ಮುಗ್ದುಂ ಕಾಲೋನಿಯಲ್ಲಿ ಘಟನೆ; ಕರ್ತವ್ಯಕ್ಕೆ ಅಡ್ಡಿಪಡಿಸಿ ಬಂಧನದಿಂದ ತಪ್ಪಿಸಿಕೊಂಡ ಆರೋಪಿ ವಿರುದ್ಧ ಪ್ರಕರಣ ದಾಖಲು
ಭಟ್ಕಳ (ಉತ್ತರ ಕನ್ನಡ): ನ್ಯಾಯಾಲಯದ ಆದೇಶದಂತೆ ಬಂಧನ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಆರೋಪಿಯೊಬ್ಬ ಸ್ಥಳದಿಂದ ಪರಾರಿಯಾದ ಘಟನೆ ಭಟ್ಕಳದ ಮುಗ್ದುಂ ಕಾಲೋನಿಯಲ್ಲಿ ನಡೆದಿದೆ.

ಸಿದ್ದಾಪುರದ ಜೆಎಂಎಫ್‌ಸಿ (JMFC) ನ್ಯಾಯಾಲಯದ ಪ್ರಕರಣವೊಂದಕ್ಕೆ (ಸಿ.ಸಿ. ನಂ. 69/2025) ಸಂಬಂಧಿಸಿದಂತೆ, ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆ (NI Act) ಕಲಂ 138ರ ಅಡಿಯಲ್ಲಿ ಆರೋಪಿ ಅಲಿ ಮುರ್ತುಜಾ ಮೆಡಿಕಲ್ ಅಬ್ದುಲ್ ಸತ್ತಾರ್ ವಿರುದ್ಧ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು.

ಈ ಹಿನ್ನೆಲೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಸುರೇಶ್ ರಾಮಪ್ಪ ಕೊರವರ ಹಾಗೂ ಸಿಬ್ಬಂದಿ ಸಂತೋಷ ನಾಯ್ಕ ಅವರು ವಾರಂಟ್‌ನಲ್ಲಿ ನಮೂದಿಸಿದ್ದ ಭಟ್ಕಳದ ಮುಗ್ದುಂ ಕಾಲೋನಿಯ ವಿಳಾಸಕ್ಕೆ ತೆರಳಿದ್ದರು. ಈ ವೇಳೆ ಮನೆಯ ಬಳಿಯೇ ಆರೋಪಿ ಅಲಿ ಮುರ್ತುಜಾ ಪತ್ತೆಯಾಗಿದ್ದಾನೆ.
ತಕ್ಷಣವೇ ಪೊಲೀಸರು ನ್ಯಾಯಾಲಯ ಹೊರಡಿಸಿದ್ದ ವಾರಂಟ್ ಪ್ರತಿಯನ್ನು ತೋರಿಸಿ ಆತನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಆದರೆ, ಆರೋಪಿಯು ಉದ್ದೇಶಪೂರ್ವಕವಾಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸ್ಥಳದಿಂದ ಓಡಿಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ನವೆಂಬರ್ 20ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನ್ಯಾಯಾಲಯದ ವಾರಂಟ್ ಜಾರಿಗೊಳಿಸುವ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅಡ್ಡಿಪಡಿಸಿ ಪರಾರಿಯಾಗಿರುವ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ಗೊಂಡರಕೇರಿಯಲ್ಲಿ ಮಣ್ಣಿನ ಅಕ್ರಮ ಅಗೆಯುವಿಕೆ ಆರೋಪ: 200ಕ್ಕೂ ಹೆಚ್ಚು ಕುಟುಂಬಗಳಿಗೆ ಭೂಕುಸಿತದ ಭೀತಿ!