ಕೃಷ್ಣರಾಜಪೇಟೆ (ಕಿಕ್ಕೇರಿ): ತಾಲೂಕಿನ ಆನೆಗೊಳ ಗ್ರಾಮದ ಲಕ್ಷ್ಮೀದೇವಿ (ಆನೆಗೊಳಮ್ಮ) ದೇವಸ್ಥಾನದ ಸುತ್ತ ನಿರ್ಮಿಸಲಾಗಿದ್ದ ಕಾಂಪೌಂಡ್ ಅನ್ನು ಏಕಾಏಕಿ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರವಿಕುಮಾರ್ ವಿರುದ್ಧ ಪಂಚಾಯಿತಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರ ಆಕ್ರೋಶ ಹಾಗೂ ಬೇಡಿಕೆಗಳು:
ಸಾರ್ವಜನಿಕರ ದೇಣಿಗೆಯಿಂದ ದೇವಸ್ಥಾನದ ಭದ್ರತೆ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಕಾಂಪೌಂಡ್ ನಿರ್ಮಿಸಲಾಗಿತ್ತು. ಆದರೆ ಯಾವುದೇ ಮುನ್ಸೂಚನೆ ಹಾಗೂ ಮಾಹಿತಿ ನೀಡದೆ ತಡೆಗೋಡೆ ತೆರವುಗೊಳಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ತೆರವುಗೊಳಿಸಲಾದ ಕಾಂಪೌಂಡ್ ಅನ್ನು ತಕ್ಷಣವೇ ಪುನರ್ ನಿರ್ಮಿಸಬೇಕು ಹಾಗೂ ಘಟನೆಗೆ ಸೂಕ್ತ ಕಾರಣ ನೀಡಬೇಕು.

ಕರ್ತವ್ಯ ಲೋಪ ಎಸಗಿರುವ ಪಿಡಿಒ ರವಿಕುಮಾರ್ ಅವರನ್ನು ಅಮಾನತುಗೊಳಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಗಣೇಶ್, ಹರೀಶ್, ಪ್ರದೀಪ್, ನಾಗೇಶ್, ಸುರೇಶ್, ಸತೀಶ್, ದಿಲೀಪ್, ಸುನೀಲ್, ಕೌಶಿಕ್, ಸಚ್ಚಿ, ರಾಜಪ್ಪ, ನಾಗೇಂದ್ರ, ರಾಜಣ್ಣ, ಶಾಂತಣ್ಣ, ಪ್ರಸನ್ನ, ನಾಗರಾಜಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು. ವರದಿ : ಶಂಭು ಕಿಕ್ಕೇರಿ
About The Author


More Stories
ಹಾಲು ಉತ್ಪಾದಕರ ಸಂಘದ ಲೆಕ್ಕ ನೀಡಲು ನಿರಾಕರಣೆ: ಕಾರ್ಯದರ್ಶಿ ವಿರುದ್ಧ ಡೇರಿಗೆ ಬೀಗ ಜಡಿದು ಪ್ರತಿಭಟನೆ
ಮಳೆಗಾಗಿ ಮಕ್ಕಳ ಮದುವೆ ಮಾಡಿದ ಕೋಟಹಳ್ಳಿ ಗ್ರಾಮಸ್ಥರು
ಗಂಗೇನಹಳ್ಳಿ ಕೆರೆಗೆ ನೀರು ತುಂಬಿಸುವಂತೆ ಗ್ರಾಮಸ್ಥರ ಆಗ್ರಹ: ಹೇಮಾವತಿ ಇಲಾಖೆಗೆ ಮನವಿ