಗೌಡ ಸೋಮನ್ನವರ, ಅಮೂಲ ನಾವಿ, ರಮೇಶ ಡಂಗೇರ, ಗಗನ ರೆಂದಾಳೆ, ಬಾಲಕೃಷ್ಣ ಬೇಕ್ಕೆರ, ವಿಜಯ ಪಾಟೀಲ, ಸೌರಭ ಹಿರೇಮಠ, ಸಂತೋಷ ಪಾಟೀಲ, ಆನಂದ ಪಾಟೀಲ, ವಿಠ್ಠಲ ಮಾನೆ, ಮಾರುತಿ ಕಟ್ಟಿಕರ, ಶಿವಾಜಿ ಖಾಡೆ, ಬಾಸ್ಕರ ಗೌಂಡಿ, ಶುಭಂ ಕದಮ, ರುದ್ರಯ್ಯ ಹಿರೇಮಠ ಸೇರಿದಂತೆ ನೂರಾರು ರೈತರು ಹಾಗೂ ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು.
(ವರದಿ: ಮಹೇಶ್ ಶರ್ಮಾ)
About The Author


More Stories
ಸತ್ಯದ ದಾರಿ, ದೈವನಂಬಿಕೆ ಮತ್ತು ಜೀವನದ ನಿಜವಾದ ಯಶಸ್ಸು: ಬದುಕಿಗೆ ಬೆಳಕಾಗುವ ಜೀವನ ಮೌಲ್ಯಗಳು
ಅಂಗವಿಕಲ ಮತದಾರನ ಮನೆ ಬಾಗಿಲಿಗೆ ತೆರಳಿ ವಿಚಾರಣೆ ನಡೆಸಿದ ಚಿಕ್ಕೋಡಿ ಉಪವಿಭಾಗಾಧಿಕಾರಿ ಗೌ. ಸುಭಾಷ ಸಂಪಗಾವಿ
ಕಾಗವಾಡದಲ್ಲಿ ವಸತಿಗೆ ಅಲೆಯುತ್ತಿರುವ ಮಂಗಳಮುಖಿ: ತಕ್ಷಣದ ಪರಿಹಾರಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸೂಚನೆ