ಶಿರಸಿ: ಕರ್ನಾಟಕ ಸರ್ಕಾರದ ಐಟಿ-ಬಿಟಿ ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಹಯೋಗದಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಮಂಗಳೂರು ಟೆಕ್ನೋವಾನ್ಜಾ-2026’ ಸಮಾವೇಶದಲ್ಲಿ ಶಿರಸಿ ಮೂಲದ ‘ಪ್ರೊಭಾರತ್ ಟೆಕ್ನಾಲಜೀಸ್’ ಸಂಸ್ಥೆಗೆ ವಿಶೇಷ ಗೌರವ ಲಭಿಸಿದೆ.

ಸರ್ಕಾರದ ‘ಎಲಿವೇಟ್’ ಯೋಜನೆಯ ವಿಜೇತ ಸಂಸ್ಥೆಯಾದ ಪ್ರೊಭಾರತ್‌ನ ಸಂಸ್ಥಾಪಕ ಹಾಗೂ ಸಿಇಒ (ಹುಳಗೋಳದ) ಪ್ರವರ್ ಹೆಗಡೆ ಅವರನ್ನು ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತಾ ಅವರು ವೇದಿಕೆಯಲ್ಲಿ ಸನ್ಮಾನಿಸಿದರು.
ತಾಂತ್ರಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳು:
ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸ್ವದೇಶಿ 3D ಪ್ರಿಂಟಿಂಗ್ ಯಂತ್ರವನ್ನು ಪ್ರದರ್ಶಿಸಲಾಯಿತು. ಈ ಯಂತ್ರವು 3D ಮಾದರಿ ಮುದ್ರಣದ ಜೊತೆಗೆ ಮುದ್ರಿತ ವಿದ್ಯುನ್ಮಂಡಲಗಳ (ಸರ್ಕ್ಯೂಟ್ ಬೋರ್ಡ್) ಪ್ರಾಯೋಗಿಕ ಮಾದರಿ ನಿರ್ಮಾಣ ಹಾಗೂ ಉತ್ಪಾದನೆಯನ್ನು ಒಂದೇ ವೇದಿಕೆಯಲ್ಲಿ ನಿರ್ವಹಿಸುವ ಶಕ್ತಿ ಹೊಂದಿದೆ.

3D ಪ್ರಿಂಟಿಂಗ್, ಸ್ಕ್ಯಾನಿಂಗ್, ವಿನ್ಯಾಸಕರು ಹಾಗೂ ಗ್ರಾಹಕರನ್ನು ಬೆಸೆಯುವ ಡಿಜಿಟಲ್ ಜಾಲವನ್ನು ರೂಪಿಸುತ್ತಿದ್ದು, ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ವಿನ್ಯಾಸ ವ್ಯವಸ್ಥೆ ಅಳವಡಿಸುವ ಯೋಜನೆಯಿದೆ.
“ಶಿರಸಿಯಂತಹ ಗ್ರಾಮೀಣ ಭಾಗದಿಂದ ಜಾಗತಿಕ ಮಟ್ಟದ ಸ್ವದೇಶಿ ತಂತ್ರಜ್ಞಾನ ರೂಪಿಸಲು ಸರ್ಕಾರದ ‘ಎಲಿವೇಟ್’ ಹಾಗೂ ‘ಬಿಯಾಂಡ್ ಬೆಂಗಳೂರು’ ವೇದಿಕೆಗಳು ದೊಡ್ಡ ಶಕ್ತಿ ನೀಡಿವೆ. ಭಾರತೀಯ ಉತ್ಪಾದನಾ ರಂಗಕ್ಕೆ ಅಗತ್ಯವಿರುವ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ಸ್ವದೇಶಿಯಾಗಿ ರೂಪಿಸುವುದೇ ನಮ್ಮ ಧ್ಯೇಯ.” – ಪ್ರವರ್ ಹೆಗಡೆ, ಸಿಇಒ, ಪ್ರೊಭಾರತ್ ಟೆಕ್ನಾಲಜೀಸ್
ಕಾರ್ಯಕ್ರಮ ಹಾಗೂ ಪ್ರದರ್ಶನದಲ್ಲಿ ಸಂಸ್ಥೆಯ ಪ್ರಮುಖರಾದ ವಿಶ್ವ ಹೆಗಡೆ, ರಿತೇಶ್‌ರಾಜ್ ಹಿರಾಸ್ಕರ್ ಹಾಗೂ ನಿತಿನ್ ನಾಯ್ಕ ಉಪಸ್ಥಿತರಿದ್ದರು.
About The Author


More Stories
‘ಕಂಸವಧೆ’ ತಾಳಮದ್ದಳೆಗೆ ಪ್ರೇಕ್ಷಕರು ಸಮ್ಮೋಹಿತ; ಕಲಾವಿದ ಡಾ. ಗಣಪತಿ ಭಟ್ಟ ಸಂಕದಗುಂಡಿ ಅವರಿಗೆ ಸನ್ಮಾನ
ಶಿರಸಿಯಲ್ಲಿ ಅಕ್ಟೋಬರ್ 3ಕ್ಕೆ ‘ಕಂಸವಧೆ’ ತಾಳಮದ್ದಳೆ
ಕರಾವಳಿ-ಮಲೆನಾಡು ಸಮಸ್ಯೆಗಳ ಪರಿಹಾರಕ್ಕೆ ರಾಜಕೀಯ ಪಕ್ಷಗಳ ಒಗ್ಗಟ್ಟಿನ ಹೋರಾಟ ಅಗತ್ಯ: ಚಂದ್ರಕಾಂತ ಕೊಚರೇಕರ