ಕುಮಟಾ : ಇತ್ತೀಚಿಗೆ ಹೊಳೆಗದ್ದೆ ಶಾಂತಿಕಾ ಪರಮೇಶ್ವರಿ ದೇವಿಯ ಉತ್ಸವ ಸಮಾರಂಭದ ನಿಮಿತ್ತ ಹೊಳೆಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಶಾಂತಿಕಾAಬಾ ಗೆಳೆಯರ ಬಳಗ ಆಯೋಜಿಸಿದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿಗೆ ಮಾದರಿಯಾಗುವ ನಿಟ್ಟಿನಲ್ಲಿ ಗೆಳೆಯರ ಬಳಗ ಪ್ರತಿ ವರ್ಷ ಕಾರ್ಯಕ್ರಮ ಸಂಘಟಿಸಿ ಊರಿಗೆ ಹಬ್ಬದ ರೂಪದಲ್ಲಿ ಆಚರಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೇವಗಿರಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಎಸ್. ಟಿ. ನಾಯ್ಕ ಮಾತನಾಡಿ, ಗೆಳೆಯರ ಬಳಗಕ್ಕೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ. ಅಶೋಕ ಭಂಡಾರಿ ಅವರ ಮಾದರಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಳಗವನ್ನು ಅಭಿನಂದಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ, ಕಲಾವಿದರಿಗೆ ಕೊರತೆ ಇಲ್ಲದ ಊರಿನಲ್ಲಿ ಕಲಾವಿದರಿಗೆ ಸೂಕ್ತ ವೇದಿಕೆ ಒದಗಿಸಿರುವ ಅಪರೂಪದ ಕಾರ್ಯಕ್ರಮ ಇದಾಗಿದೆ ಎಂದರು. ದೇವತಾರಾಧನೆಯ ಜೊತೆಗೆ ಕಲಾರಾಧನೆ ಸಮ್ಮೇಳಿಸಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಆರ್. ನಾಯ್ಕರನ್ನು ಗೆಳೆಯರ ಬಳಗ ಸನ್ಮಾನಿಸಿರುವುದು ಬಳಗದ ಹಿರಿಮೆಗೆ ಗರಿ ಮೂಡಿದಂತಾಗಿದೆ ಎಂದರು.
ಹಳದೀಪುರ ಗ್ರಾಮ ಪಂಚಾಯತ ಉಪಾಧ್ಯಕ್ಷ ಅಜಿತ ನಾಯ್ಕ ಮಾತನಾಡಿ, ಸಾಮಾಜಿಕ, ಸಾಹಿತಿಕ ಕಾರ್ಯಕ್ರಮದ ಮೂಲಕ ದೇವಿಯ ಉತ್ಸವ ಜನರ ಉತ್ಸವವಾಗಿದೆ. ಊರಿನಲ್ಲಿ ನಡೆಯುವ ಇಂತಹ ಕಾರ್ಯಕ್ರಮ ಸಾಮಾಜಿಕ ಬದಲಾವಣೆಗೆ ಬಹುಮುಖ್ಯ ಪಾತ್ರ ವಹಿಸಬಲ್ಲದು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ. ಆರ್. ನಾಯ್ಕರನ್ನು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಪಾಂಡು ಪಟಗಾರ, ದೇವೇಂದ್ರ ಶೇರುಗಾರ, ನಾಗೇಶ ನಾಯ್ಕ,ನವೀನ ನಾಯ್ಕ, ಮಾಜಿ ಸದಸ್ಯರಾದ ಸುರೇಶ ಹರಿಕಂತ್ರ, ರಾಜು ನಾಯ್ಕ, ಉದ್ಯಮಿಗಳಾದ ಸಚಿನ ನಾಯ್ಕ, ಬಾಬಣ್ಣ ಪೈ, ರಾಮದಾಸ ಪೈ, ರೇಲ್ವೆಇಲಾಖೆಯ ಮಹೇಶ ನಾಯ್ಕ, ಗಣೇಶೋತ್ಸವ ಸಮಿತಿಯ ಜೆ.ಕೆ.ನಾಯ್ಕ, ಸಂಪನ್ಮೂಲ ವ್ಯಕ್ತಿ ನಾಗರಾಜ ಪಟಗಾರ, ಗೆಳೆಯರ ಬಳಗದ ಅಧ್ಯಕ್ಷ ಅಶೋಕ ಭಂಡಾರಿ ,ರಾಮ ಮುಕ್ರಿ ಮುಂತಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಿಕ್ಷಕ ಪಿ.ಆರ್.ನಾಯ್ಕ ಸ್ವಾಗತಿಸಿದರೆ, ಶಿಕ್ಷಕ ಸುದೀಶ ನಾಯ್ಕ ವಂದಿಸಿದರು. ಪ್ರೀತೇಶ ಶಾನಭಾಗ ಪ್ರಾರ್ಥಿಸಿದರು. ಶಿಕ್ಷಕ ಸುರೇಶ ನಾಯ್ಕ ನಿರ್ವಹಿಸಿದರು. ನಂತರ ತೆಕ್ಕಟೆ ಕಲಾವಿದರಿಂದ ವಾಚ್ ಮ್ಯಾನ್ ನಾಟಕ ಪ್ರದರ್ಶಿಸಲಾಯಿತು.

More Stories
ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿನಿ ಎನ್.ವಿ. ಇಂಪನಾ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನ
“ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ : ರವಿ ಎಚ್. ನಾಯಕ” 🌿🌍
ಬರ್ಗಿಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಕೊಡೆ ವಿತರಣೆ