ಹೊನ್ನಾವರ: ಫೆಬ್ರವರಿ 18 ರಿಂದ 22ರವರೆಗೆ ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ಹಾಗೂ ಹೊನ್ನಾವರ ಉತ್ಸವ ಸಮಿತಿಯ ಆಶ್ರಯದಲ್ಲಿ “ಹೊನ್ನಾವರಉತ್ಸವ-೨೦೨೬” ನಡೆಯಲಿದೆ ಎಂದು ಉತ್ಸವ ಸಿಂಚನಾ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ ಅಧ್ಯಕ್ಷ ಕೃಷ್ಣಾನಂದ ಭಟ್ ಮಾಹಿತಿ ನೀಡಿದರು.
ಪಟ್ಟಣದ ಖಾಸಗಿ ಹೊಟೆಲನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಣಿ ಚೆನ್ನಬೈರಾದೇವಿ ವೇದಿಕೆಯಲ್ಲಿ 5 ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಿದ್ದು, ಸ್ಥಳಿಯ ಕಲಾವಿದರ ಜೊತೆ ನಾಡಿನ ವಿವಿಧಡೆಯ ಕಲಾ ತಂಡಗಳು ಆಗಮಿಸಲಿದೆ. ಕಳೆದ ಹಲವು ವರ್ಷದಿಂದ ಸಾಂಸ್ಕ್ರತಿಕ ಕಾರ್ಯಕ್ರಮದ ಜೊತೆ ಹಲವು ಕಲಾವಿದರನ್ನು ಪೊತ್ಸಾಹಿಸುತ್ತಾ ಬಂದಿರುವ ಸಂಘಟನೆಯು ಈ ಬಾರಿ ಹೊನ್ನಾವರದ ಸ್ಥಳಿಯ ಪ್ರತಿಭೆಗಳಿಗೆ ಪೊತ್ಸಾಹ ನೀಡುವ ಜೊತೆ ನಾಡಿನ ಪ್ರಸಿದ್ದ ಕಲಾವಿದರನ್ನು ಕರೆ ತಂದು ಸಾಂಸ್ಕೃತಿಕ ಹಬ್ಬ ಆಚರಿಸಲು ಸಜ್ಜಾಗಿದೆ.
ಉತ್ಸವ ಸಮಿತಿಯ ಗೌರವಾಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ ಕಳೆದ ವರ್ಷದ ಯಶಸ್ಸಿನ ಸ್ಫೂರ್ತಿಯಿಂದ ಈ ಬಾರಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ರಾಜಕೀಯ ಭೇದವಿಲ್ಲದೆ ಪಕ್ಷಾತೀತವಾಗಿ ಈ ಉತ್ಸವವನ್ನು ಯಶಸ್ವಿಗೊಳಿಸುವುದು ನಮ್ಮ ಉದ್ದೇಶ. ಸ್ಥಳೀಯ ಕಲೆಗಳ ಅನಾವರಣದ ಜೊತೆಗೆ, ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ಈ ವೇದಿಕೆಯು ನಮ್ಮ ಭಾಗದ ಬೇಡಿಕೆಗಳ ಈಡೇರಿಕೆಗೂ ಧ್ವನಿಯಾಗಲಿದೆ ಎಂದರು.
ಸಮಿತಿ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದು, ಹಿರಿಯ ಕಲಾವಿದರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ಮೂಡಿಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಶಿವರಾಜ್ ಮೇಸ್ತ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಬೇರೆ ಊರುಗಳಿಗೆ ಹೋಗುವ ಅನಿವಾರ್ಯತೆ ತಪ್ಪಿಸಿ ಹೊನ್ನಾವರದಲ್ಲೇ ದೊಡ್ಡ ಮಟ್ಟದ ವೇದಿಕೆ ನಿರ್ಮಿಸಲಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಸಂಘಟಕ ಶ್ರೀರಾಮ ಜಾದುಗಾರ ಮಾತನಾಡಿ
ಮೊದಲ ದಿನ ಜಯಕರ್ನಾಟಕ ಜನಪರ ವೇದಿಕೆಯಿಂದ ಮ್ಯೂಸಿಕಲ್ ನೈಟ್ ಹಾಗೂ ಸರಿಗಮಪ ಕಲಾವಿದರಿಂದ ಗಾಯನ, ಎರಡನೇ ದಿನ ಲಿಟಲ್, ಮಿಸ್ ಹಾಗೂ ಮಿಸಸ್ ಕರಾವಳಿ ಪ್ಯಾಷನ್ ಶೋ. ತೀರ್ಪುಗಾರರಾಗಿ ಚಿತ್ರನಟಿಯರು ಹಾಗೂ ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ, ಮೂರನೇ ದಿನ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಅಪ್ಪಣ್ಣ ಇವೆಂಟ್ಸ್ ತಂಡದಿಂದ ಮನರಂಜನೆ, ಕಾಮಿಡಿ ಕಿಲಾಡಿಗಳು ತಂಡ ಹಾಗೂ ಡಿ.ಕೆ.ಡಿ ಖ್ಯಾತಿಯ ನೃತ್ಯ ಪಟುಗಳ ಪ್ರದರ್ಶನ, ನಾಲ್ಕನೇ ದಿನ ಮ್ಯೂಸಿಕಲ್ ನೈಟ್ ಹಾಗೂ ವಿಶೇಷ ಆಕರ್ಷಣೆಯಾಗಿ ‘ಫೈರ್ ಡ್ಯಾನ್ಸ್’.
ಐದನೇ ದಿನ ಕಂಬದ ರಂಗಯ್ಯ, ನಾದಿರಾಬಾನು ಮತ್ತು ಪಲ್ಲವಿ ಪ್ರಭು ತಂಡದಿಂದ ಮನರಂಜನೆ ನಡೆಯಲಿದೆ.
ಪತ್ರಿಕಾಗೊಷ್ಠಿಯಲ್ಲಿ ಜಯಕರ್ನಾಟಕ ಸಂಘಟನೆಯ ಪ್ರದೀಪ ಶೆಟ್ಟಿ, ಸಂಘಟಕರಾದ ವಿನಾಯಕ ಶೆಟ್ಟಿ, ನವೀನ ಹಳದಿಪುರ, ಕೃಷ್ಣ ಹರಿಜನ, ಸಂದೇಶ ಶೆಟ್ಟಿ, ಬಾಲು ಭಂಡಾರಿ, ಮೋಹನ ಆಚಾರಿ, ಕೇಶವ ಮೇಸ್ತ, ಮಂಜುನಾಥ್ ಭಂಡಾರಿ, ಶ್ರೀನಿವಾಸ ನಾಯ್ಕ ಮತ್ತಿತರು ಇದ್ದರು.

More Stories
ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರತಿಷ್ಠಿತ ರಾಷ್ಟ್ರೀಯ ಶಾಲಾ ಪ್ರಶಸ್ತಿಯನ್ನು ಗಳಿಸಿದೆ.
ಡಾ. ಜಿ.ಎಸ್. ಹೆಗಡೆ ಅವರಿಗೆ ಭವ್ಯ ನಾಗರಿಕ ಸನ್ಮಾನ
ಹೊನ್ನಾವರದಲ್ಲಿ ಸೂಪರ್ ಮಾರ್ಕೆಟ್ ಕಳ್ಳತನ: 48 ಗಂಟೆಯಲ್ಲೇ ಆರೋಪಿತ ಬಂಧನ