ಹೊನ್ನಾವರ : ಗುರುವಾರದಂದು ಶ್ರೀ ಸತ್ಯಸಾಯಿ ಕರಿಕಾಣಪರಮೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಅರೇಂಗಡಿಯಲ್ಲಿ ಅನೇಕ ಗಣ್ಯರ ಸಮ್ಮುಖದಲ್ಲಿ ವಾರ್ಷಿಕ ಕ್ರೀಡಾಕೂಟ ಅತ್ಯಂತ ವಿಜ್ರಂಭಣೆಯಿAದ ನಡೆಯಿತು. ಹೊಯ್ಸಳ ಚಾಲುಕ್ಯ ಶಿವಾಜಿ ಮಂದಿರದ ನಾಯಕರ ಮುಂದಾಳತ್ವದಲ್ಲಿ ವಿದ್ಯಾರ್ಥಿಗಳಿಂದ ಮನಮೋಹಕ ಪಥ ಸಂಚಲನ , ಕ್ರೀಡಾ ನಾಯಕನಿಂದ ಮಹನೀಯರಿಗೆ ಕ್ರೀಡಾ ಜ್ಯೋತಿಯ ಹಸ್ತಾಂತರ, ಆಗಮಿಸಿದ ಎಲ್ಲಾ ಗೌರವಾನ್ವಿತರಿಂದ ಧ್ವಜಾರೋಹಣ, ಪ್ರತಿಜ್ಞಾ ಸ್ವೀಕಾರ, ಎಲ್ಲಾ ಗೌರವಾನ್ವಿತ ಮಹನೀಯರನ್ನು ವೇದಿಕೆಗೆ ಆಮಂತ್ರಿಸಿ ಬಂದಿರುವAತಹ ಎಲ್ಲರನ್ನೂ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೈಲಾ ಹೆಗಡೆಯವರು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ನಂತರ ದೀಪ ಬೆಳಗಿಸಿ ವೇದಿಕೆಯ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕ್ರೀಡಾಕೂಟದ ಉದ್ಘಾಟಕರಾಗಿ ಆಗಮಿಸಿದ ಆರ್ ಕೆ ಮೇಸ್ತ ದೈಹಿಕ ನಿರ್ದೇಶಕರು ಎಸ್ ಡಿ ಎಮ್ ಕಾಲೇಜ್ ಹೊನ್ನಾವರ ಇವರು ಕ್ರೀಡಾಪಟುಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು. ಮನೋಜ್ ಜಿ ಕಾರ್ಯದರ್ಶಿಗಳು ಎಸ್ ಎಸ್ ಕೆ ಪಿ ವಿದ್ಯಾ ಸಂಸ್ಥೆ ಇವರು ಮಾತನಾಡಿ ಮೌಲ್ಯದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ನಂತರ ಶೈಕ್ಷಣಿಕ ಮಾರ್ಗದರ್ಶಕರಾದಂತಹ ಎಸ್ ಜೆ ಕೈರನ್ನ ಸರ್ ಅವರು ಮಾತನಾಡಿ ಸಾಧನೆಗೆ ಧೈರ್ಯ ಎಂಬುದು ಮುನ್ನುಡಿಯಾಗಬೇಕು ಎಂಬAತಹ ಪ್ರೇರಣಾದಾಯಕ ನುಡಿಗಳನ್ನಾಡಿದರು. ರಾಮದಾಸ ಆಚಾರಿ ಜಿಲ್ಲಾಧ್ಯಕ್ಷರು ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆ ಗಳು ಉತ್ತರ ಕನ್ನಡ ಇವರು ವಿದ್ಯಾರ್ಥಿಗಳಿಗೆ ಕ್ರಿಕೆಟ್ ಕಿಟ್ಟನ್ನು ನೀಡಿದರು. ವಂದನಾರ್ಪಣೆಯ ನಂತರ ವಿದ್ಯಾರ್ಥಿಗಳು ವಿವಿಧ ಆಟೋಟಗಳಲ್ಲಿ ತಮ್ಮ ಸಾಧನೆಯನ್ನು ಮೆರೆದರು. ಕ್ರೀಡೋತ್ಸವ ಅತ್ಯಂತ ವಿಜ್ರಂಭಣೆಯಿAದ ಮುಕ್ತಾಯಗೊಂಡಿತು.

More Stories
ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಸತ್ಯಸಾಯಿ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ
ಅಳ್ಳಂಕಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ವಿಶೇಷ ಚೇತನರ ದಿನ ಆಚರಿಸಲಾಯಿತು.
ಸೇವೆಯಿಂದಲೇ ಸಂತೃಪ್ತಿ – ಡಾ. ಡಿ. ಎಲ್. ಹೆಬ್ಬಾರ