ಮುರುಡೇಶ್ವರ (ಜುಲೈ 20): ಇಲ್ಲಿನ ಬೀನಾ ವೈದ್ಯ ಪಿಯು ಹಾಗೂ ಪದವಿ ಕಾಲೇಜಿನಲ್ಲಿ ಎನ್‌ಸಿಸಿ (ಓಅಅ) ರ‍್ಯಾಂಕಿAಗ್ ಮತ್ತು ಬ್ಯಾಡ್ಜ್ ಪ್ರದಾನ ಸಮಾರಂಭವು ಅತ್ಯಂತ ವಿಜೃಂಭಣೆಯಿAದ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ಸೇನೆಯ ನಿವೃತ್ತ ಪ್ಯಾರಾಟ್ರೂಪರ್ (ಕಮಾಂಡೋ) ಶ್ರೀ ಹರೀಶ್ ಮಂಜುನಾಥ್ ನಾಯ್ಕ್ ಅವರು ಎನ್‌ಸಿಸಿ ಕೆಡೆಟ್‌ಗಳಿಗೆ ದೇಶಸೇವೆ, ಶಿಸ್ತು, ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನದ ಮಹತ್ವವನ್ನು ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಅವರು ಸಲ್ಲಿಸಿದ ಅಮೋಘ ಸೇವೆಯನ್ನು ಗೌರವಿಸಿ, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕೆಡೆಟ್‌ಗಳಿಗೆ ರ‍್ಯಾಂಕಿAಗ್ ಪ್ರದಾನ ಮತ್ತು ಹಿರಿಯರಿಗೆ ವಿದಾಯ
ಸಮಾವೇಶದಲ್ಲಿ ಅರ್ಹತೆ ಮತ್ತು ಸಾಧನೆಯ ಆಧಾರದ ಮೇಲೆ ಆಯ್ಕೆಯಾದ ಎನ್‌ಸಿಸಿ ಕೆಡೆಟ್‌ಗಳಿಗೆ ವಿವಿಧ ರ‍್ಯಾಂಕಿAಗ್‌ಗಳು ಹಾಗೂ ಬ್ಯಾಡ್ಜ್ಗಳನ್ನು ಪ್ರದಾನ ಮಾಡಲಾಯಿತು. ತಮ್ಮ ಶಿಸ್ತು, ನಾಯಕತ್ವ, ಸೇವಾ ಮನೋಭಾವ ಹಾಗೂ ಎನ್‌ಸಿಸಿಯಲ್ಲಿ ತೋರಿದ ಅತ್ಯುತ್ತಮ ಸಾಧನೆಗಾಗಿ ಕೆಡೆಟ್‌ಗಳನ್ನು ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಎನ್‌ಸಿಸಿಯ ಹಿರಿಯ ಕೆಡೆಟ್‌ಗಳ ಸೇವೆ, ಸಮರ್ಪಣೆ ಹಾಗೂ ಸಾಧನೆಯನ್ನು ಗೌರವಿಸುವ ಉದ್ದೇಶದಿಂದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ತಮ್ಮ ಎನ್‌ಸಿಸಿ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿರಿಯ ಕೆಡೆಟ್‌ಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಲಾಯಿತು.
“ವಿದ್ಯಾರ್ಥಿ ದೆಸೆಯಲ್ಲೇ ಶಿಸ್ತು ಮತ್ತು ದೇಶಪ್ರೇಮವನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ಯುವಕನ ಕರ್ತವ್ಯ. ಎನ್‌ಸಿಸಿ ಅದಕ್ಕೆ ಅತ್ಯುತ್ತಮ ವೇದಿಕೆಯಾಗಿದೆ.”
ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಎಜುಕೇಷನಲ್ ಟ್ರಸ್ಟ್ನ ಟ್ರಸ್ಟಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪುಷ್ಪಲತಾ ಮಂಕಾಳು ವೈದ್ಯ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಯೀಮ್ ಗೋರಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಶ್ರೀ ವಿ. ಡಿ. ಮೊಗೇರ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಹರಸಿದರು.
ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ, ಎನ್‌ಸಿಸಿ ಅಧಿಕಾರಿಗಳು, ಕೆಡೆಟ್‌ಗಳು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

More Stories
ರೌಡಿ ಶೀಟರ್ ಜಗದೀಶ ಮೊಗೇರ ಉತ್ತರ ಕನ್ನಡ ಜಿಲ್ಲೆಯಿಂದ 6 ತಿಂಗಳು ಗಡಿಪಾರು!
ನಿಲ್ಲದ ಅಕ್ರಮ ಕಸ ವಿಲೇವಾರಿ: ಗ್ರಾಮಸ್ಥರ ಕೈಗೆ ಸಿಕ್ಕ ಕೋಳಿ ತ್ಯಾಜ್ಯ ವಾಹನ
ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ‘ಗುರು ಪೂರ್ಣಿಮಾ’ ಆಚರಣೆ