ತಿರುಮಲ: ಕರ್ನಾಟಕದ ವಿವಿಧ ಭಾಗಗಳ ಹಿಂದುಳಿದ ಹಾಗೂ ಎಸ್‌ಸಿ–ಎಸ್‌ಟಿ ಸಮುದಾಯಗಳನ್ನು ಪ್ರತಿನಿಧಿಸುವ 19 ಬ್ರಹ್ಮಚಾರಿ ಪೀಠಾಧೀಶರು ಮತ್ತು ಸ್ವಾಮೀಜಿಗಳು ಸೆಪ್ಟೆಂಬರ್ 29ರಂದು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ವಿವಿಧ ಗುರುಪೀಠಗಳ ಆಧ್ಯಾತ್ಮಿಕ ನಾಯಕರನ್ನು ಒಂದೇ ಯಾತ್ರೆಯಲ್ಲಿ ಒಗ್ಗೂಡಿಸಿದ ಈ ಭೇಟಿ ಸಾಮಾಜಿಕ ಮತ್ತು ಆಧ್ಯಾತ್ಮಿಕ ಏಕತೆಗೆ ವಿಶೇಷ ಸಾಕ್ಷಿಯಾಯಿತು.
ಟಿಟಿಡಿ (TTD) ಮಂಡಳಿ ಸದಸ್ಯ ಎಸ್. ನರೇಶ್ ಕುಮಾರ್ ಅವರ ವಿಶೇಷ ಕಾಳಜಿ ಹಾಗೂ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ಸಹಕಾರದಿಂದ ಈ ಸುಗಮ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು. ಟಿಟಿಡಿ ಇಒ ಮುಧದ್ ರವಿಚಂದ್ರ ಹಾಗೂ ಅಧಿಕಾರಿಗಳು ದರ್ಶನದ ಸಮಯ ಹಾಗೂ ಪ್ರವೇಶ ವ್ಯವಸ್ಥೆಯನ್ನು ಸಮನ್ವಯಗೊಳಿಸಿದರು.
ಸಾಮಾಜಿಕ ಹಾಗೂ ಆಧ್ಯಾತ್ಮಿಕ ಮಹತ್ವ:
ದರ್ಶನ ಪಡೆದ ಪೀಠಾಧೀಶರು ತಮ್ಮ ತಮ್ಮ ಮಠಗಳ ಮೂಲಕ ಶಿಕ್ಷಣ, ಸಾಮಾಜಿಕ ಸೇವೆ, ಧಾರ್ಮಿಕ ಚಟುವಟಿಕೆ ಹಾಗೂ ದುರ್ಬಲ ವರ್ಗಗಳ ಸಬಲೀಕರಣದಲ್ಲಿ ನಿರತರಾಗಿದ್ದಾರೆ.

ಈ ಗುರುಪೀಠಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿರದೆ, ಶಿಕ್ಷಣ ಮತ್ತು ಸಾಮಾಜಿಕ ಸಮಾನತೆಯ ಕೇಂದ್ರಗಳಾಗಿವೆ. ಎಲ್ಲಾ ಸಮುದಾಯದ ಸ್ವಾಮೀಜಿಗಳು ಒಂದಾಗಿ ಶ್ರೀವಾರಿಯ ದರ್ಶನ ಪಡೆದಿರುವುದು ಸಾಮಾಜಿಕ ಸಾಮರಸ್ಯದ ಸಂದೇಶ ನೀಡಿದೆ ಎಂದು ನರೇಶ್ ಕುಮಾರ್ ತಿಳಿಸಿದರು.
“ವಿವಿಧ ಸಮುದಾಯಗಳ ಗುರುಪೀಠಾಧೀಶರ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವೆಯನ್ನು ಗೌರವಿಸಿ, ಅವರಿಗೆ ತಿರುಮಲ ದರ್ಶನಕ್ಕೆ ಅವಕಾಶ ಕಲ್ಪಿಸಿದ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಹಾಗೂ ಆಡಳಿತ ಮಂಡಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.” – ಎಸ್. ನರೇಶ್ ಕುಮಾರ್, ಟಿಟಿಡಿ ಮಂಡಳಿ ಸದಸ್ಯ
ನಿಯೋಗದಲ್ಲಿದ್ದ ಪ್ರಮುಖ ಪೀಠಾಧೀಶರು: ನಿಯೋಗದಲ್ಲಿ ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಶ್ರೀ ಹಡಪದ ಅಪ್ಪಣ್ಣ ಸ್ವಾಮೀಜಿ, ಶ್ರೀ ದಯಾನಂದಪುರಿ ಸ್ವಾಮೀಜಿ, ಶ್ರೀ ಯಾದವಾನಂದ ಸ್ವಾಮೀಜಿ ಸೇರಿದಂತೆ 19 ಮಠಗಳ ಶ್ರೀಗಳು ಭಾಗವಹಿಸಿದ್ದರು.
About The Author


More Stories
ಜಾಗತಿಕ ಮಾರುಕಟ್ಟೆಗೆ ಕರ್ನಾಟಕದ ಜವಳಿ ಉದ್ಯಮ ಸಂಪರ್ಕ: ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ಸರ್ಕಾರ–ಉದ್ಯಮ ಸಂವಾದ
ಬೆಂಗಳೂರಿನಲ್ಲಿ ಕೊಡಗು ಗೌಡ ಸಮಾಜದ ‘ಕೈಲ್ ಮುಹೂರ್ತ ಜಂಬರ-2026’: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕ ಪೊನ್ನಣ್ಣ ಭಾಗಿ
2047ರ ವಿಕಸಿತ ಭಾರತಕ್ಕೆ ಪ್ರತಿಯೊಬ್ಬರ ಕೊಡುಗೆ ಅಗತ್ಯ: ಸಿಎಸ್ಐಆರ್ ಮುಖ್ಯಸ್ಥೆ ಡಾ. ಎನ್. ಕಲೈಸೆಲ್ವಿ