ಭಟ್ಕಳ: ರಾಷ್ಟ್ರೀಯ ಹೆದ್ದಾರಿ ೬೬ರ ಜಾಲಿ ಕ್ರಾಸ್ ಸಮೀಪ ಸ್ಕೂಲ್ ವ್ಯಾನ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತಾಲೂಕಿನ ಹೆಬ್ಬಳೆ ಹೊನ್ನೆಗದ್ದೆ ನಿವಾಸಿ ಪದ್ಮಾವತಿ ಗೋವಿಂದ ನಾಯ್ಕ (೪೮) ಮೃತಪಟ್ಟ ದುರ್ದೈವಿ.
ಅಕ್ಟೋಬರ್ ೧೮ರಂದು ಮಧ್ಯಾಹ್ನ ಸಂಶುದ್ದೀನ್ ಸರ್ಕಲ್ ಕಡೆಯಿಂದ ಮುರ್ಡೇಶ್ವರದತ್ತ ಸಾಗುತ್ತಿದ್ದ ಅಂಜುಮಾನ್ ಶಾಲೆಗೆ ಸೇರಿದ ವ್ಯಾನ್ ಅನ್ನು ಚಾಲಕ ಇಬ್ರಾಹಿಂ ಖಲೀಫಾ (೬೦) ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಜಾಲಿ ಕ್ರಾಸ್ ಬಳಿ ರಸ್ತೆ ದಾಟಲು ಡಿವೈಡರ್ ಅಂತರದಲ್ಲಿ ನಿಂತಿದ್ದ ಪದ್ಮಾವತಿ ಅವರಿಗೆ ಡಿಕ್ಕಿ ಹೊಡೆದಿದ್ದ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಭಟ್ಕಳ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಮಾದೇವ ನಾಗಪ್ಪ ನಾಯ್ಕ ನೀಡಿದ ದೂರಿನನ್ವಯ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
About The Author


More Stories
ಭಗವದ್ಗೀತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲ ಸಮಸ್ಯೆಗಳನ್ನೂ ಎದುರಿಸಬಹುದು: ರಾಜೇಶ ನಾಯಕ
ಭಟ್ಕಳದಲ್ಲಿ ನಾಲ್ಕನೇ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಿಲಾನ್ಯಾಸ
‘ಸಂಭವಾಮಿ ಯುಗೇ ಯುಗೇ – ಕಮಲಿ ಕಲ್ಯಾಣ’ ನಾಟಕದ ಪೋಸ್ಟರ್ ಬಿಡುಗಡೆ